»   » ಬಣ್ಣ ಕಳೆದುಕೊಂಡಿದ್ದ ಚಿತ್ರರಂಗಕ್ಕೆ ಶುಭಶಕುನ ತಂದ 'ರಂಗಿತರಂಗ'

ಬಣ್ಣ ಕಳೆದುಕೊಂಡಿದ್ದ ಚಿತ್ರರಂಗಕ್ಕೆ ಶುಭಶಕುನ ತಂದ 'ರಂಗಿತರಂಗ'

Posted By:
Subscribe to Filmibeat Kannada

2015 ರ ಮಧ್ಯಂತರದಲ್ಲಿ ಇತ್ತೀಚೆಗೆ ಕನ್ನಡ ಚಿತ್ರರಂಗಕ್ಕೆ ಒಂಥರಾ ಸುಗ್ಗಿಯ ಕಾಲ ಯಾಕೆಂದರೆ ನಿರ್ದೇಶಕ ಅನೂಪ್ ಭಂಡಾರಿ ಅವರ ಬ್ಲಾಕ್ ಬಸ್ಟರ್ ಹಿಟ್ ಚಿತ್ರ 'ರಂಗಿತರಂಗ' ತೆರೆ ಕಂಡ ಮೇಲೆ ಸ್ಯಾಂಡಲ್ ವುಡ್ ನಲ್ಲಿ ಶುಭಶಕುನ ಮೂಡಿದಂತಾಗಿದೆ.

ಭಂಡಾರಿ ಸಹೋದರರ ಕಮಾಲ್ ನಂತರ ಸ್ಯಾಂಡಲ್ ವುಡ್ ನ ರಿಯಲ್ ಸ್ಟಾರ್ ಉಪೇಂದ್ರ ಅವರು ಸೈಕೋಲಾಜಿಕಲ್ ಥ್ರಿಲ್ಲರ್ 'ಉಪ್ಪಿ-2' ಮೂಲಕ ಪ್ರೇಕ್ಷಕರ ತಲೆಗೆ ಹುಳ ಬಿಟ್ಟರೂ ಕೂಡ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಥಾಹಂದರವನ್ನು ಹೊಂದಿರುವ 'ನಾನು-ನೀನು' ಕಾನ್ಸೆಪ್ಟ್ ಮೂಲಕ ಅಭಿಮಾನಿಗಳನ್ನು ರಂಜಿಸಿದರು.[ಟ್ವಿಟ್ಟರಲ್ಲಿ Mr ಐರಾವತ, ಅರ್ಜುನ ಅಂಬಾರಿ ಉತ್ಸವ]


ಜೊತೆಗೆ ಕುಳ್ಳ ದ್ವಾರಕೀಶ್ ಅವರು ತಮ್ಮ ಕನಸಿನ 'ಆಟಗಾರ' ಚಿತ್ರವನ್ನು ವರಮಹಾಲಕ್ಷ್ಮಿ ಹಬ್ಬಕ್ಕೆ ಪ್ರೇಕ್ಷಕರಿಗೆ ಉಡುಗೊರೆಯಾಗಿ ನೀಡಿದರು. ಸ್ಯಾಂಡಲ್ ವುಡ್ ನ ಮಲ್ಟಿ ಸ್ಟಾರ್ ಗಳು ಒಂದಾಗಿದ್ದ 'ಆಟಗಾರ' ವಿದೇಶದಲ್ಲೂ ಕಮಾಲ್ ಮಾಡಿರುವ ವಿಷಯ ನಿಮಗೆ ಗೊತ್ತೇ ಇದೆ.


ಇವೆಲ್ಲರ ಜೊತೆ ಜೊತೆಗೆ ದುನಿಯಾ ವಿಜಯ್ 'ಆರ್ ಎಕ್ಸ್ ಸೂರಿ', ದುನಿಯಾ ಸೂರಿ ಅವರ 'ಕೆಂಡಸಂಪಿಗೆ', 'ಗೀತಾ ಬ್ಯಾಂಗಲ್ ಸ್ಟೋರ್', 'ಅರ್ಜುನ' ಹಾಗೂ 62ನೇ ರಾಷ್ಟ್ರ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ನಟ ಬಿರುದು ಪಡೆದ ಸಂಚಾರಿ ವಿಜಯ್ ಅವರ 'ನಾನು ಅವನಲ್ಲ ಅವಳು' ಹೀಗೆ ಮುಂತಾದ ಕನ್ನಡ ಚಿತ್ರಗಳು ನಮ್ಮ ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಯಶಸ್ಸಿನ ದಿನಗಳತ್ತ ಮುನ್ನುಗ್ಗುತ್ತಿದೆ.[ಚಾಲೆಂಜಿಂಗ್ ಸ್ಟಾರ್ 'Mr ಐರಾವತ' ನ, ಸ್ಪೆಷಾಲಿಟಿ ಏನು?]


ಇದೀಗ ಇಂದು (ಅಕ್ಟೋಬರ್ 1) ಭರ್ಜರಿಯಾಗಿ ತೆರೆ ಕಂಡಿರುವ ಬಾಕ್ಸಾಫೀಸ್ ಸುಲ್ತಾನ ದರ್ಶನ್ ಹಾಗೂ ಊರ್ವಶಿ ರೌಟೇಲ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ 'Mr ಐರಾವತ', ಚಿತ್ರ ಈ ಮೇಲಿನ ಚಿತ್ರಗಳ ಸಾಲಿಗೆ ಸೇರುತ್ತಾ?, ನಿರ್ದೇಶಕ ಎ.ಪಿ ಅರ್ಜುನ್ ಅವರು ಕಮಾಲ್ ಮಾಡ್ತಾರಾ?, ಎನ್ನುವ ಗಾಂಧಿನಗರದ ಮಂದಿಯ ಹಲವು ಪ್ರಶ್ನೆಗಳಿಗೆ ಉತ್ತರ ಇಂದು ದೊರೆಯಲಿದೆ. ಮುಂದೆ ಓದಿ.


ಬ್ಲಾಕ್ ಬಸ್ಟರ್ 'ರಂಗಿತರಂಗ'

ಕನ್ನಡ ಚಿತ್ರರಂಗ ಹೊಸಬರನ್ನು ಕೈ ಹಿಡಿಯುತ್ತದೆ, ಎನ್ನುವುದನ್ನು ಇಡೀ ಗಾಂಧಿನಗರಕ್ಕೆ ತೋರಿಸಿಕೊಟ್ಟವರು ಭಂಡಾರಿ ಸಹೋದರರು. ನಾಯಕ ನಿರುಪ್ ಭಂಡಾರಿ, ರಾಧಿಕಾ ಚೇತನ್ ಹಾಗೂ ಆವಂತಿಕಾ ಶೆಟ್ಟಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದ ನಿರ್ದೇಶಕ ಅನುಪ್ ಭಂಡಾರಿ ಅವರ 'ರಂಗಿತರಂಗ' ಈ ವರ್ಷದ ವಿಶ್ವದ ಅತ್ಯುತ್ತಮ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.


ರಿಯಲ್ ಸ್ಟಾರ್ ಉಪ್ಪಿ-2

ಸ್ಯಾಂಡಲ್ ವುಡ್ ನ ರಿಯಲ್ ಸ್ಟಾರ್ ಉಪೇಂದ್ರ ಅವರು ತುಂಬಾ ದಿನಗಳ ನಂತರ ನಿರ್ದೇಶಕರ ಕ್ಯಾಪ್ ತಲೆಗೇರಿಸಿಕೊಂಡು ಡಿಫರೆಂಟ್ ಚಿತ್ರ 'ಉಪ್ಪಿ-2' ಮಾಡಿ ನಾನು-ನೀನು unknown ಎನ್ನುವ ಮೂಲಕ ಇಡೀ ಗಾಂಧಿನಗರವನ್ನು ತನ್ನತ್ತ ನೋಡುವಂತೆ ಮಾಡಿದರು.


'ಆಟಗಾರ'

'ರಂಗಿತರಂಗ', 'ಉಪ್ಪಿ-2' ನಂತರ ಸ್ಯಾಂಡಲ್ ವುಡ್ ಮಲ್ಟಿ ಸ್ಟಾರ್ ಗಳು ಒಟ್ಟಾಗಿ ಕಾಣಿಸಿಕೊಂಡಿದ್ದ ಕುಳ್ಳ ದ್ವಾರಕೀಶ್ ಅವರ 49ನೇ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ 'ಆಟಗಾರ' ಯಶಸ್ಸು ಕಂಡಿದೆ.


'ಕೆಂಡಸಂಪಿಗೆ'

ನಿರ್ದೇಶಕ ದುನಿಯಾ ಸೂರಿ ಅವರ 'ಕೆಂಡಸಂಪಿಗೆ' ಚಿತ್ರ ತನ್ನ ಕಂಪನ್ನು ಎಲ್ಲೆಡೆ ಬೀರಿದೆ. ಸೂರಿ ಅವರು ಹೊಸಬರನ್ನು ಹಾಕಿಕೊಂಡು ಮಾಡಿದ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ.


ಡೈನಾಮಿಕ್ ಪ್ರಿನ್ಸ್ 'ಅರ್ಜುನ'

ಕಳೆದ ವಾರ ತೆರೆ ಕಂಡ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ 'ಅರ್ಜುನ' ಚಿತ್ರ
ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಚಿತ್ರದಲ್ಲಿನ ಅಪ್ಪ-ಮಗನ ಜುಗಲ್ ಬಂದಿಗೆ ಗಾಂಧಿನಗರದ ಮಂದಿ ಮನಸೋತಿದ್ದರು.


ನಾನು ಅವನಲ್ಲ ಅವಳು

62ನೇ ರಾಷ್ಟ್ರಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ನಟ ಎಂಬ ಬಿರುದು ಪಡೆದುಕೊಂಡ ಸಂಚಾರಿ ವಿಜಯ್ ಅವರ ನಾನು ಅವನಲ್ಲ ಅವಳು ಸದ್ಯಕ್ಕೆ ಸಿನಿವಿಮರ್ಶಕರಿಂದ ಪಾಸಿಟಿವ್ ರೆಸ್ಟಾನ್ಸ್ ಗಳಿಸುತ್ತಿದೆ. ನಿರ್ದೇಶಕ ಲಿಂಗದೇವರು ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದು, ಇದು ಮಂಗಳಮುಖಿಯರ ನಿಜ ಜೀವನ ಕಥೆಯಾಧರಿತ ಚಿತ್ರವಾಗಿದೆ.


ಚಾಲೆಂಜಿಂಗ್ ಸ್ಟಾರ್ ದರ್ಶನ್ Mr ಐರಾವತ

ಸ್ಯಾಂಡಲ್ ವುಡ್ ಬಾಕ್ಸಾಪೀಸ್ ಸುಲ್ತಾನ ದರ್ಶನ್ ಅವರ ಬಹುನಿರೀಕ್ಷಿತ ಚಿತ್ರ 'Mr ಐರಾವತ' ಇಂದು ಭರ್ಜರಿ ಓಪನ್ನಿಂಗ್ ಪಡೆದುಕೊಂಡಿದ್ದು, ಈ ಎಲ್ಲಾ ಚಿತ್ರಗಳ ಸಾಲಿಗೆ ಸೇರುತ್ತಾ, ಜೊತೆಗೆ ಬ್ಲಾಕ್ ಬಸ್ಟರ್ ಹಿಟ್ ಪಡೆದುಕೊಳ್ಳುತ್ತಾ ಅಂತ ಮುಂದಿನ ದಿನಗಳಲ್ಲಿ ಕಾದು ನೋಡೋಣ.


English summary
Today,(Oct 1) Darshan's Mr Airavata is hitting the marquee all over Karnataka and Overseas. Will Darshan's most awaited flick to be a blockbuster of the recent times of KFI?. Mr Airavata movie features Darshan, Actress Urvashi Rautela in the lead role. The movie is directed by AP Arjun.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada