»   » ಮದುಮಗ ಯೋಗಿಗೆ ನಟ ಜಗ್ಗೇಶ್ ತಿಳುವಳಿಕೆ ಹೇಳಿದ ಪರಿ ಇದು

ಮದುಮಗ ಯೋಗಿಗೆ ನಟ ಜಗ್ಗೇಶ್ ತಿಳುವಳಿಕೆ ಹೇಳಿದ ಪರಿ ಇದು

Posted By:
Subscribe to Filmibeat Kannada

ನಟ ಲೂಸ್ ಮಾದ ಯೋಗಿ ಮದುವೆ ಡೇಟ್ ಫಿಕ್ಸ್ ಆಗಿದೆ. ನವೆಂಬರ್ 2ಕ್ಕೆ ಯೋಗಿ-ಸಾಹಿತ್ಯ ಜೋಡಿ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ. ಈ ಸುದ್ದಿ ಕೇಳಿದ ಕೂಡಲೆ, ಮದುಮಗ ಯೋಗಿ ಅವರಿಗೆ ನವರಸ ನಾಯಕ ಜಗ್ಗೇಶ್ ತಮ್ಮದೇ ಸ್ಟೈಲ್ ನಲ್ಲಿ ವಿಶ್ ಮಾಡಿದ್ದಾರೆ.

ತಮ್ಮ ಟ್ವಿಟ್ಟರ್ ಅಕೌಂಟ್ ಮೂಲಕ ಯೋಗಿ ರವರಿಗೆ ಜಗ್ಗೇಶ್ ಸ್ವಲ್ಪ ಡಿಫರೆಂಟ್ ಆಗಿ ಶುಭಾಶಯ ತಿಳಿಸಿದ್ದಾರೆ. ಅಲ್ಲದೆ ಮದುಮಗ ಯೋಗಿಗಾಗಿ ಕವನವೊಂದನ್ನು ಬರೆದಿರುವ ಜಗ್ಗೇಶ್ ಅದರಲ್ಲಿ ಯೋಗಿಯನ್ನು ಆನೆಗೆ ಹೋಲಿಸಿದ್ದಾರೆ.[ಇದೀಗ ಬಂದ ಸುದ್ದಿ: ಲೂಸ್ ಮಾದ ಯೋಗಿ ಮದುವೆ ದಿನಾಂಕ ಫಿಕ್ಸ್]

ಸದ್ಯದಲ್ಲೇ 'ಸಿಂಗಲ್' ಸ್ಟೇಟಸ್ ಗೆ ವಿದಾಯ ಹೇಳಲಿರುವ ಲೂಸ್ ಮಾದ ಯೋಗಿಗಾಗಿ ನಟ ಜಗ್ಗೇಶ್ ಬರೆದಿರುವ ಕವನ ಬಲು ಸೊಗಸಾಗಿದೆ. ಅದನ್ನ ನೀವೂ ಒಮ್ಮೆ ಓದಿಬಿಡಿ....

ಜಗ್ಗೇಶ್ ಶುಭಾಶಯ

ಮದುಮಗ ನಟ ಲೂಸ್ ಮಾದ ಯೋಗಿ ಮದುವೆಯಾಗುತ್ತಿದ್ದಾರೆ ಅಂತ ತಿಳಿದ ತಕ್ಷಣ ಜಗ್ಗೇಶ್ ಯೋಗಿ ಅವರಿಗೋಸ್ಕರ ಒಂದು ಸೂಪರ್ ಆಗಿರುವ ಕವನವನ್ನೇ ಬರೆದಿದ್ದಾರೆ. ತಮ್ಮ ಕವಿತೆ ಮೂಲಕ ಯೋಗಿ-ಸಾಹಿತ್ಯ ಜೋಡಿಗೆ ಡಿಫರೆಂಟ್ ಆಗಿ ಶುಭಾಶಯ ತಿಳಿಸಿದ್ದಾರೆ.

ಜಗ್ಗೇಶ್ ಕವಿತೆ

''ಒಬ್ಬಂಟಿ ಬಾಳು ಬಲುಗೋಳು, ಅದಕ್ಕೆ ಬೀಳಲಿ ತೆರೆ,

ಜಂಟಿಯಾಗಿ ಹಾಡಿ ಬಾಳಗೀತೆ, ಶೃತಿ ಲಯ ತಾಳ ಸರಿಯಿದ್ದರೆ, ಅದರ ಅನುಭವವೇ ಬೇರೆ, ಮೂಡಿಬರಲಿ ಅದ್ಭುತ ಯುಗಳ ಗೀತೆ, ನಲಿಯಲಿ ಮನೆಮನಸು!'' - ಜಗ್ಗೇಶ್, ನಟ

ಕೆಡ್ಡಕ್ಕೆ ಬಿತ್ತು ಕನ್ನಡದ ಇನ್ನೊಂದು ಆನೆ

''ಇಷ್ಟು ದಿನ ಒಂಟಿಸಲಗ, ಅದು ನಡದದ್ದೆ ಹಾದಿ, ಬದುಕಲ್ಲಿ ಈಗ ಅಡ್ಡಬಂತು ಸಂಗಾತಿ, ಅದರ ಹಿಂದೆ ಹೆಜ್ಜೆ ಹಾಕುವುದೇ ಸರಿದಾರಿ, ಹೆಣ್ಣಾನೆಯಿಂದ ಕೆಡ್ಡಕ್ಕೆಬಿತ್ತು ಕನ್ನಡದ ಇನ್ನೊಂದು ಆನೆ!'' - ಜಗ್ಗೇಶ್, ನಟ

ಜಗ್ಗೇಶ್ ಕಿವಿಮಾತು

ತಮ್ಮ ಕವನದ ಮೂಲಕವೇ ಯೋಗಿಗೆ ಜಗ್ಗೇಶ್ ಕಿವಿಮಾತು ಹೇಳಿದ್ದಾರೆ.

ನವೆಂಬರ್ ಗೆ ಯೋಗಿ ಕಲ್ಯಾಣ

ಯೋಗಿ ತಮ್ಮ ಗೆಳತಿ ಸಾಹಿತ್ಯ ಜೊತೆ ಮದುವೆಯಾಗಲಿದ್ದಾರೆ. ಜೂನ್ 11ಕ್ಕೆ ಯೋಗಿ-ಸಾಹಿತ್ಯ ನಿಶ್ಚಿತಾರ್ಥ ನಡೆಯಲಿದೆ. ಮದುವೆಯ ಡೇಟ್ ನವೆಂಬರ್ 2 ಕ್ಕೆ ಫಿಕ್ಸ್ ಆಗಿದೆ.

English summary
Kannada Actor Jaggesh has taken his twitter account to wish for the new couple Lose mada Yogesh and Sahithya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada