»   » ಗಾಯಕ ಎಲ್.ಎನ್ ಶಾಸ್ತ್ರಿಗೆ ನಟ ಜಗ್ಗೇಶ್ ನೆರವು

ಗಾಯಕ ಎಲ್.ಎನ್ ಶಾಸ್ತ್ರಿಗೆ ನಟ ಜಗ್ಗೇಶ್ ನೆರವು

Posted By:
Subscribe to Filmibeat Kannada

ಕ್ಯಾನ್ಸರ್‌ ನಿಂದ ಬಳಲುತ್ತಿರುವ ಗಾಯಕ, ಸಂಗೀತ ನಿರ್ದೇಶಕ ಎಲ್‌.ಎನ್‌.ಶಾಸ್ತ್ರಿ ಅವರಿಗೆ ಸಹಾಯ ಮಾಡಲು ನವರಸ ನಾಯಕ ಜಗ್ಗೇಶ್‌ ಮುಂದಾಗಿದ್ದಾರೆ.

ಎಲ್‌. ಎನ್‌. ಶಾಸ್ತ್ರಿ ಕನ್ನಡದ ಖ್ಯಾತ ಗಾಯಕ. ಸುಮಾರು 300ಕ್ಕೂ ಗೀತೆಗಳನ್ನು ಇವರು ಹಾಡಿದ್ದಾರೆ. 1996ರಲ್ಲಿ ತೆರೆಕಂಡಿದ್ದ 'ಅಜಗಜಾಂತರ' ಸಿನಿಮಾ ಮೂಲಕ ಇವರು ಚಿತ್ರರಂಗಕ್ಕೆ ಕಾಲಿಟ್ಟರು. ಜಗ್ಗೇಶ್‌ ಅವರ ಅನೇಕ ಚಿತ್ರಗಳಲ್ಲಿ ಶಾಸ್ತ್ರಿ ಕೆಲಸ ಮಾಡಿದ್ದಾರೆ.

ಸದ್ಯ ಇವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಇದನ್ನು ಗಮನಿಸಿದ ನಟ ಜಗ್ಗೇಶ್‌, ಆರ್ಥಿಕವಾಗಿ ಸಹಾಯ ಮಾಡಲು ನಿರ್ಧರಿಸಿದ್ದಾರೆ.

ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಗಾಯಕ ಎಲ್.ಎನ್.ಶಾಸ್ತ್ರಿ

Jaggesh helps to Singer LN Shastri

ಈ ಕುರಿತು ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ಜಗ್ಗೇಶ್‌, ''ನನಗೆ ಹಾಡಿದ ಮಹನೀಯ, ನಾನು ಸಹಾಯ ಮಾಡುವೆ. ಸಂಬಂಧಪಟ್ಟವರಿಗೆ ಈಗಲೇ ಮಾತಾಡುವೆ. ದೇವರೆ ತುಂಬ ದುಖ್ಖವಾಯಿತು, ದೇವರಂತ ಮನುಷ್ಯನಿಗೆ ಈ ಪರೀಕ್ಷೆ ಏಕೆ? ರಾಯರ ದಯೇ ಇರಲಿ ಇವರ ಮೇಲೆ'' ಎಂದಿದ್ದಾರೆ.

''ಅವರು ಭಾವಜೀವಿ, 'ಭಂಡ ನನ್ನ ಗಂಡ' ಚಿತ್ರಕ್ಕೆ ರಾತ್ರಿಯಲ್ಲಾ ನನ್ನ ಜೊತೆ ಕೂತು 'ಅಂತಿಂಥ ಗಂಡು ನಾನಲ್ಲಾ' ಹಾಡಲು ಸಹಾಯ ಮಾಡಿದ್ದರು. ನನ್ನ ಅನೇಕ ಚಿತ್ರಕ್ಕೆ ಈತನೆ ಹಾಡುತಿದ್ದ'' ಎಂದಿದ್ದಾರೆ.

English summary
Kannada Actor Jaggesh has taken his twitter account to express his displeasure about Singer LN Shastri. Singer LN Shastri suffering from cancer
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada