»   » 'ಕಾಲೇಜ್ ಕುಮಾರ'ನನ್ನ ಕಂಡು ಐಪಿಎಸ್ ರೂಪ ಸಂತಸ.!

'ಕಾಲೇಜ್ ಕುಮಾರ'ನನ್ನ ಕಂಡು ಐಪಿಎಸ್ ರೂಪ ಸಂತಸ.!

Posted By:
Subscribe to Filmibeat Kannada

ಕಳೆದ ವಾರವಷ್ಟೇ ಬಿಡುಗಡೆಯಾಗಿ ರಾಜ್ಯಾದ್ಯಂತ ಅದ್ಧೂರಿಯಾಗಿ ಪ್ರದರ್ಶನವಾಗುತ್ತಿರುವ 'ಕಾಲೇಜ್ ಕುಮಾರ' ಚಿತ್ರವನ್ನ ಐಪಿಎಸ್ ಅಧಿಕಾರಿ ರೂಪ ಅವರು ನೋಡಿ ಮೆಚ್ಚಿಕೊಂಡಿದ್ದಾರೆ.

ನಟಿ ಶ್ರುತಿ ಮತ್ತು ಮಾಜಿ ಸಚಿವೆ ಲೀಲಾದೇವಿ ಪ್ರಸಾದ್ ಅವರ ಜೊತೆ ಸಿನಿಮಾ ನೋಡಿದ ರೂಪ, 'ಕಾಲೇಜ್ ಕುಮಾರ'ನ ಬಗ್ಗೆ ತಮ್ಮ ಟ್ವಿಟ್ಟರ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ips Roopa watched College kumara movie

ವಿಮರ್ಶೆ : 'ಕಾಲೇಜ್ ಕುಮಾರ'ನಿಗೆ ಪ್ರೇಕ್ಷಕ ಕ್ಲೀನ್ ಬೌಲ್ಡ್

'ಕಾಲೇಜ್ ಕುಮಾರ್' ಒಳ್ಳೆಯ ಸಂದೇಶ ಸಾರುವ ಚಿತ್ರಕಥೆ, ಪಂಚಿಂಗ್ ಡೈಲಾಗ್, ಕಣ್ಣು ಒದ್ದೆಗೊಳಿಸುವ ಸನ್ನಿವೇಶಗಳ ಮಧ್ಯೆ ನವಿರಾದ ಹಾಸ್ಯ-ಎಲ್ಲರೂ ತಮ್ಮನ್ನು ತಾವು ಪಾತ್ರಗಳಿಗೆ ಅನ್ವಯಿಸಿಕೊಳ್ಳಬಹುದಾದ fantastic ಚಿತ್ರ. ಶೃತಿ ಹಾಗು ಮಾಜಿ ಸಚಿವೆ ಲೀಲಾದೇವಿ ಪ್ರಸಾದ್ ಜೊತೆ ಚಿತ್ರ ನೋಡಿದೆ. ಎಲ್ಲರೂ ತುಂಬಾ natural ಆಗಿ ಅಭಿನಯಿಸಿದ್ದಾರೆ'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

'ಕಾಲೇಜ್ ಕುಮಾರ'ನಿಗೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು?

'ಅಲೆಮಾರಿ' ಖ್ಯಾತಿಯ ಸಂತು ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಕೆಂಡಸಂಪಿಗೆ ಖ್ಯಾತಿಯ ವಿಕ್ಕಿ, ಸಂಯುಕ್ತ ಹೆಗಡೆ, ಶ್ರುತಿ, ರವಿಶಂಕರ್ ಸೇರಿದಂತೆ ಹಲವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

English summary
Ips Roopa watched College kumara movie with Actress Shruthi and Former minister leela devi prasad.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X