»   » ಪವರ್ ಸ್ಟಾರ್ ಪವನ್ ಕಲ್ಯಾಣ್ ಆಸ್ತಿಪಾಸ್ತಿ ಅಷ್ಟೇನಾ?

ಪವರ್ ಸ್ಟಾರ್ ಪವನ್ ಕಲ್ಯಾಣ್ ಆಸ್ತಿಪಾಸ್ತಿ ಅಷ್ಟೇನಾ?

By: ಅನಂತರಾಮು, ಹೈದರಾಬಾದ್
Subscribe to Filmibeat Kannada

ಟಾಲಿವುಡ್ ಹೀರೋ ಪವರ್ ಸ್ಟಾರ್ ಪವನ್ ಕಲ್ಯಾಣ್ ಹೊಸ ಪಕ್ಷ ಜನಸೇನ ಸ್ಥಾಪಿಸಿ ಇದೀಗ ಜನರ ನಡುವೆ ಬರುತ್ತಿರುವುದು ಗೊತ್ತೇ ಇದೆ. ಕೋಟಿಗಳಲ್ಲೇ ಸಂಭಾವನೆ ಎಣಿಸುವ ಪವನ್ ಕಲ್ಯಾಣ್ ತಮ್ಮ ಆಸ್ತಿಪಾಸ್ತಿಯನ್ನು ಘೋಷಿಸಿದ್ದಾರೆ. ಈ ಬಗ್ಗೆ ಫೇಸ್ ಬುಕ್, ಟ್ಟಿಟ್ಟರ್, ಜಿಪ್ಲಸ್ ನಂತಹ ಸೋಷಿಯಲ್ ನೆಟ್ ವರ್ಕಿಂಗ್ ತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.

ತಮ್ಮ ಹೊಸ ಪಕ್ಷ ಜನಸೇನ ರಿಜಿಸ್ಟ್ರೇಷನ್ ಅರ್ಜಿಯ ಜೊತೆಗೆ ಆಸ್ತಿ ಘೋಷಣೆ ಪತ್ರವನ್ನೂ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪತ್ರಗಳು ಅದು ಹೇಗೋ ಏನೋ ಫೇಸ್ ಬುಕ್ ನಲ್ಲಿ ಲೀಕ್ ಆಗಿವೆ. ಆದರೆ ಅವು ಅಸಲಿ ಅಲ್ಲ ನಕಲಿ ಎಂದು ಪವನ್ ಅಭಿಮಾನಿಗಳು ಆರೋಪಿಸುತ್ತಿದ್ದಾರೆ. [ಮೋದಿಗೆ ಸಂಪೂರ್ಣ ಬೆಂಬಲ ಘೋಷಿಸಿದ ಪವರ್ ಸ್ಟಾರ್]

Pawan Kalyan

ತಮ್ಮ ನಾಯಕ ನಟನ ಏಳಿಗೆಯನ್ನು ಸಹಿಸದ ಕೆಲವರು ನಕಲಿ ಆಸ್ತಿ ಪತ್ರಗಳನ್ನು ಅವರ ಹೆಸರಿನಲ್ಲಿ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ ಎಂಬುದು ಪವನ್ ಫ್ಯಾನ್ಸ್ ಆರೋಪ. ಆದರೆ ಇದೇ ಸುದ್ದಿಯನ್ನು ಆಂಗ್ಲ ದಿನಪತ್ರಿಕೆಯೊಂದು ಹೈಲೈಟ್ ಮಾಡಿ ಬರೆದಿರುವುದು ಇದೀಗ ಚರ್ಚಾಸ್ಪದ ವಿಷಯವಾಗಿ ಬದಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿರುವ ಪವನ್ ಕಲ್ಯಾಣ್ ಆಸ್ತಿಪಾಸ್ತಿ ವಿವರಗಳ ಮೇಲೆ ಕಣ್ಣಾಡಿಸಿದರೆ ಅಯ್ಯೋ ಇಷ್ಟೇನಾ ಇವರ ಆಸ್ತಿ ಎಂದು ನಿಮಗೂ ಅಚ್ಚರಿಯಾಗುತ್ತದೆ. ನಗದು ಹಣ ರು.89 ಸಾವಿರ, ಬ್ಯಾಂಕ್ ಠೇವಣಿ ರು. 3,13,29,229, ಇತರೆ ಠೇವಣಿ - ರು.4,13,54,423, ಜೀವವಿಮೆ ರು.40,31,000; ಬಾಂಡ್ಸ್ ಹಾಗೂ ಡಿಬೆಂಚರ್ಸ್ ರು. 4,55,207, ಮ್ಯೂಚುವಲ್ ಫಂಡ್ಸ್ ರು.1,43,29,105...

ಫೈನಾನ್ಸ್ ಕಂಪನಿಗಳಲ್ಲಿ ಹೂಡಿಕೆ ರು. 2,90,000, ಎರಡು ಬೈಕ್ ಗಳು ರು. 20,31,409, ಎರಡು ಬೆಂಜ್ ಕಾರುಗಳು ರು. 1,86,79,149, ಸ್ಕೋಡಾ ಕಾರು ರು. 27,67,208, ಚಿನ್ನ ರು.80,000, ಯಂತ್ರಗಳು ರು. 23,58,863, ಪತ್ನಿ ಅನ್ನಾ ಲೆಜ್ ನೋವಾ ಆಸ್ತಿ ರು.74,548, ಮೂವರು ಮಕ್ಕಳ ಹೆಸರಿನಲ್ಲಿರುವ ಆಸ್ತಿ ರು.17,10,106, ಸಾಲ ರು. 5,81,99,129.

ಒಟ್ಟಾರೆ ಪವನ್ ಕಲ್ಯಾಣ್ ಆಸ್ತಿಯ ಮೌಲ್ಯ ರು. 17,77,78,376 ಎನ್ನಲಾಗಿದೆ. ಈಗಾಗಲೆ ಪವನ್ ಕಲ್ಯಾಣ್ ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವನ್ನು ಭೇಟಿಯಾಗಿ ತಮ್ಮ ನೂತನ ಪಕ್ಷ ಜನಸೇನ ಬೆಂಬಲ ಘೋಷಿಸಿರುವುದು ಗೊತ್ತೇ ಇದೆ.

English summary
Jana Sena party founder and Telugu film actor Pawan Kalyan total assets are only 17 cr as of now. He might not be rich financially, but certainly rich in terms of fans. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada