»   » ಪವರ್ ಸ್ಟಾರ್ ಪುನೀತ್ ಇಂಟರೆಸ್ಟಿಂಗ್ ಸಂಗತಿಗಳು

ಪವರ್ ಸ್ಟಾರ್ ಪುನೀತ್ ಇಂಟರೆಸ್ಟಿಂಗ್ ಸಂಗತಿಗಳು

By: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಯಾರಾದ್ರೂ ಆಲ್ ಟೈಮ್ ಡಿಮಾಂಡ್ ಇರೋ ಸ್ಟಾರ್ ಇದ್ರೆ ಅದು ಡಾ. ರಾಜ್ ಕುಮಾರ್ ನಂತರ ಪವರ್ ಸ್ಟಾರ್ ಪುನೀತ್. ಒಂಥರಾ ಆನೆ ಇದ್ದ ಹಾಗೆ ಅವ್ರ ಸಿನಿಮಾ ಗೆದ್ರೂ ಕೋಟಿ ಗೆಲ್ಲದೇ ಇದ್ರೂ ಕೋಟಿ. ಇಂತಹಾ ಅಭಿಮಾನಿಗಳ ಅಭಿಮಾನದ ಅಪ್ಪು ಪ್ರೀತಿಯ ಪವರ್ ಸ್ಟಾರ್ ಗೆ ಇವತ್ತು ಹುಟ್ಟುಹಬ್ಬದ ಸಂಭ್ರಮ.

39ನೇ ವರ್ಷಕ್ಕೆ ಕಾಲಿಡ್ತಾ ಇರೋ ಪವರ್ ಸ್ಟಾರ್ 2002ರಲ್ಲಿ ಆರಂಭವಾದ ಅಪ್ಪು ಸಿನಿಮಾದಿಂದ ಇವತ್ತಿನವರೆಗೂ ಯಾವ ಸಿನಿಮಾದಲ್ಲೂ ಪವರ್ ಕಳೆದುಕೊಳ್ಳದ ಪವರ್ ಸ್ಟಾರ್. ಹೆಸರಿಗೆ ತಕ್ಕಂತೆ ಸಿನಿಮಾದ ಪಾತ್ರಗಳಲ್ಲೂ ಅದ್ಭುತ ಅಭಿನಯ ನೀಡೋ ಪವರ್ ಸ್ಟಾರ್ ಹುಟ್ಟಿ ಒಂದೇ ವರ್ಷಕ್ಕೆ ಸಿನಿಮಾದಲ್ಲಿ ಮಿಂಚಿದ್ದ ಪೋರ. ಪುನೀತ್ ಮೊದಲ ಸಿನಿಮಾ 1976ರಲ್ಲಿ ಬಂದ 'ಪ್ರೇಮದ ಕಾಣಿಕೆ'. [ನಿನ್ನಿಂದಲೇ ಚಿತ್ರ ವಿಮರ್ಶೆ]

ಆ ನಂತರ ಬಂದ ಸಿನಿಮಾಗಳಲ್ಲಿ ಅದ್ಭುತ ಅಭಿನಯ ನೀಡ್ತಿದ್ದ ಪುನೀತ್ ಬಾಲನಟನಾಗೇ ರಾಷ್ಟ್ರಪ್ರಶಸ್ತಿ (ಬೆಟ್ಟದ ಹೂವು) ಪಡ್ಕೊಂಡ ಪ್ರತಿಭಾವಂತ. ಈಗಲೂ ಕನ್ನಡ ಚಿತ್ರರಂಗದ ಫೇವರೀಟ್ ಹೀರೋ ಆಗಿರೋ ಪುನೀತ್ ಈ ವರ್ಷ ನಾಲ್ಕು ಸಿನಿಮಾ ಮಾಡ್ತೀನಿ ಅಂದಿದ್ದಾರೆ.

ಕಳೆದ ವರ್ಷ ಒಂದೂ ಸಿನಿಮಾ ಬಾರದೆ ಅಭಿಮಾನಿಗಳಿಗೆ ನಿರಾಶೆ ಮಾಡಿದ್ದ ಪುನೀತ್ ಈ ವರ್ಷ ತೆಲುಗಿನ ದೂಕುಡು ರೀಮೇಕ್, ಧೀರ ರಣವಿಕ್ರಮ ಸೇರಿದಂತೆ ನಾಲ್ಕು ಸಿನಿಮಾಗಳಲ್ಲಿ ಮಿಂಚೋದು ಕನ್ಫರ್ಮ್. ಪವರ್ಸ್ಟಾರ್ ಹುಟ್ಟುಹಬ್ಬದ ದಿನ ಪವರ್ ಸ್ಟಾರ್ ಕುರಿತ ಕೆಲವು ಇಂಟರೆಸ್ಟಿಂಗ್ ಸಂಗತಿಗಳು ನಿಮಗಾಗಿ.

ಪುನೀತ್ ಬಾಲ್ಯದ ಹೆಸರು ಲೋಹಿತ್ ಅಂತ

ಪುನೀತ್ ಬಾಲ್ಯದ ಹೆಸರು ಲೋಹಿತ್ ಅಂತ. ಆದರೆ ಆಮೇಲೆ ಪುನೀತ್ ಆಗಿ. ಅಭಿಮಾನಿಗಳ ಪ್ರೀತಿಯ ಅಪ್ಪು ಆಗಿ ಬದಲಾದ್ರು. 1975ರಲ್ಲಿ ಹುಟ್ಟಿ ಪುನೀತ್ 1976ರಲ್ಲಿ ಬಂದ 'ಪ್ರೇಮದ ಕಾಣಿಕೆ' ಸಿನಿಮಾದಲ್ಲಿ ತೆರೆ ಮೇಲೆ ಬಂದಿದ್ರು.

ಮೊದಲು ಹಾಡಿದ್ದು 'ಭಾಗ್ಯವಂತ' ಸಿನಿಮಾದಲ್ಲಿ

ಪುನೀತ್ ಮೊದಲು ಹಾಡಿದ್ದು 'ಭಾಗ್ಯವಂತ' ಸಿನಿಮಾದಲ್ಲಿ. "ಬಾನ ದಾರಿಯಲ್ಲಿ ಸೂರ್ಯ ಜಾರಿಹೋದ ಚಂದ್ರ ಮೇಲೆ ಬಂದ" ಪುನೀತ್ ಹಾಡಿದ ಹಾಡು
ಪುನೀತ್ ರಾಜ್ ಕುಮಾರ್ ಗೆ ಇವತ್ತಿಗೂ ರಾಜ್ ಕುಮಾರ್ ಗೆ ಜೈ ಅನ್ನೋದೇ ಹೆಚ್ಚು ಇಷ್ಟ. ಹೊರಗೆ ಹೋದ್ರೆ ಅದೇ ಕಿವಿಯಲ್ಲಿ ಕೇಳಿದ ಹಾಗಾಗುತ್ತಂತೆ.
ಪುನೀತ್ ಬಾಲನಟನಾಗಿ ಬೆಟ್ಟದ ಹೂವು ಚಿತ್ರಕ್ಕಾಗಿ ನ್ಯಾಷನಲ್ ಅವಾರ್ಡ್ ಪಡ್ಕೊಂಡಿದ್ರು.

ಬಿಜಿನೆಸ್ ಸೋತಾಗ 'ಅಪ್ಪು' ಸಿನಿಮಾ ಮಾಡಿದ್ರು

'ಬೆಟ್ಟದ ಹೂವು' ಸಿನಿಮಾದಲ್ಲಿ ಅಮೋಘ ಅಭಿನಯಕ್ಕೆ ನ್ಯಾಷನಲ್ ಅವಾರ್ಡ್ ಸಿಕ್ಕಿತ್ತು. ಸಿನಿಮಾಗೆ ಬರ್ಬೇಕು ನಟ ಆಗ್ಬೇಕು ಅಂತ ಪುನೀತ್ ಅಂದುಕೊಂಡಿರಲಿಲ್ಲ. ಬಿಜಿನೆಸ್ ಸೋತಾಗ 'ಅಪ್ಪು' ಸಿನಿಮಾ ಮಾಡಿದ್ರು ಪುನೀತ್.

ಬಾಲ್ಯದಲ್ಲಿ ನಟಿಸೋಕೆ ಪ್ರೇರಣೆ ಹೊನ್ನವಳ್ಳಿ ಕೃಷ್ಣ

ಪುನೀತ್ ಬಾಲ್ಯದಲ್ಲಿ ನಟಿಸೋಕೆ ಪ್ರೇರಣೆ ಹೊನ್ನವಳ್ಳಿ ಕೃಷ್ಣ ಅವರು. ಹೊನ್ನವಳ್ಳಿ ಕೃಷ್ಣ ಹೇಳಿದ್ದನ್ನ ಪುನೀತ್ ಮಾಡ್ತಿದ್ರು ಬಾಲ್ಯದಲ್ಲಿ ನಟಿಸಿದ್ದಕ್ಕೆ ಕಾರಣ ಹೊನ್ನವಳ್ಳಿ ಕೃಷ್ಣ.

ಶಿವಣ್ಣನಿಗೆ ಅಪ್ಪುನೇ ಸ್ಫೂರ್ತಿ

ಬಾಲ್ಯದಲ್ಲಿ ಪುನೀತ್ ಎಲ್ಲ ಮಕ್ಕಳಂತೆ ತುಂಬಾ ತುಂಟ. ಅಂದುಕೊಂಡಿದ್ದನ್ನ ಮಾಡದೇ ಬಿಡ್ತಿರಲಿಲ್ಲ. ಕೇಳಿದಾಗ ಕೇಳಿದ್ದನ್ನ ಕೊಡಿಸ್ಬೇಕಿತ್ತು. ಆದರೆ ಈಗ ತುಂಬಾ ಸಿಂಪಲ್. ಶಿವಣ್ಣನಿಗೆ ಪುನೀತ್ ಅದ್ಭುತ ನಟ. ನಾವು ಸಿನಿಮಾಗೇ ಬರೋಕೆ ಅಪ್ಪುನೇ ಸ್ಫೂರ್ತಿ ಅಂತ ಸದಾ ಹೇಳ್ತಾರೆ ಶಿವಣ್ಣ.

ಪುನೀತ್ ಕನಸು ಏನು ಗೊತ್ತಾ?

ಪುನೀತ್ ಕನಸು ಏನಂದ್ರೆ ಕನಸು ಯಾವತ್ತಿಗೂ ಗೊತ್ತಾಗಬಾರ್ದಂತೆ. ಪುನೀತ್ ಕನಸು ಕನಸಾಗೇ ಇರ್ಬೇಕು ಹೇಳ್ಕೋಬಾರ್ದು ಅಂತಾರೆ.

ತ್ರಿಮೂರ್ತಿಗಳ ಸಂಗಮ ಯಾವಾಗ?

ಪುನೀತ್ ರಾಜ್ ಕುಮಾರ್ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಈ ಮೂವರೂ ಒಟ್ಟಿಗೆ ನಟಿಸ್ಬೇಕು ಅನ್ನೋ ಆಸೆ ಚಿತ್ರಪ್ರೇಮಿಗಳಿಗಿದೆ. ಒಳ್ಳೆ ಸ್ಕ್ರಿಪ್ಟ್ ಬಂದ್ರೆ ಖಂಡಿತ ಅಂತಾರೆ ಪವರ್ ಸ್ಟಾರ್.

English summary
Power Star Puneeth Rajkumar is celebrating his 39th birthday amidst a lot of fanfare on Monday (17th March). Here is the some interesting facts about Puneeth, wishing the star the very best birthday and a successful year ahead.
Please Wait while comments are loading...