Don't Miss!
- News
ಕೇಂದ್ರ ಬಜೆಟ್: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಜೆಟ್ ಬಗ್ಗೆ ಭಾರೀ ಮೆಚ್ಚುಗೆ!
- Automobiles
ಸೇನೆಗೆ ಮಾರುತಿ ಜಿಪ್ಸಿ ಬದಲಿಗೆ ಅತ್ಯಾಧುನಿಕ ಹೊಸ ಜಿಮ್ನಿ ಸೇರ್ಪಡೆ ಹೇಗಿರಬಹುದು?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Sports
ಟಿ20 ರ್ಯಾಂಕಿಂಗ್: ಸೂರ್ಯಕುಮಾರ್ ಅಂಕದಲ್ಲಿ ಮತ್ತಷ್ಟು ಏರಿಕೆ
- Technology
ಬಜೆಟ್ ಬೆಲೆಯಲ್ಲಿ ದೂಳೆಬ್ಬಿಸಲು ಮೊಟೊ E13 ತಯಾರಿ! ಲಾಂಚ್ ಯಾವಾಗ!
- Finance
LIC Jeevan Lakshya: LIC ಜೀವನ್ ಲಕ್ಷ್ಯ ಯೋಜನೆ: ಪಾಲಿಸಿ ಪ್ರಯೋಜನವೇನು? ಆರ್ಥಿಕ ರಕ್ಷಣೆ ಹೇಗೆ? ತಿಳಿಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಿನಿತಾರೆಯರ 'ಯೋಗ' ನೋಡಿದ್ರೆ ಥ್ರಿಲ್, ಶಾಕ್, ಜೋಶ್ ಪಕ್ಕಾ
Recommended Video

ವಿಶ್ವದ ಯೋಗ ದಿನದ ವಿಶೇಷವಾಗಿ ದೇಶದಲ್ಲೆಡೆ ಸಿನಿತಾರೆಯರು ಸೇರಿದಂತೆ ರಾಜಕೀಯ ವ್ಯಕ್ತಿಗಳು, ಉದ್ಯಮಿಗಳು, ವಿದ್ಯಾರ್ಥಿಗಳು ಯಾವುದೇ ವಯಸ್ಸಿನ ಮಿತಿಯಲ್ಲದೇ ಎಲ್ಲರೂ ಯೋಗ ಮಾಡಿ ಗಮನ ಸೆಳೆದಿದ್ದಾರೆ.
ಬಾಲಿವುಡ್, ಸ್ಯಾಂಡಲ್ ವುಡ್, ಸೇರಿದಂತೆ ಬಹುತೇಕ ನಟ-ನಟಿಯರು ಯೋಗ ಮಾಡಿ ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡಿದ್ದಾರೆ.
ಅದರಲ್ಲೂ ಬಾಲಿವುಡ್ ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ಅವರ ಯೋಗದ ಭಂಗಿಗಳು ಪಡ್ಡೆ ಹುಡುಗರನ್ನ ಕೆಣಕುವಂತಿದೆ. ಈ ಕಡೆ ಕನ್ನಡದಲ್ಲಿ, ಸಂಗೀತಾ ಭಟ್, ಪ್ರಿಯಾಮಣಿ, ಗಣೇಶ್ ಸೇರಿದಂತೆ ಹಲವರು ಯೋಗ ಮಾಡಿದ್ದಾರೆ. ಹಾಗಿದ್ರೆ, ಸಿನಿ ಲೋಕದಲ್ಲಿ ಯಾರೆಲ್ಲ ಯೋಗ ಮಾಡಿದ್ದಾರೆ ಎಂಬುದನ್ನ ಚಿತ್ರಗಳ ಸಮೇತ ನೋಡಿ.

ಪ್ರಿಯಾಮಣಿ
ಬಹುಭಾಷಾ ನಟಿ ಪ್ರಿಯಾಮಣಿ ವಿಶ್ವ ಯೋಗ ದಿನದ ಪ್ರಯುಕ್ತ ಯೋಗ ಮಾಡಿ ಶುಭಕೋರಿದ್ದಾರೆ. ಎರಡು ಬಗೆಯ ಯೋಗಾಸನಗಳನ್ನ ಮಾಡಿ ತೋರಿಸಿರುವ ಪ್ರಿಯಾಮಣಿ ಎರಡು ಫೋಟೋ ಹಂಚಿಕೊಂಡಿದ್ದಾರೆ.

ಅನಿತಾ ಭಟ್
ಕನ್ನಡದ ಗ್ಲಾಮರ್ ಮತ್ತು ಹಾಟ್ ನಟಿ ಅನಿತಾ ಭಟ್ ಯೋಗ ಮಾಡಿ ವಿಶ್ವ ಯೋಗ ದಿನವನ್ನ ಆಚರಿಸಿದ್ದಾರೆ. ಇತ್ತೀಚಿಗೆ 'ಟಗರು' ಚಿತ್ರದಲ್ಲಿ ಅನಿತ್ ಭಟ್ ವಿಶೇಷ ಪಾತ್ರವೊಂದರಲ್ಲಿ ಅಭಿನಯಿಸಿದ್ದರು.
ಯೋಗ-ಯಾಗ: ಮೋದಿ ಸೇರಿದಂತೆ ಗಣ್ಯರ ಯೋಗಾಚರಣೆ ವಿಡಿಯೋ

ಅನುಶ್ರೀ
ಕನ್ನಡ ಕಿರುತೆರೆಯ ಖ್ಯಾತ ನಿರೂಪಕಿ ಹಾಗೂ ನಟಿ ಅನುಶ್ರೀ ಅವರ ಫಿಟ್ನೆಸ್ ಹಿಂದೆ ಜಿಮ್, ವರ್ಕೌಟ್ ಇವುಗಳ ಜೊತೆ ಯೋಗವೂ ಪ್ರಮುಖ ಪಾತ್ರ ವಹಿಸಿದೆ. ಹೀಗಾಗಿ, ಯೋಗ ದಿನ ವಿಶೇಷವಾಗಿ ಅನುಶ್ರೀ ಅವರು ಯೋಗ ಮಾಡಿ ಗಮನ ಸೆಳೆದಿದ್ದಾರೆ.

ಸಂಗೀತಾ ಭಟ್
ಸದ್ಯ, ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಸೃಷ್ಟಿಸಿರುವ ನಟಿ ಸಂಗೀತಾ ಭಟ್ ಯೋಗದಲ್ಲಿ ಹೆಚ್ಚು ಪರಿಣಿತಿ ಹೊಂದಿದ್ದಾರೆ. ಯೋಗದ ಎಲ್ಲ ಆಸನಗಳನ್ನ ಸರಾಗವಾಗಿ ಮಾಡುವ ಸಂಗೀತಾ ಭಟ್ ಇಂದು ಸಂಪ್ರದಾಯವಾಗಿ ಯೋಗ ಮಾಡಿ ವಿಶ್ವ ಯೋಗ ದಿನ ಸೆಲೆಬ್ರೆಟ್ ಮಾಡಿದ್ದಾರೆ.
ಯೋಗದಿನ: ಡೆಹ್ರಾಡೂನ್ ನಲ್ಲಿ ನರೇಂದ್ರ ಮೋದಿ ಯೋಗಾಚರಣೆ

ಗಣೇಶ್
ಗೋಲ್ಡನ್ ಸ್ಟಾರ್ ಗಣೇಶ್ ಅವರು ಕೂಡ ವಿಶ್ವ ಯೋಗದಿನವನ್ನ ಆಚರಿಸಿದ್ದಾರೆ. ತಮ್ಮ ಮಗಳು ಚಾರಿತ್ರ್ಯ ಗಣೇಶ್ ಅವರ ಜೊತೆಗೂಡಿ ಯೋಗ ಮಾಡಿದ್ದಾರೆ. ಅಪ್ಪ ಮತ್ತು ಮಗಳು ಜೋಡಿ ನೋಡಲು ತುಂಬಾ ಮುದ್ದಾಗಿದೆ.

ಕಾವ್ಯ ಶೆಟ್ಟಿ
'ಇಷ್ಟಕಾಮ್ಯ', 'ಸ್ಮೈಲ್ ಪ್ಲೀಸ್', 'ಸಿಲಿಕಾನ್ ಸಿಟಿ' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ನಟಿ ಕಾವ್ಯ ಶೆಟ್ಟಿ ವಿಶ್ವ ಯೋಗ ದಿನದ ಅಂಗವಾಗಿ ಯೋಗ ಮಾಡಿದ್ದಾರೆ.

ಶಿಲ್ಪಾ ಶೆಟ್ಟಿ
ಇನ್ನು ಬಾಲಿವುಡ್ ಲೋಕದಲ್ಲಿ ಯೋಗ ಹವ್ಯಾಸ ಹೊಂದಿರುವ ಅನೇಕ ತಾರೆಯರಿದ್ದಾರೆ. ಅದರಲ್ಲೂ ಶಿಲ್ಪಾ ಶೆಟ್ಟಿ ಅಂತೂ ಯೋಗವನ್ನ ನಿರಂತರವಾಗಿ ಅಭ್ಯಾಸ ಮಾಡುತ್ತಾರೆ. ಈ ವರ್ಷವೂ ವಿಶ್ವ ಯೋಗ ದಿನದ ಪ್ರಯುಕ್ತ ತಮ್ಮ ಕಲೆ ಪ್ರದರ್ಶಿಸಿದ್ದಾರೆ.
ತರಹೇವಾರಿ ಭಂಗಿಯಲ್ಲಿ ನಮ್ಮ ನಾಯಕರ ಯೋಗಾವತಾರ!

ಕಂಗನಾ ರಣಾವತ್
ಶಿಲ್ಪಾ ಶೆಟ್ಟಿ ಯಂತೆ ನಟಿ ಕಂಗನಾ ರಣಾವತ್ ಕೂಡ ಯೋಗ ಮಾಡಿ ಯೋಗದಿನವನ್ನ ಆಚರಿಸಿದ್ದಾರೆ. ಪರಿಸರದ ಮಧ್ಯೆ ಯೋಗದ ವಿವಿಧ ಆಸನಗಳನ್ನ ಪ್ರದರ್ಶಿಸಿದ ಕಂಗನಾ ''ಆರೋಗ್ಯಕ್ಕೆ ಯೋಗ ಅತ್ಯಂತ ಅಮೂಲ್ಯವಾದದು'' ಎಂದಿದ್ದಾರೆ.

ರಾಖಿ ಸಾವಂತ್
ಇನ್ನು ಬಿಟೌನ್ ಇಂಡಸ್ಟ್ರಿಯ ಹಾಟ್ ಬಾಂಟ್, ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ಸುಮಾರು ಗಂಟೆಗಳ ಕಾಲ ಯೋಗಾಭ್ಯಾಸ ಮಾಡಿ ಎಲ್ಲರ ಕಣ್ಮನ ಸೆಳೆದಿದ್ದಾರೆ. ರಾಖಿ ಸಾವಂತ್ ಅವರ ಯೋಗದ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.