»   » ರೆಬೆಲ್ ಸ್ಟಾರ್ ಅಂಬರೀಶ್ ತಂಟೆಗೆ ಬಂದ್ರೆ...ಹುಷಾರ್..!

ರೆಬೆಲ್ ಸ್ಟಾರ್ ಅಂಬರೀಶ್ ತಂಟೆಗೆ ಬಂದ್ರೆ...ಹುಷಾರ್..!

Posted By:
Subscribe to Filmibeat Kannada

ಕನ್ನಡ ನಿರ್ಮಾಪಕರು ಮತ್ತು ಕಲಾವಿದರ ಜಟಾಪಟಿ ಜೋರಾಗಿದೆ. ಕಳೆದ 13 ದಿನಗಳಿಂದ 'ಕಲಾವಿದರು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ' ಅನ್ನುವ ಕಾರಣಕ್ಕೆ ನಿರ್ಮಾಪಕರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಧರಣಿ ನಡೆಸುತ್ತಿದ್ದಾರೆ. ಮೊನ್ನೆಯಿಂದ ಉಪವಾಸ ಸತ್ಯಾಗ್ರಹ ಕೂಡ ಕೈಗೊಂಡಿದ್ದಾರೆ.

ಈ ನಡುವೆ ಕಲಾವಿದರ ಸಂಘ ಮತ್ತು ನಿರ್ಮಾಪಕರ ಸಂಘದ ಮಧ್ಯೆ ಪ್ರತಿಷ್ಠೆಯ ಸಮರ ಶುರುವಾಗಿದೆ. 'ಕಲಾವಿದರ ಸಂಘದ ಅಧ್ಯಕ್ಷ ರೆಬೆಲ್ ಸ್ಟಾರ್ ಅಂಬರೀಶ್ ವಿರುದ್ಧ ವಾಗ್ವಾದ ನಡೆಸಿದ ನಿರ್ಮಾಪಕರನ್ನ ಸಸ್ಪೆಂಡ್ ಮಾಡುವವರೆಗೂ ಸಮಸ್ಯೆ ಪರಿಹಾರ ಸಾಧ್ಯವಿಲ್ಲ' ಅಂತ ಕಲಾವಿದರ ಸಂಘ ಹೊಸ ರಾಗ ಎಳೆದಿದೆ.

ನಿರ್ಮಾಪಕರ ವರ್ತನೆ ಕಂಡ ಕಲಾವಿದರ ಸಂಘದ ಉಪಾಧ್ಯಕ್ಷ ರಾಕ್ ಲೈನ್ ವೆಂಕಟೇಶ್ ಮತ್ತು ಹಿರಿಯ ನಟ ದೊಡ್ಡಣ್ಣ ಸಿಡಿದೆದ್ದಿದ್ದಾರೆ. ಅಸಲಿಗೆ ಈಗ ಭುಗಿಲೆದ್ದಿರುವ ಹೊಸ ರಗಳೆಯ ಸಂಪೂರ್ಣ ವೃತ್ತಾಂತ ಇಲ್ಲಿದೆ. ಮುಂದೆ ಓದಿ.....

ರೆಬೆಲ್ ಸ್ಟಾರ್ ಅಂಬರೀಶ್ ಪರ ಕಲಾವಿದರ ಸಂಘ

ಕನ್ನಡ ಚಿತ್ರರಂಗದ ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ಅವಮಾನ ಆಗಿದೆ. ಅನೇಕ ನಿರ್ಮಾಪಕರು ಅಂಬರೀಶ್ ಅವರಿಗೆ ಅಪಮಾನ ಮಾಡಿದ್ದಾರೆ. ಅಂಥ ನಿರ್ಮಾಪಕರನ್ನ, ನಿರ್ಮಾಪಕರ ಸಂಘ ಸಸ್ಪೆಂಡ್ ಮಾಡುವವರೆಗೂ ಸಮಸ್ಯೆ ಪರಿಹಾರ ಸಾಧ್ಯವಿಲ್ಲ ಅಂತ ಮಂಡ್ಯದ ಗಂಡು ಅಂಬರೀಶ್ ಪರ ಇಡೀ ಕಲಾವಿದರ ಸಂಘ ನಿಂತಿದೆ. [ಧರಣಿ ನಿರತ ನಿರ್ಮಾಪಕರ ಭವಿಷ್ಯ ಇಂದು ಅಂಬರೀಷ್ ಕೈಯಲ್ಲಿ!]

ಸಿಡಿದೆದ್ದ ರಾಕ್ ಲೈನ್ ವೆಂಕಟೇಶ್.!

'ಅಂಬರೀಶ್ ಅವರಿಗೆ ಅವಮಾನ ಆಗಿದೆ. ಡಾ.ರಾಜ್ ಕುಮಾರ್ ಅಂತೆ ಅಂಬರೀಶ್ ಕೂಡ ಹಿರಿಯರು. ಯಾವುದೇ ವಿವಾದ ಆಗಲಿ, ಸಮಸ್ಯೆ ಆಗಲಿ, ಎಲ್ಲಾದಕ್ಕೂ ಪರಿಹಾರ ನೀಡುತ್ತಾ ಬಂದಿದ್ದಾರೆ. ಅಂಥವರಿಗೆ ಮರ್ಯಾದೆ ಕೊಡಲಿಲ್ಲ ಅಂದ್ರೆ, ನಿರ್ಮಾಪಕರ ಸಮಸ್ಯೆ ಪರಿಹಾರ ಹೇಗೆ ಸಾಧ್ಯ ಅಂತ ಕಲಾವಿದರ ಸಂಘದ ಉಪಾಧ್ಯಕ್ಷ ರಾಕ್ ಲೈನ್ ವೆಂಕಟೇಶ್ ಖಾರವಾಗಿ ನುಡಿದಿದ್ದಾರೆ. ಅಂಬಿ ವಿರುದ್ಧ ವಾಗ್ವಾದ ನಡೆಸಿದ ನಿರ್ಮಾಪಕರನ್ನು ಸಸ್ಪೆಂಡ್ ಮಾಡುವವರೆಗೂ ಸಂಧಾನ ಸಾಧ್ಯ ಇಲ್ಲ ಅಂತಲೂ ರಾಕ್ ಲೈನ್ ವೆಂಕಟೇಶ್ ಸ್ಪಷ್ಟ ಪಡಿಸಿದ್ದಾರೆ. [ಇಂದಿನಿಂದ ನಿರ್ಮಾಪಕರ ಸರಣಿ ಉಪವಾಸ ಸತ್ಯಾಗ್ರಹ]

ಹಿರಿಯ ನಟ ದೊಡ್ಡಣ್ಣ ಗರಂ

ಅಂಬರೀಶ್ ಅವರಿಗೆ ಅಪಮಾನ ಮಾಡಿರುವ ಬಗ್ಗೆ ಹಿರಿಯ ನಟ ದೊಡ್ಡಣ್ಣ ಕೂಡ ಗುಡುಗಿದ್ದಾರೆ. ''ನಿರ್ಮಾಪಕರೆಲ್ಲಾ ಸತ್ಯಾಗ್ರಹ ಕೂತಿದ್ದಾರೆ ಅಂತ ನಟಿ ತಾರಾ, ಜಗ್ಗೇಶ್ ಎಲ್ಲಾ ಅಂಬರೀಶ್ ಅವರನ್ನ ಭೇಟಿ ಮಾಡಿ ಚರ್ಚೆ ಮಾಡಿದಾಗ, ಸಮಸ್ಯೆ ಬಗೆಹರಿಸುತ್ತೇವೆ ಅಂತ ಅಂಬರೀಶ್ ಮೀಟಿಂಗ್ ಕರೆದಿದ್ದರು. ಡಾ.ರಾಜ್ ನಂತ್ರ ಜವಾಬ್ದಾರಿಯುತ ಸ್ಥಾನದಲ್ಲಿ ನಾವು ನೋಡುತ್ತಿರುವುದು ಅಂಬರೀಶ್ ಅವರನ್ನ. ಅಂಥವರಿಗೆ ಅವಮಾನ ಮಾಡಿದ್ರೆ ಹೇಗೆ? ಅಂಥ ನಿರ್ಮಾಪಕರ ವಿರುದ್ಧ ಕ್ರಮ ಕೈಗೊಳ್ಳೋದಿಲ್ವಾ ಅಂತ ಎಲ್ಲಾ ಕಲಾವಿದರೂ ಕೇಳುತ್ತಿದ್ದಾರೆ. ಸಾವಧಾನದಿಂದ ಕೂತು ಬಗೆಹರಿಸಿಕೊಳ್ಳಬೇಕಿತ್ತು. ಅದು ಬಿಟ್ಟು ವಾಗ್ವಾದ ಮಾಡೋದು ಸರಿಯಲ್ಲ.'' ಅಂತ ದೊಡ್ಡಣ್ಣ ಹೇಳಿದ್ದಾರೆ. [ಹೊಟ್ಟೆಪಾಡಿಗಾಗಿ ಬೀದಿಗಿಳಿದ ಕನ್ನಡ ನಿರ್ಮಾಪಕರು]

ಅಸಲಿಗೆ ಆಗಿದ್ದೇನು?

ಕಳೆದ ಭಾನುವಾರ ಫಿಲ್ಮ್ ಚೇಂಬರ್ ನಲ್ಲಿ ಕಲಾವಿದರ ಸಂಘದ ಮಹತ್ವದ ಸಭೆ ಇತ್ತು. ಸಭೆಗೆ ಅಂಬರೀಶ್ ತಡವಾಗಿ ಆಗಮಿಸಿದರು. ಇನ್ನೂ ಸಭೆಗೆ ಸ್ಟಾರ್ ಕಲಾವಿದರು ಗೈರು ಹಾಜರಾಗಿದ್ದರು. ಆದ್ದರಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳದೇ, ಸಭೆ ವಿಫಲವಾಯ್ತು. [ಅಂಬಿ ಮಾತಿಗೆ 'ಇವರಿಂದ' ಕವಡೆ ಕಾಸಿನ ಕಿಮ್ಮತ್ತಿಲ್ಲ]

ಅಂಬರೀಶ್ V/S ನಿರ್ಮಾಪಕರು

ಈ ನಡುವೆ ಅಂಬರೀಶ್ ಮತ್ತು ನಿರ್ಮಾಪಕರ ಮಧ್ಯೆ ನಡೆಯುತ್ತಿದ್ದ ಮಾತುಕತೆ ಕೂಡ ಎಲ್ಲೆ ಮೀರಿತು. ''ಈಗ ಪ್ರತಿಭಟನೆ ಮಾಡುತ್ತಿರುವವರ ಪೈಕಿ ಎಷ್ಟು ಜನ ನಿರ್ಮಾಪಕರಿದ್ದೀರಾ'' ಅಂತ ಅಂಬರೀಶ್ ಪ್ರಶ್ನೆ ಮಾಡಿದರು. ಇದಕ್ಕೆ ರೊಚ್ಚಿಗೆದ್ದ ನಿರ್ಮಾಪಕರು, ''ನೀವೀಗ ಎಷ್ಟು ಚಿತ್ರದಲ್ಲಿ ಹೀರೋ ಆಗಿ ಆಕ್ಟ್ ಮಾಡುತ್ತಿದ್ದೀರಾ'' ಅಂತ ಮಾತಿಗೆ ಮಾತು ಬೆಳೆಸಿದರು. [ನಿರ್ಮಾಪಕರು ರೊಚ್ಚಿಗೇಳುವುದಕ್ಕೆ 'ಇವರುಗಳೇ' ಕಾರಣ.!]

ನಿರ್ಮಾಪಕರ ಖಡಕ್ ಹೇಳಿಕೆ

''ಇಲ್ಲಿ ಕೂತಿರುವವರೆಲ್ಲೂ ನಿರ್ಮಾಪಕರೇ. ಒಂದು ಸಿನಿಮಾ ಮಾಡಲಿ, ಎಲ್ಲರೂ ನಿರ್ಮಾಪಕರೇ. ಎಲ್ಲರೂ ಸರ್ಟಿಫಿಕೇಟ್ ಇಟ್ಕೊಂಡು ನಾನು ಈ ಸಿನಿಮಾ ಮಾಡಿದ್ದೀನಿ ಅಂತ ಓಡಾಡೋಕೆ ಆಗಲ್ಲ. ಎಷ್ಟೋ ನಿರ್ಮಾಪಕರು ಬೀದಿಗೆ ಬಿದ್ದಿದ್ದಾರೆ. ಕಲಾವಿದರ ಬ್ಯಾಂಕ್ ಬ್ಯಾಲೆನ್ಸ್ ಚೆನ್ನಾಗಿದ್ದರೆ ಸಾಕಾ? ಇಂದು ಎಷ್ಟೋ ಕಲಾವಿದರು ಬಂದಿಲ್ಲ ಅವರೆಲ್ಲರಿಗೂ ನಮ್ಮ ಕಡೆಯಿಂದ ಧಿಕ್ಕಾರ'' ಅಂತ ನಿರ್ಮಾಪಕ ಜಯಸಿಂಹ ಮುಸುರಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

ಅಂಬರೀಶ್ ವಿರುದ್ಧ ಧಿಕ್ಕಾರ...ಧಿಕ್ಕಾರ....

ಇಷ್ಟೆಲ್ಲಾ ರಾದ್ಧಾಂತ ಆಗಿ ಸಭೆ ವಿಫಲವಾಗಿದ್ದಕ್ಕೆ ರೆಬೆಲ್ ಸ್ಟಾರ್ ಅಂಬರೀಶ್ ವಿರುದ್ಧ ನಿರ್ಮಾಪಕರು ಧಿಕ್ಕಾರ ಕೂಗಿದರು. [''ರೆಬೆಲ್ ಸ್ಟಾರ್ ಅಂಬರೀಶ್ ಗೆ ಧಿಕ್ಕಾರ...ಧಿಕ್ಕಾರ...'']

ನಿರ್ಮಾಪಕರ ಸಮಸ್ಯೆ ಏನು?

ಖಾಸಗಿ ವಾಹಿನಿಗಳು ಕನ್ನಡ ಚಿತ್ರಗಳ ಸ್ಯಾಟೆಲೈಟ್ ಹಕ್ಕುಗಳನ್ನ ಕೊಂಡುಕೊಳ್ಳುತ್ತಿಲ್ಲ. ಆದರೂ, ಅದೇ ವಾಹಿನಿಗಳಲ್ಲಿ ಸ್ಟಾರ್ ನಟರು ರಿಯಾಲಿಟಿ ಶೋಗಳನ್ನ ನಡೆಸಿಕೊಡುತ್ತಿದ್ದಾರೆ. ರಿಯಾಲಿಟಿ ಶೋಗಳಿಂದ ಪ್ರೇಕ್ಷಕರು ಚಿತ್ರಮಂದಿರದತ್ತ ಮುಖ ಮಾಡುತ್ತಿಲ್ಲ. ನಿರ್ಮಾಪಕರು ಲಾಸ್ ನಲ್ಲಿದ್ದಾರೆ. ಕಲಾವಿದರು ನಿರ್ಮಾಪಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಅಂತ ನಿರ್ಮಾಪಕರ ಸಂಘ ಧರಣಿ ನಡೆಸುತ್ತಿದೆ.

English summary
Now its Artists Association v/s Producers Association in KFCC. Artists Association compels Producers Association to suspend those producers who insulted Actor Ambareesh during the meeting held on June 7th in KFCC.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada