»   » ಇದೀಗ ಬಂದ ಸುದ್ದಿ: ಲೂಸ್ ಮಾದ ಯೋಗಿ ಮದುವೆ ದಿನಾಂಕ ಫಿಕ್ಸ್

ಇದೀಗ ಬಂದ ಸುದ್ದಿ: ಲೂಸ್ ಮಾದ ಯೋಗಿ ಮದುವೆ ದಿನಾಂಕ ಫಿಕ್ಸ್

Posted By: Naveen
Subscribe to Filmibeat Kannada

ಲೂಸ್ ಮಾದ ಯೋಗಿ ಲವ್ ಸ್ಟೋರಿ ಬಗ್ಗೆ ನೀವೆಲ್ಲರೂ 'ಫಿಲ್ಮಿ ಬೀಟ್ ಕನ್ನಡ' ಪುಟದಲ್ಲಿ ಓದಿರಬಹುದು. ಒಂದ್ವೇಳೆ ಓದಿಲ್ಲ ಅಂದ್ರೆ... ಈ ಲಿಂಕ್ ಕ್ಲಿಕ್ ಮಾಡಿ ಮೊದಲು ಓದಿಬಿಡಿ...

ಎರಡ್ಮೂರು ವರ್ಷಗಳಿಂದ ಪ್ರೇಮದ ಅಮಲಿನಲ್ಲಿ ತೇಲುತ್ತಿರುವ ಯೋಗಿ ಮತ್ತು ಸಾಹಿತ್ಯ ಇದೀಗ ಹಸೆಮಣೆ ಏರಲು ಸಿದ್ಧವಾಗಿದ್ದಾರೆ. ಗುರು ಹಿರಿಯರ ಸಮ್ಮತಿ ಪಡೆದು ವಿವಾಹವಾಗಲು ಸಜ್ಜಾಗಿದ್ದಾರೆ.[ಲೂಸ್ ಮಾದ ಯೋಗಿ 'ರಿಯಲ್' ಲವ್ ಸ್ಟೋರಿ ಬಹಿರಂಗ.!]

ಜೂನ್ 11ಕ್ಕೆ ಯೋಗಿ-ಸಾಹಿತ್ಯ ನಿಶ್ಚಿತಾರ್ಥ ನಡೆಯಲಿದ್ದು, ಮದುವೆಯ ಡೇಟ್ ಸಹ ಫಿಕ್ಸ್ ಆಗಿದೆ. ಮುಂದೆ ಓದಿ....

ಯೋಗಿ ವೆಡ್ಸ್ ಸಾಹಿತ್ಯ

ಲೂಸ್ ಮಾದ ಯೋಗಿ ಮತ್ತು ಸಾಹಿತ್ಯ ಮದುವೆಗೆ ಡೇಟ್ ಫಿಕ್ಸ್ ಆಗಿದೆ. ಇಬ್ಬರ ಮನೆಯವರು ಸಹ ಮಾತುಕತೆ ನಡೆಸಿ ಒಂದು ಶುಭ ಗಳಿಗೆಯಲ್ಲಿ ಮದುವೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.

ಜೂನ್ 11ಕ್ಕೆ ಎಂಗೇಜ್ ಮೆಂಟ್

ನಟ ಯೋಗಿ ಎಂಗೇಜ್ ಮೆಂಟ್ ಮುಂದಿನ ತಿಂಗಳು ಅಂದ್ರೆ ಜೂನ್ 11ಕ್ಕೆ ನಿಗದಿ ಮಾಡಲಾಗಿದೆ. ಬೆಂಗಳೂರಿನಲ್ಲೇ ಯೋಗಿ ಮತ್ತು ಸಾಹಿತ್ಯ ನಿಶ್ಚಿತಾರ್ಥ ನಡೆಯಲಿದೆ.

ಆಪ್ತರಿಗೆ ಮಾತ್ರ

ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಈಗಾಗಲೇ ತಯಾರಿಗಳು ಶುರುವಾಗಿದೆಯಂತೆ. ಹತ್ತಿರದ ಸಂಬಂಧಿಗಳಿಗೆ ಮತ್ತು ಚಿತ್ರರಂಗದ ಆಪ್ತ ಗೆಳೆಯರಿಗೆ ಮಾತ್ರ ಆಮಂತ್ರಣ ನೀಡಲಾಗುವುದಂತೆ.

ನವೆಂಬರ್ 2ಕ್ಕೆ ಮದುವೆ

ಯೋಗಿ ಮತ್ತು ಸಾಹಿತ್ಯ ಮದುವೆಗೆ ಡೇಟ್ ಫಿಕ್ಸ್ ಮಾಡಲಾಗಿದೆ. ಇದೇ ನವೆಂಬರ್ 2ಕ್ಕೆ ಅದ್ಧೂರಿಯಾಗಿ ಇವರ ವಿವಾಹ ಮಹೋತ್ಸವ ನಡೆಸಲು ಗುರು ಹಿರಿಯರು ನಿಶ್ಚಯಿಸಿದ್ದಾರೆ.

ಮದುವೆಯ ಬಗ್ಗೆ

ನವೆಂಬರ್ 2ಕ್ಕೆ ಯೋಗಿ ಮತ್ತು ಸಾಹಿತ್ಯ ಮದುವೆ ನಡೆಯುವುದು ಪಕ್ಕಾ ಆಗಿದೆ. ಆದರೆ, ಮದುವೆಗೆ ಇನ್ನೂ ಆರು ತಿಂಗಳು ಬಾಕಿ ಇರುವುದರಿಂದ ಮದುವೆಯ ವಿಶೇಷತೆಗಳ ಬಗ್ಗೆ ಎರಡು ಕುಟುಂಬಗಳು ಸದ್ಯಕ್ಕೆ ಯಾವುದೇ ಪ್ಲಾನ್ ಮಾಡಿಲ್ಲವಂತೆ.

ಸಾಹಿತ್ಯ ಬಗ್ಗೆ

ಸಾಹಿತ್ಯ ಮೂಲತಃ ಐಟಿ ಉದ್ಯೋಗಿ. ಸಿನಿಮಾರಂಗಕ್ಕೂ ಅವರಿಗೂ ನಂಟು ಇಲ್ಲವೇ ಇಲ್ಲ. ಯೋಗಿಯ ಜೀವದ ಗೆಳತಿಯಾಗಿದ್ದ ಈಕೆ ಈಗ ಜೀವನದ ಸಂಗಾತಿ ಆಗಲಿದ್ದಾರೆ.

ಅಣ್ಣನ ಮದುವೆ ಆಗಿತ್ತು

ಇತ್ತೀಚಿಗಷ್ಟೆ ಯೋಗಿ ಸಹೋದರ ನಟ ಮಹೇಶ್ ಮದುವೆ ನಡೆದಿತ್ತು. ಅಣ್ಣನ ವಿವಾಹದ ನಂತರ ಈಗ ಯೋಗಿ ಕೂಡ ಬ್ಯಾಚುಲರ್ ಬದುಕಿಗೆ ವಿದಾಯ ಹೇಳಲಿದ್ದಾರೆ.

English summary
Kannada Actor 'Yogesh and Sahitya' will be getting engaged on June 11th 2017. The couple's marrige date is fixed on November 2nd 2017.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada