For Quick Alerts
  ALLOW NOTIFICATIONS  
  For Daily Alerts

  ನನ್ನ ಪದಬಳಕೆ ಅರ್ಥವಾಗದೆ ಅಸೂಯೆ ಎಂದು ಭಾವಿಸಿದರೆ ದೌರ್ಭಾಗ್ಯ: ಜಗ್ಗೇಶ್

  |

  ಒಕ್ಕಲಿಗರ ವಿದ್ಯಾ ಸಂಸ್ಥೆಯ ಕಾರ್ಯಕ್ರಮದಲ್ಲಿ ಹಿರಿಯ ಸಾಧಕರ ಜೊತೆಗೆ ಯುವ ನಟಿ ಪ್ರಿಯಾ ವಾರಿಯರ್ ವೇದಿಕೆ ಹಂಚಿಕೊಂಡಿದ್ದಕ್ಕೆ ನಟ ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದರು.

  ಈ ಬಗ್ಗೆ ನಿರ್ಮಾಪಕ ಕೆ ಮಂಜು ಪ್ರತಿಕ್ರಿಯಿಸಿದ್ದು, ''ಜಗ್ಗೇಶ್ ಅವರಿಗೆ ಬೇಸರ ಯಾಕೆ ಎಂದು ಅರ್ಥವಾಗಿಲ್ಲ. ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ'' ಎಂದಿದ್ದರು. ಇದೇ ವೇಳೆ 'ಹೊಸಬರು ಅಂದ್ರೆ ಅಸೂಯೆ ಪಡಬಾರದು, ಎಲ್ಲರನ್ನು ಬೆಳೆಸಬೇಕು' ಎಂಬ ಮಾತನ್ನು ಕೂಡ ಹೇಳಿದ್ದರು.

  ಅಸೂಯೆ ಪಡಬಾರದು, ಎಲ್ಲರನ್ನು ಬೆಳೆಸಬೇಕು: ಜಗ್ಗೇಶ್ ಟ್ವೀಟ್ ಬಗ್ಗೆ ಕೆ ಮಂಜು ಪ್ರತಿಕ್ರಿಯೆಅಸೂಯೆ ಪಡಬಾರದು, ಎಲ್ಲರನ್ನು ಬೆಳೆಸಬೇಕು: ಜಗ್ಗೇಶ್ ಟ್ವೀಟ್ ಬಗ್ಗೆ ಕೆ ಮಂಜು ಪ್ರತಿಕ್ರಿಯೆ

  ಕೆ ಮಂಜು ಅವರ ಹೇಳಿಕೆ ಕುರಿತು ಜಗ್ಗೇಶ್ ಟ್ವಿಟ್ಟರ್ ನಲ್ಲಿ ಮಾತನಾಡಿದ್ದಾರೆ. ''ನನ್ನ ಪದಬಳಕೆ ಅರ್ಥವಾಗದೆ ಅಸೂಯೆ ಎಂದು ಭಾವಿಸಿದರೆ ದೌರ್ಭಾಗ್ಯ! ನಾನು ಯಾವ ನಟಿಯನ್ನು ವಿರೋಧಿಸಿಲ್ಲಾ! ಯಾರಿಂದ ನನಗೇನು ಆಗಬೇಕಿಲ್ಲ! ನಿರ್ಮಲಾನಂದ ಶ್ರೀಗಳ ಮಾರ್ಗದರ್ಶನ ಹಿತವಚನಕ್ಕಿಂತ ಅಲ್ಲಿದ್ದ ಯುವ ಸಮುದಾಯಕ್ಕೆ glamour ಮುಖ್ಯವಾಯಿತೆ ವಿನಹ ಬದುಕಿಗೆ ಮಾರ್ಗ ತೋರಿಸುವ ಮಾತು ನಗಣ್ಯವಾಯಿತೆ ಎಂದು ಕೊರಗಿದೆ! ಬರವಣಿಗೆ ಅರ್ಥವಾಗದ ಮಹನೀಯರು!'' ಎಂದು ಟ್ವೀಟ್ ಮಾಡಿದ್ದಾರೆ.

  ಕಣ್ ಸನ್ನೆ ಹುಡುಗಿಯ ವಿರುದ್ಧ ಕೆಂಡಕಾರಿದ ನವರಸನಾಯಕ ಜಗ್ಗೇಶ್ಕಣ್ ಸನ್ನೆ ಹುಡುಗಿಯ ವಿರುದ್ಧ ಕೆಂಡಕಾರಿದ ನವರಸನಾಯಕ ಜಗ್ಗೇಶ್

  ಅಂದ್ಹಾಗೆ, ಬಿಜಿಎಸ್ ವಿದ್ಯಾ ಸಂಸ್ಥೆಯ ಕಾರ್ಯಕ್ರಮಕ್ಕೆ ಪ್ರಿಯಾರನ್ನು ಕೆ ಮಂಜು ಕರೆದುಕೊಂಡು ಹೋಗಿದ್ದರು. ಕೆ ಮಂಜು ನಿರ್ಮಾಣದ ಚಿತ್ರದಲ್ಲಿ ಪ್ರಿಯಾ ನಟಿಸುತ್ತಿದ್ದಾರೆ. ಈ ಹಿನ್ನೆಲೆ ಪ್ರಿಯಾ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹಾಗಾಗಿ, ಈ ಕಾರ್ಯಕ್ರಮಕ್ಕೆ ಕೆ ಮಂಜು ಅವರು ಪ್ರಿಯಾ ವಾರಿಯರ್ ಅವರನ್ನ ಕರೆದುಕೊಂಡು ಬಂದಿದ್ದರು.

  English summary
  Kannada actor Jaggesh has react on producer k manju statement about priya prakash varrier.
  Wednesday, November 13, 2019, 18:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X