»   » ಕಿಚ್ಚನ 'ಹೆಬ್ಬುಲಿ' ಘರ್ಜನೆಗೆ ಬಾಕ್ಸ್ ಆಫೀಸ್ ಛಿದ್ರ ಛಿದ್ರ.!

ಕಿಚ್ಚನ 'ಹೆಬ್ಬುಲಿ' ಘರ್ಜನೆಗೆ ಬಾಕ್ಸ್ ಆಫೀಸ್ ಛಿದ್ರ ಛಿದ್ರ.!

Posted By:
Subscribe to Filmibeat Kannada

''ಕನ್ನಡ ಚಿತ್ರಗಳಿಗೆ ಮಾರ್ಕೆಟ್ ಇಲ್ಲ... ಕನ್ನಡ ಸಿನಿಮಾಗಳ ಕಲೆಕ್ಷನ್ ಡಲ್ಲೋ, ಡಲ್ಲು'' ಅಂತ ಮೂಗು ಮುರಿಯುತ್ತಿದ್ದವರೆಲ್ಲ ಒಮ್ಮೆ 'ಹೆಬ್ಬುಲಿ' ಕಲೆಕ್ಷನ್ ರಿಪೋರ್ಟ್ ನತ್ತ ತಪ್ಪದೇ ಮುಖ ಮಾಡಿ ನೋಡಿ..

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅಚ್ಚಾಗಿದ್ದ ಎಲ್ಲಾ ರೆಕಾರ್ಡ್ ಗಳನ್ನು ಉಡೀಸ್ ಮಾಡಿ, ಹೊಸ ದಾಖಲೆ ಬರೆದಿದೆ ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಸಿನಿಮಾ.!


ಕಲೆಕ್ಷನ್ ನಲ್ಲಿ 'ಹೆಬ್ಬುಲಿ' ದಾಖಲೆ

'ಹೆಬ್ಬುಲಿ' ಚಿತ್ರವನ್ನ ಬಿಕೆಟಿ ಮತ್ತು ಮೈಸೂರು ಪ್ರದೇಶಗಳಲ್ಲಿ ವಿತರಿಸಿರುವ ಜಾಕ್ ಮಂಜು ಪ್ರಕಾರ, 'ಹೆಬ್ಬುಲಿ' ಚಿತ್ರ ಮೊದಲ ದಿನ 8 ರಿಂದ 10 ಕೋಟಿ ಕಲೆಕ್ಷನ್ ಮಾಡಿದೆ.[ಕಿಚ್ಚನ 'ಹೆಬ್ಬುಲಿ' ಮೊದಲ ದಿನ ಗಳಿಸಿದ್ದೆಷ್ಟು?]


ಎರಡನೇ ದಿನದ ಕಲೆಕ್ಷನ್ ಕೂಡ ಕಮ್ಮಿ ಇಲ್ಲ.!

ಶುಕ್ರವಾರ ಕೂಡ 'ಹೆಬ್ಬುಲಿ' ಬೇಟೆ ಭರ್ಜರಿ ಆಗಿ ನಡೆದಿರುವುದರಿಂದ ಮೊದಲ ಎರಡು ದಿನಗಳ ಕಲೆಕ್ಷನ್ 18 ಕೋಟಿ ಅಂತ ಅಂದಾಜಿಸಲಾಗಿದೆ.[ಕನ್ನಡದಲ್ಲಿ ಮೊದಲು 100 ಕೋಟಿ ಗಳಿಸುವ ಸಿನಿಮಾ ಯಾವುದು?]


ಹೀಗೆ ಮುಂದುವರೆದರೆ...

ಗಲ್ಲಪೆಟ್ಟಿಗೆಯಲ್ಲಿ 'ಹೆಬ್ಬುಲಿ' ಘರ್ಜನೆ ಹೀಗೆ ಮುಂದುವರೆದರೆ ನಾಲ್ಕು ದಿನಗಳಲ್ಲಿ 25-30 ಕೋಟಿ ಕಲೆಕ್ಷನ್ ಮಾಡುವುದು ಪಕ್ಕಾ ಅಂತಾರೆ ವಿತರಕ ಜಾಕ್ ಮಂಜು. ['ಹೆಬ್ಬುಲಿ' ವಿಮರ್ಶೆ: ಗನ್ ಹಿಡಿದು ಘರ್ಜಿಸಿದ ಆರಡಿ ಟೈಗರ್ ಸೂಪರ್ ಗುರು]


ಈ ತರಹದ ಕ್ರೇಜ್ ಇದೇ ಮೊದಲು

''ನಿಜ ಹೇಳುತ್ತೇನೆ... ಈ ತರಹದ ಕ್ರೇಜ್ ನಾನು ಈ ಹಿಂದೆ ನೋಡಿರಲಿಲ್ಲ. ಪರಭಾಷಾ ಚಿತ್ರಗಳಿಗೆ ಮಧ್ಯರಾತ್ರಿ ಶೋ ಇರುತ್ತಿತ್ತು. ಆದ್ರೀಗ 'ಹೆಬ್ಬುಲಿ' ಚಿತ್ರ 60 ಚಿತ್ರಮಂದಿರಗಳಲ್ಲಿ ತಡರಾತ್ರಿ ಹಾಗೂ ಮುಂಜಾನೆ ಪ್ರದರ್ಶನಗಳು ಕಂಡಿವೆ'' ಎನ್ನುತ್ತಾರೆ ಜಾಕ್ ಮಂಜು. ['ಹೆಬ್ಬುಲಿ' ಬಗ್ಗೆ ಸುದೀಪ್ ಬರೆದುಕೊಂಡಿರುವ ಮನದಾಳದ ಮಾತುಗಳು...]


ಬೆಳಗಿನ ಪ್ರದರ್ಶನಗಳಲ್ಲೇ ದಾಖಲೆ

''ಕೆಲವೆಡೆ ಬೆಳ್ಳಂಬೆಳಗ್ಗೆಯೇ 'ಹೆಬ್ಬುಲಿ' ಚಿತ್ರ ಪ್ರದರ್ಶನ ಕಂಡಿತ್ತು. ಬೆಳಗಿನ ಜಾವದ ಪ್ರದರ್ಶನಗಳಿಂದಲೇ 50-60 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ'' ಅಂತಾರೆ ಜಾಕ್ ಮಂಜು.


ಹೆಚ್ಚು ಪ್ರದರ್ಶನ ಕಂಡಿರುವ ಮೊಟ್ಟ ಮೊದಲ ಕನ್ನಡ ಸಿನಿಮಾ

ಫೆಬ್ರವರಿ 23 ರಂದು ಬಿಡುಗಡೆ ಆದ 'ಹೆಬ್ಬುಲಿ' ಸಿನಿಮಾ ಮೊದಲ ಮೂರು ದಿನಗಳಲ್ಲಿ ಬರೋಬ್ಬರಿ ಐದು ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ಕನ್ನಡ ಚಿತ್ರರಂಗದ ಮಟ್ಟಿಗೆ ಇದು ಹೊಸ ಮೈಲಿಗಲ್ಲು.!


ಲಕ್ಷಾಂತರ ಜನ ವೀಕ್ಷಣೆ

400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ 'ಹೆಬ್ಬುಲಿ' ಚಿತ್ರವನ್ನ ಮೊದಲ ದಿನವೇ 13-14 ಲಕ್ಷ ಜನ ವೀಕ್ಷಿಸಿದ್ದಾರೆ ಎಂದು ಅಂದಾಜಿಸಲಾಗಿದೆ. ಸ್ಯಾಂಡಲ್ ವುಡ್ ನಲ್ಲಿ ಇದು ರೆಕಾರ್ಡ್ ಅಲ್ಲದೇ ಮತ್ತೇನು.!?


ಹೊರ ರಾಜ್ಯದ ಕಲೆಕ್ಷನ್ ಅಂದಾಜು ಸಿಕ್ಕಿಲ್ಲ

ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಹೆಬ್ಬುಲಿ' ಬಿಡುಗಡೆ ಅಗಿದ್ದರೆ, ಹೊರರಾಜ್ಯಗಳಲ್ಲಿ ಸುಮಾರು 26 ಸೆಂಟರ್ ಗಳಲ್ಲಿ 'ಹೆಬ್ಬುಲಿ' ಘರ್ಜಿಸುತ್ತಿದೆ. ಅಲ್ಲಿನ ಕಲೆಕ್ಷನ್ ರಿಪೋರ್ಟ್ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.


ಎಲ್ಲಾ ದಾಖಲೆಗಳು ಪೀಸ್ ಪೀಸ್

ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ 'ಹೆಬ್ಬುಲಿ' ಸ್ಯಾಂಡಲ್ ವುಡ್ ನ ಹಿಂದಿನ ಎಲ್ಲಾ ರೆಕಾರ್ಡ್ ಗಳನ್ನ ಪೀಸ್ ಪೀಸ್ ಮಾಡಿ ಹೊಸ ಇತಿಹಾಸ ಸೃಷ್ಟಿಸುತ್ತಿದೆ. ಸದ್ಯ ಗಾಂಧಿನಗರದ ಸೆನ್ಸೇಷನಲ್ ನ್ಯೂಸ್ ಅಂದ್ರೆ ಇದೇ.!


English summary
According to Distributor Jack Manju, Kiccha Sudeep starrer 'Hebbuli' has collected Rs.8-10 Crore on First day.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada