For Quick Alerts
  ALLOW NOTIFICATIONS  
  For Daily Alerts

  'ಮಾರ್ಚ್ 22' ನಟ ಜಗ್ಗೇಶ್ ಜೀವನದಲ್ಲೇ ತುಂಬಾ ವಿಶೇಷವಾದ ದಿನ

  |

  ಮಾರ್ಚ್ 22 ನಟ ಜಗ್ಗೇಶ್ ದಂಪತಿಗೆ ವಿಶೇಷವಾದ ದಿನ. ನವರಸನಾಯಕನ ಜೀವನವನ್ನೆ ಬದಲಾಯಿಸಿದ ದಿನವಿದು. ಯಾಕಂದ್ರೆ ಜಗ್ಗೇಶ್ ದಾಂಪತ್ಯ ಜೀನವನಕ್ಕೆ ಕಾಲಿಟ್ಟ ದಿನವಿದು. ಅಂದ್ಹಾಗೆ ಜಗ್ಗೇಶ್ ಎಲ್ಲರಂತೆ ಅದ್ದೂರಿಯಾಗಿ ಧಾಂ ಧೂಂ ಆಗಿ ಹಸೆಮಣೆ ಏರಿಲ್ಲ. ಜಗ್ಗೇಶ್ ಮದುವೆ ವಿಚಾರ ಸುಪ್ರೀಂ ಕೋರ್ಟ್ ವರೆಗೂ ಹೋಗಿರುವುದು ಇಂದಿಗೂ ಲ್ಯಾಂಡ್ ಮಾರ್ಕ್ ಆಗಿ ಉಳಿದಿದೆ.

  2 ಸಾವಿರ ರೂಪಾಯಿಯಲ್ಲಿ ಮದುವೆಯಾಗಿದ್ದ ಜಗ್ಗೇಶ್ | Jaggesh | Filmibeat Kannada

  ಜಗ್ಗೇಶ್ ಮತ್ತು ಪರಿಮಳ ಅವರ ಲವ್ ಸ್ಟೋರಿ ಯಾವ ಸಿನಿಮಾಗಿಂತ ಕಮ್ಮಿಯಿಲ್ಲ. ಸಿನಿಮಾಗಳಲ್ಲಿ ಬರುವಂತೆ ಲವ್, ಫೈಟ್, ಪೊಲೀಸ್, ಕೇಸ್ ಹೀಗೆ ಎಲ್ಲವೂ ಜಗ್ಗೇಶ್ ಅವರ ಬಾಳಲ್ಲಿ ನಡೆದಿದೆ. ಇದೆಲ್ಲವನ್ನು ಎದುರಿಸಿ, ಪ್ರೀತಿಸಿದವಳ ಕೈಹಿಡಿದು 36 ವರ್ಷಗಳ ಕಾಲ ಸುಖಕರ ಜೀವನ ಮಾಡಿದ್ದಾರೆ ನಟ ಜಗ್ಗೇಶ್. ಇಂದು ಜಗ್ಗೇಶ್ ದಂಪತಿ 37ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಮುಂದೆ ಓದಿ...

  ಜಗ್ಗೇಶ್ ನಟನಾಗುವ ಬಗ್ಗೆ ಭವಿಷ್ಯ ನುಡಿದಿದ್ದ ಮೇಷ್ಟ್ರು ಇನ್ನಿಲ್ಲ

  1984ರಲ್ಲಿ ಮದುವೆ

  1984ರಲ್ಲಿ ಮದುವೆ

  ಮಾರ್ಚ್ 22, 1984ರಲ್ಲಿ ನಟ ಜಗ್ಗೇಶ್, ಪರಿಮಳ ಜೊತೆ ಸಪ್ತಪದಿ ತುಳಿದಿದ್ದಾರೆ. ಆಗ ಜಗ್ಗೇಶ್ ಮದುವೆಗಾಗಿ ಖರ್ಚು ಮಾಡಿದ್ದು ಕೇವಲ 2 ಸಾವಿರ. ಈಗಿನ ಸಮಯಕ್ಕೆ ಅದು ಲಕ್ಷಕ್ಕೆ ಸಮ ಎನ್ನಬಹುದು. ಕಷ್ಟದ ಜೀವನ ಆರಂಭಿಸಿ ಇಂದು ಜಗ್ಗೇಶ್ ಹಣ, ಅಂತಸ್ತು ಗಳಿಸಿ ರಾಯರ ಆಶೀರ್ವಾದದಿಂದ ರಾಯಲ್ ಆಗಿ ಜೀವಿಸುತ್ತಿದ್ದಾರೆ.

  ಮದುವೆಯಲ್ಲಿ ಪರಿಮಳ ಅವರಿಗೆ 14 ವರ್ಷ

  ಮದುವೆಯಲ್ಲಿ ಪರಿಮಳ ಅವರಿಗೆ 14 ವರ್ಷ

  ಜಗ್ಗೇಶ್ ಮತ್ತು ಪರಿಮಳ ಅವರು ಮೊದಲ ಸಲ ಭೇಟಿಯಾದಾಗ ಜಗ್ಗಣ್ಣನಿಗೆ 19 ವರ್ಷ ಮತ್ತು ಪರಿಮಳ ಅವರಿಗೆ 14 ವರ್ಷ ವಯಸ್ಸು. ಜಗ್ಗೇಶ್ ಮೊದಲ ವರ್ಷದ ಡಿಗ್ರಿ, ಪರಿಮಳ ಅವರು ಒಂಭತ್ತನೇ ತರಗತಿ. ಪ್ರೀತಿಯನ್ನು ಮನೆಯವರು ಒಪ್ಪದ ಕಾರಣ, 22 ಮಾರ್ಚ್ 1984ರಲ್ಲಿ ಪೋಷಕರ ಕಣ್ತಪ್ಪಿಸಿ ರಿಜಿಸ್ಟರ್ ಮದುವೆ ಆಗುತ್ತಾರೆ. ಪರಿಮಳ ಅವರು ಆಗ ಅಪ್ರಾಪ್ತ ವಯಸ್ಸಿನಲ್ಲಿದ್ದ ಕಾರಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

  'ಅಬ್ಬರಿಸಿ ಬೊಬ್ಬಿರಿದರಿಲ್ಲಾರಿಗೂ ಭಯವಿಲ್ಲ' ಎಂದ ನಟ ಜಗ್ಗೇಶ್!

  ಜಗ್ಗೇಶ್ ವಿರುದ್ಧ ಕಿಡ್ನ್ಯಾಪ್ ಕೇಸ್

  ಜಗ್ಗೇಶ್ ವಿರುದ್ಧ ಕಿಡ್ನ್ಯಾಪ್ ಕೇಸ್

  ಪರಿಮಳ ಅವರನ್ನು ಅವರ ಮನೆಯಿಂದ ಜಗ್ಗೇಶ್ ಅವರು ಕರೆದುಕೊಂಡು ಬಂದುಬಿಟ್ಟಿದ್ದರು. ಆ ಸಮಯದಲ್ಲಿ ಅವರ ಮೇಲೆ ಕಿಡ್ನ್ಯಾಪ್ ಕೇಸ್ ದಾಖಲಾಗಿತ್ತು. 'ಚಿತ್ರನಟನಿಂದ ಕಿಡ್ನ್ಯಾಪ್' ಎಂದು ಪತ್ರಿಕೆಗಳಲ್ಲಿ ಸುದ್ದಿಯಾಗಿತ್ತು.ಈ ಪ್ರಕರಣ ಸುಪ್ರೀಂ ಕೋರ್ಟ್ ವರೆಗೂ ಹೋಗಿತ್ತು.

  ಸುಪ್ರೀಂ ಕೋರ್ಟ್ ತೀರ್ಪು

  ಸುಪ್ರೀಂ ಕೋರ್ಟ್ ತೀರ್ಪು

  ಅಪ್ರಾಪ್ತ ಯುವತಿಯನ್ನು ಅಪಹರಣ ಮಾಡಿ, ಮದುವೆ ಆಗಿರುವ ಬಗ್ಗೆ ನಟ ಜಗ್ಗೇಶ್ ವಿರುದ್ಧ ದಾಖಲಾಗಿದ್ದ ಪ್ರಕರಣ, ಸುಪ್ರೀಂ ಕೋರ್ಟ್ ನಲ್ಲಿ ತೀರ್ಮಾನವಾಗಿತ್ತು. ಅಂದು ಮಾನವೀಯತೆಯ ಆಧಾರದ ಮೇಲೆ, ಜಗ್ಗೇಶ್-ಪರಿಮಳ ಪ್ರೇಮಕ್ಕೆ ಬೆಲೆಕೊಟ್ಟ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಸಂವಿಧಾನದ ವಿರುದ್ಧ ಹೋಗಿ ಪ್ರೇಮಿಗಳ ಪರ ತೀರ್ಪು ಕೊಟ್ಟರು. ಅಂದು ಎದುರಿಸಿದ ಕಷ್ಟಗಳಿಗೆ ಉತ್ತರ ಕೊಡಬೇಕೆಂದು ತೀರ್ಮಾನಿಸಿದ ಜಗ್ಗೇಶ್ ದಂಪತಿ ಇಂದು ಅನೇಕರಿಗೆ ಮಾದರಿಯಾಗಿದ್ದಾರೆ. ಜಗ್ಗೇಶ್ ಸ್ಯಾಂಡಲ್ ವುಡ್‌ನ ಖ್ಯಾತ ನಟರಾಗಿ ಬೆಳೆದಿದ್ದಾರೆ. ಸಿನಿಮಾರಂಗ ಮಾತ್ರವಲ್ಲದೆ, ರಾಜಕೀಯದಲ್ಲೂ ಸಕ್ರೀಯರಾಗಿದ್ದಾರೆ.

  ನವರಸನಾಯಕ ಜಗ್ಗೇಶ್‌ಗೆ ಡಿ ಬಾಸ್ ದರ್ಶನ್ ಶುಭಕೋರಿದ್ದು ಹೀಗೆ

  ಎರಡನೇ ತಾಯಿ ಸ್ಥಾನ ನೀಡಿರುವೆ- ಜಗ್ಗೇಶ್ ಟ್ವೀಟ್

  ಎರಡನೇ ತಾಯಿ ಸ್ಥಾನ ನೀಡಿರುವೆ- ಜಗ್ಗೇಶ್ ಟ್ವೀಟ್

  "ಋಣಾನುಬಂಧಂರೂಪೇಣಾಂ ಪಶುಪತ್ನಿಸುತಆಲಯ. Marriages are made in heaven. ಪ್ರೀತಿಸುವುದು ತಪ್ಪಲ್ಲ, ಪ್ರೀತಿಸಿದ ಮೇಲೆ ಬಾಳದಿರುವುದು ತಪ್ಪು. 22/3/1984 ನಾನು ಪರಿಮಳನಿಗೆ ತಾಳಿ ಕಟ್ಟಿ ಇಂದಿಗೆ 37ವರ್ಷ. ನನ್ನ ಎಲ್ಲಾ ಗುಣ ಕಷ್ಟ ಸಹಿಸಿ ಹೆಜ್ಜೆ ಹಾಕಿ ಬದುಕಿದ ಮಡದಿಗೆ ಧನ್ಯವಾದ ಸಣ್ಣ ಪದ. ನನ್ನ ಎರಡನೇ ತಾಯಿ ಸ್ಥಾನ ನೀಡಿರುವೆ' ಎಂದು ಟ್ವೀಟ್ ಮಾಡಿದ್ದಾರೆ.

  English summary
  Actor Jaggesh and His Wife Parimala Celebrates Their 37th Wedding Anniversary on March 22.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X