»   » 'ಟೈಗರ್' ಖದರ್ ಕಂಡು ನವರಸ ನಾಯಕ ಜಗ್ಗೇಶ್ ಫುಲ್ ಖುಷ್

'ಟೈಗರ್' ಖದರ್ ಕಂಡು ನವರಸ ನಾಯಕ ಜಗ್ಗೇಶ್ ಫುಲ್ ಖುಷ್

Posted By:
Subscribe to Filmibeat Kannada

ನಂದ ಕಿಶೋರ್ ನಿರ್ದೇಶನದ 'ಟೈಗರ್' ಸಿನಿಮಾ ಕಳೆದ ಶುಕ್ರವಾರ ರಿಲೀಸ್ ಆಗಿ ಯಶಸ್ವಿಯಾಗಿ ಮುನ್ನುಗುತ್ತಿದೆ. ಆಕ್ಷನ್ ಸಿನಿಮಾವಾಗಿರುವ 'ಟೈಗರ್' ಚಿತ್ರವನ್ನು ಮಾಸ್ ಪ್ರೇಕ್ಷಕರು ದೊಡ್ಡ ಮಟ್ಟದಲ್ಲಿ ಇಷ್ಟ ಪಟ್ಟಿದ್ದಾರೆ. ಇದೀಗ ಸಿನಿಮಾದ ಬಗ್ಗೆ ನಟ ಜಗ್ಗೇಶ್ ಮಾತನಾಡಿದ್ದಾರೆ.

'ಟೈಗರ್' ಖದರ್ ನೋಡಿ ಫಿದಾ ಆಗಿರುವ ಜಗ್ಗೇಶ್ ಸಿನಿಮಾದ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದಾರೆ. 'ಟೈಗರ್' ಒಳ್ಳೆಯ ಕಮರ್ಷಿಯಲ್ ಸಿನಿಮಾ. ಇದೇ ರೀತಿಯ ಸಿನಿಮಾವನ್ನು ಬೇರೆ ಚಿತ್ರರಂಗದಲ್ಲಿ ಮಾಡಿದ್ದರೆ, ನಮಗೆ ಆಶ್ಚರ್ಯ ಆಗುತ್ತಿತ್ತು. ಆ ರೀತಿಯ ಒಂದು ಸಿನಿಮಾವನ್ನು ಇವರು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Jaggesh Talks About 'Tiger' movie

ವಿಮರ್ಶೆ : ಮಾಸ್ ಪ್ರೇಕ್ಷಕರ ಮನ ತಣಿಸುವ 'ಟೈಗರ್'

ಸಿನಿಮಾದ ಬಗ್ಗೆ ಮೆಚ್ಚುಗೆ ಸೂಚಿಸಿರುವ ಜಗ್ಗೇಶ್ 'ಟೈಗರ್' ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಅಲ್ಲದೇ, ನಂದ ಕಿಶೋರ್ ಮತ್ತು ಪ್ರದೀಪ್ ಕಾಂಬಿನೇಷನ್ ನಲ್ಲಿ ಇನ್ನೊಂದು ಸಿನಿಮಾ ನೋಡಬೇಕು ಎಂಬುದು ಅವರ ಆಸೆಯಾಗಿದೆಯಂತೆ.

'ಟೈಗರ್' ಘರ್ಜನೆ ನೋಡಿದ ವಿಮರ್ಶಕರು ಏನಂದ್ರು?

'ಟೈಗರ್' ಸಿನಿಮಾ ಕಪ್ಲಿಂಟ್ ಆಕ್ಷನ್ ಮತ್ತು ರೊಮ್ಯಾಂಟಿಕ್ ಡ್ರಾಮ ಆಗಿದ್ದು ಚಿತ್ರದಲ್ಲಿ ಪ್ರದೀಪ್, ಶಿವರಾಂ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

English summary
Kannada Actor Jaggesh Spoke About 'Tiger' Movie. The Movie is Directed by Nanda Kishore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada