Don't Miss!
- Sports
Ind Vs Aus Test: ಟೆಸ್ಟ್ ಸರಣಿಗೆ ಈ ರೀತಿ ಪಿಚ್ ಬೇಕು ಎಂದು ಕ್ಯುರೇಟರ್ಗಳಿಗೆ ಮನವಿ ಮಾಡಿದ ದ್ರಾವಿಡ್ ಮತ್ತು ರೋಹಿತ್ ಶರ್ಮಾ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಾಬರ್ಟ್ ಗೆ ಧ್ವನಿ ನೀಡಿದ ಜಗಪತಿ ಬಾಬು, ಖುಷಿ ಹಂಚಿಕೊಂಡ ನಿರ್ದೇಶಕ
ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ರಾಬರ್ಟ್ ಸಿನಿಮಾದ ಬಹುತೇಕ ಕಾರ್ಯಗಳು ಅಂತಿಮ ಹಂತದಲ್ಲಿವೆ.
ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಡಬ್ಬಿಂಗ್ ಅನ್ನು ಮುಗಿಸುವ ಹಂತದಲ್ಲಿದೆ. ಚಿತ್ರ ಬಿಡುಗಡೆ ತಡವಾಗಿ ಮಾಡುವುದಾಗಿ ನಿಶ್ಚಯಿಸಿರುವ ಕಾರಣ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ನಿಧಾನವಾಗಿ ಸಾಗಿವೆ.
'ರಾಬರ್ಟ್'
ಬಿಡುಗಡೆ
ಬಗ್ಗೆ
ನಿರ್ಮಾಪಕ
ಉಮಾಪತಿ
ಶ್ರೀನಿವಾಸ್
ನಿರ್ಧಾರವೇನು?
ಇದೀಗ ರಾಬರ್ಟ್ ಸಿನಿಮಾದ ಬಹುಮುಖ್ಯ ಪಾತ್ರ ಜಗಪತಿ ಬಾಬು ಅವರು ಸಿನಿಮಾದ ತಮ್ಮ ಪಾತ್ರಕ್ಕೆ ದನಿ ನೀಡಿದ್ದಾರೆ. ಜಗಪತಿ ಬಾಬು ಡಬ್ಬಿಂಗ್ ಪೂರ್ಣಗೊಳಿಸಿದ ವಿಷಯವನ್ನು ನಿರ್ದೇಶಕ ತರುಣ್ ಕಿಶೋರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಡಬ್ಬಿಂಗ್ ಮುಗಿಸಿದ ಜಗಪತಿ ಬಾಬು
'ಜಗಪತಿ ಬಾಬು ಅವರು ತಮ್ಮ ಮೊದಲ ಕನ್ನಡ ಡಬ್ಬಿಂಗ್ ಕಾರ್ಯವನ್ನು ರಾಬರ್ಟ್ ಗಾಗಿ ಮಾಡಿ ಮುಗಿಸಿದ್ದಾರೆ. ಅವರ ಉಪಸ್ಥಿತಿಯಿಂದ ನಮ್ಮ ಸಿನಿಮಾ ಬೇರೆ ಲೆವೆಲ್ ಗೆ ತಲುಪಿದೆ' ಎಂದಿದ್ದಾರೆ ತರುಣ್ ಕಿಶೋರ್.

ವಿಲನ್ ಆಗಿ ಹಿಟ್ ಆಗಿರುವ ಜಗಪತಿ ಬಾಬು
ತೆಲುಗಿನ ಜಗಪತಿ ಬಾಬು ಇತ್ತೀಚೆಗೆ ವಿಲನ್ ಪಾತ್ರಗಳಿಂದ ಭಾರಿ ಖ್ಯಾತರಾಗಿದ್ದಾರೆ. ವಿಲನ್ ಪಾತ್ರಗಳಿಗೆ ಪ್ರಕಾಶ್ ರೈ ಗಿಂತಲೂ ಹೆಚ್ಚು ಬ್ಯುಸಿಯಾಗಿಬಿಟ್ಟಿದ್ದಾರೆ ಜಗಪತಿ ಬಾಬು. ಅವರು ರಾಬರ್ಟ್ ಸಿನಿಮಾದಲ್ಲೂ ನಟಿಸಿದ್ದು, ತೆಲುಗಿನವರಾಗಿದ್ದರೂ ಕನ್ನಡದಲ್ಲಿ ತಮ್ಮ ಪಾತ್ರಕ್ಕೆ ಅವರೇ ಡಬ್ ಮಾಡಿದ್ದಾರೆ. ಜಗಪತಿ ಬಾಬು ಅವರು ಕನ್ನಡದ ಮದಗಜ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

ಬಹುತಾರಾಗಣ ಹೊಂದಿರುವ ಸಿನಿಮಾ
ದರ್ಶನ್ ನಟನೆಯ ರಾಬರ್ಟ್ ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ಸಹ ಬಹುಮುಖ್ಯ ಪಾತ್ರದಲ್ಲಿದ್ದಾರೆ. ಆಶಾ ಭಟ್ ಸಿನಿಮಾದ ನಾಯಕಿಯಾಗಿದ್ದಾರೆ. ಇದರ ಜೊತೆಗೆ ಖ್ಯಾತ ನಟ ರವಿ ಕಿಶನ್, ನಟ ದೇವರಾಜ್, ಚಿಕ್ಕಣ್ಣ, ರವಿಶಂಕರ್ ಸಹ ಸಿನಿಮಾದಲ್ಲಿದ್ದಾರೆ.
Recommended Video

ಸಿನಿಮಾ ಬಿಡುಗಡೆ ತಡ
ಚಿತ್ರಮಂದಿರಗಳು ಪುನಃ ಪ್ರಾರಂಭವಾಗಿವೆಯಾದರೂ ರಾಬರ್ಟ್ ಸಿನಿಮಾವನ್ನು ತಡವಾಗಿಯೇ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಸ್ಪಷ್ಟಪಡಿಸಿದ್ದಾರೆ. ಚಿತ್ರಮಂದಿರಗಳಿಗೆ ಈಗ ವಿಧಿಸಿರುವ 50% ಪ್ರೇಕ್ಷಕರಿಗೆ ಮಾತ್ರ ಅವಕಾಶದ ನಿಯಮ ತೆಗೆದ ನಂತರವೇ ಸಿನಿಮಾ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ ಅವರು.