For Quick Alerts
  ALLOW NOTIFICATIONS  
  For Daily Alerts

  'NTR' ಬಯೋಪಿಕ್ ನಲ್ಲಿ ಇರುತ್ತಾ ರಾಜ್ ಕುಮಾರ್ ಪಾತ್ರ?

  |

  ನಾಳೆ ಇಡೀ ಟಾಲಿವುಡ್ ಚಿತ್ರರಂಗಕ್ಕೆ ಒಂದು ಹಬ್ಬ. ಕಾರಣ ತೆಲುಗು ಜನತೆಯ ಆರಾಧ್ಯ ದೈವ ನಟ ಎನ್ ಟಿ ರಾಮರಾವ್ ಅವರ ಜೀವನಾಧಾರಿತ ಸಿನಿಮಾ ತೆರೆಗೆ ಬರುತ್ತಿದೆ.

  ಎನ್ ಟಿ ರಾಮರಾವ್ ಅವರ ಜೀವನದ ಅನೇಕ ವಿಚಾರಗಳನ್ನು 'ಎನ್ ಟಿ ಆರ್' ಸಿನಿಮಾ ಬಿಚ್ಚಿಡುತ್ತಿದೆ. 'ಎನ್ ಟಿ ಆರ್' ಬದುಕಿನ ಅನೇಕ ಸಂಗತಿಗಳು ಚಿತ್ರದಲ್ಲಿ ಇರಲಿದೆ. ಚಿತ್ರದಲ್ಲಿ ಸಾಮಾನ್ಯವಾಗಿಯೇ ಎನ್ ಟಿ ಆರ್ ಅವರ ಆಪ್ತರ ಪಾತ್ರ ಸಹ ಇರಲಿದೆ. ಹೀಗಿರುವಾಗ, ರಾಜ್ ಕುಮಾರ್ ಅವರ ಪಾತ್ರ ಕೂಡ ಚಿತ್ರದಲ್ಲಿ ಇದೆಯೇ ಎನ್ನುವ ಕುತೂಹಲ ಕನ್ನಡ ಸಿನಿಮಾ ಪ್ರೇಮಿಗಳಲ್ಲಿ ಇತ್ತು.

  ಬೆಂಗಳೂರಿನಲ್ಲಿ ಬಾಲಯ್ಯ: ಪವರ್ ಸ್ಟಾರ್, ರಾಕಿಂಗ್ ಸ್ಟಾರ್ ಸಾಥ್ ಬೆಂಗಳೂರಿನಲ್ಲಿ ಬಾಲಯ್ಯ: ಪವರ್ ಸ್ಟಾರ್, ರಾಕಿಂಗ್ ಸ್ಟಾರ್ ಸಾಥ್

  ರಾಜ್ ಕುಮಾರ್ ಹಾಗೂ ಎನ್ ಟಿ ಆರ್ ಆಪ್ತ ಸ್ನೇಹಿತರು ಈ ಕಾರಣದಿಂದ ಎನ್ ಟಿ ಆರ್ ಬಯೋಪಿಕ್ ನಲ್ಲಿ ಅಣ್ಣಾವ್ರ ಪಾತ್ರ ಕೂಡ ಬರಬಹುದು ಎಂದು ಹೇಳಲಾಗಿತ್ತು. ಆದರೆ, ಈಗ ಇಂತಹ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಮುಂದೆ ಓದಿ....

  ರಾಜ್ ಕುಮಾರ್ ಪಾತ್ರ ಇಲ್ಲ

  ರಾಜ್ ಕುಮಾರ್ ಪಾತ್ರ ಇಲ್ಲ

  ಎನ್ ಟಿ ರಾಮರಾವ್ ಅವರ ಜೀವನಾಧಾರಿತ ಸಿನಿಮಾ 'ಎನ್ ಟಿ ಆರ್' ಚಿತ್ರದಲ್ಲಿ ರಾಜ್ ಕುಮಾರ್ ಅವರ ಪಾತ್ರ ಇಲ್ಲವಂತೆ. ಈ ವಿಷಯವನ್ನು ಸ್ವತಃ ಚಿತ್ರದ ನಾಯಕ ಬಾಲಕೃಷ್ಣ ಸ್ಪಷ್ಟ ಪಡಿಸಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ಚಿತ್ರದ ಪ್ರೆಸ್ ಮೀಟ್ ನಡೆದಿದ್ದು, ಬಾಲಯ್ಯ ಚಿತ್ರದ ವಿವರ ನೀಡಿದರು.

  ರಾಜ್ ಕುಮಾರ್ ಬಗ್ಗೆ ಬಾಲಯ್ಯನ ಈ ಆಸೆ ಈಡೇರುತ್ತಾ? ರಾಜ್ ಕುಮಾರ್ ಬಗ್ಗೆ ಬಾಲಯ್ಯನ ಈ ಆಸೆ ಈಡೇರುತ್ತಾ?

  ಯಾಕಿಲ್ಲ ಎನ್ನುವುದಕ್ಕಿಲ್ಲ ಉತ್ತರ

  ಯಾಕಿಲ್ಲ ಎನ್ನುವುದಕ್ಕಿಲ್ಲ ಉತ್ತರ

  ರಾಜ್ ಕುಮಾರ್ ಕುಟುಂಬ ಹಾಗೂ ಎನ್ ಟಿ ಆರ್ ಕುಟುಂಬ ಒಳ್ಳೆಯ ಗೆಳೆತನ ಹೊಂದಿದೆ. ಹೀಗಿದ್ದರು, ರಾಜ್ ಪಾತ್ರ ಚಿತ್ರದಲ್ಲಿ ಯಾಕಿಲ್ಲ ಎನ್ನುವ ಪ್ರಶ್ನೆ ಮೂಡುತ್ತದೆ. ಆದರೆ, ಇದಕ್ಕೆ ಸದ್ಯಕ್ಕೆ ಉತ್ತರವಿಲ್ಲ. ಎನ್ ಟಿ ಆರ್ ಸಿನಿಮಾ ಎರಡು ಪಾರ್ಟ್ ಗಳಲ್ಲಿ ಬರುತ್ತಿದ್ದು, ಎರಡರಲ್ಲಿಯೂ ರಾಜ್ ಪಾತ್ರ ಇರುವುದಿಲ್ಲ.

  ರಾಜ್ ಬಯೋಪಿಕ್ ನೋಡುವಾಸೆ

  ರಾಜ್ ಬಯೋಪಿಕ್ ನೋಡುವಾಸೆ

  ನಿನ್ನೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಬಾಲಕೃಷ್ಣ ತಮ್ಮ ತಂದೆ ಎನ್ ಟಿ ಆರ್ ಅವರ ಜೀವನಾಧಾರಿತ ಸಿನಿಮಾದ ರೀತಿ ರಾಜ್ ಕುಮಾರ್ ಅವರ ಬಯೋಪಿಕ್ ನೋಡುವ ಆಸೆ ಇದೆ ಎಂದರು. ವೇದಿಕೆ ಮೇಲೆ ಇದ್ದ ಪುನೀತ್ ಗೆ ಸಿನಿಮಾ ಮಾಡಿ ಎಂದು ಪ್ರೀತಿಯ ಮನವಿ ಮಾಡಿದರು.

  ನಾಳೆ ಸಿನಿಮಾ ಬಿಡುಗಡೆ

  'ಎನ್ ಟಿ ಆರ್' ಚಿತ್ರದ ಮೊದಲ ಭಾಗ 'ಕಥಾನಾಯಕುಡು' ನಾಳೆ ಬಿಡುಗಡೆಯಾಗುತ್ತಿದೆ. ಎನ್ ಟಿ ಆರ್ ಪಾತ್ರದಲ್ಲಿ ಅವರ ಮಗ ನಟ ಬಾಲಕೃಷ್ಣ ನಟಿಸಿದ್ದಾರೆ. ಎನ್ ಟಿ ಆರ್ ಪತ್ನಿಯಾಗಿ ವಿದ್ಯಾ ಬಾಲನ್ ಕಾಣಿಸಿಕೊಂಡಿದ್ದಾರೆ. ಕ್ರಿಶ್ ಚಿತ್ರದ ನಿರ್ದೇಶನ ಮಾಡಿದ್ದು, ಎಂ ಎಂ ಕೀರವಾಣಿ ಸಂಗೀತ ನೀಡಿದ್ದಾರೆ.

  English summary
  Is DR Rajkumar character comes in telugu actor Balakrishna biopic.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X