For Quick Alerts
  ALLOW NOTIFICATIONS  
  For Daily Alerts

  ಜಗಪತಿ ಬಾಬು ಬರ್ತಡೇಗೆ ಭರ್ಜರಿ ಉಡುಗೊರೆ ಕೊಟ್ಟ ಮದಗಜ

  |

  ದಕ್ಷಿಣ ಭಾರತದ ಖ್ಯಾತ ನಟ ಜಗಪತಿ ಬಾಬು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತೆಲುಗಿನ ಖ್ಯಾತ ನಟನಿಗೆ ಈ ವರ್ಷದ ಹುಟ್ಟುಹಬ್ಬಕ್ಕೆ ಸ್ಯಾಂಡಲ್‌ವುಡ್‌ ಭರ್ಜರಿ ಉಡುಗೊರೆ ನೀಡಿದೆ.

  Recommended Video

  ಭಯಂಕರವಾಗಿದೆ ಮದಗಜ ವಿಲನ್ ಲುಕ್ | Filmibeat Kannada

  ರೋರಿಂಗ್ ಶ್ರೀಮುರಳಿ ನಟನೆಯ ಮದಗಜ ಚಿತ್ರದಲ್ಲಿ ಜಗಪತಿ ಬಾಬು ಪ್ರಮುಖ ಖಳನಾಯಕನ ಪಾತ್ರದಲ್ಲಿ ನಟಿಸಿದ್ದು, ಇಂದು ಜನುಮದಿನದ ಪ್ರಯುಕ್ತ ವಿಶೇಷವಾದ ಟೀಸರ್ ಬಿಡುಗಡೆ ಮಾಡಿದೆ.

  ಫೆಬ್ರವರಿ 12ಕ್ಕೆ ಜಗಪತಿ ಬಾಬು 'ಮದಗಜ' ಫಸ್ಟ್ ಲುಕ್ ಬಿಡುಗಡೆಫೆಬ್ರವರಿ 12ಕ್ಕೆ ಜಗಪತಿ ಬಾಬು 'ಮದಗಜ' ಫಸ್ಟ್ ಲುಕ್ ಬಿಡುಗಡೆ

  ಮದಗಜ ಚಿತ್ರದಲ್ಲಿ ಜಗಪತಿ ಬಾಬು ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬುದಕ್ಕೆ ಟೀಸರ್ ಜೊತೆಗೆ ಫಸ್ಟ್ ಲುಕ್ ಪೋಸ್ಟರ್ ಸಹ ರಿಲೀಸ್ ಮಾಡಿದೆ. ರವಿ ಬಸ್ರೂರು ಅವರ ಸಂಗೀತ, ಜಗಪತಿ ಬಾಬು ಅವರ ಗೆಟಪ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

  ಅಂದ್ಹಾಗೆ, ಈ ಮದಗಜ ಚಿತ್ರವನ್ನು ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣ ಮಾಡಿದ್ದು, ಮಹೇಶ್ ಕುಮಾರ್ ನಿರ್ದೇಶಿಸಿದ್ದಾರೆ. ಉಮಾಪತಿ ನಿರ್ಮಾಣ ಮಾಡಿರುವ ರಾಬರ್ಟ್ ಚಿತ್ರದಲ್ಲೂ ಜಗಪತಿ ಬಾಬು ಕಾಣಿಸಿಕೊಂಡಿದ್ದು, ರಾಬರ್ಟ ಚಿತ್ರತಂಡದಿಂದಲೂ ತೆಲುಗು ನಟನಿಗೆ ಬರ್ತಡೇ ಸರ್ಪ್ರೈಸ್ ನೀಡಲಾಗಿದೆ.

  ಇನ್ನುಳಿದಂತೆ ಮದಗಜ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಶ್ರೀಮುರಳಿಗೆ ಜೋಡಿಯಾಗಿ ಆಶಿಕಾ ರಂಗನಾಥ್ ನಟಿಸಿದ್ದಾರೆ. ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಮದಗಜ ಸಿನಿಮಾ ರಿಲೀಸ್ ಆಗುತ್ತಿದೆ. ಮೂರು ಭಾಷೆಯಲ್ಲಿ ಈಗಾಗಲೇ ಟೀಸರ್ ರಿಲೀಸ್ ಆಗಿದ್ದು, ಸೌತ್ ಇಂಡಿಯಾದಲ್ಲಿ ಸದ್ದು ಮಾಡ್ತಿದೆ.

  English summary
  Telugu Actor Jagapathi Babu Birthday: Jagapathi Babu's Character Look From SriMurali MadhaGaja released.
  Saturday, February 13, 2021, 8:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X