For Quick Alerts
  ALLOW NOTIFICATIONS  
  For Daily Alerts

  ಜನಾರ್ದನ ರೆಡ್ಡಿ ಪುತ್ರನ ಸಿನಿಮಾ ಕಥೆ ಏನಾಯ್ತು?

  |
  ಬಳ್ಳಾರಿಯಲ್ಲಿ ಮತದಾನ ಮಾಡಿ ಸಿನಿಮಾ ಬಗ್ಗೆ ಮಾತನಾಡಿದ ಜನಾರ್ಧನ ರೆಡ್ಡಿ ಮಗ ಕಿರೀಟಿ ರೆಡ್ಡಿ| FILMIBEAT KANNADA

  ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಮಗ ಸಿನಿಮಾರಂಗಕ್ಕೆ ಪ್ರವೇಶ ಮಾಡ್ತಾರೆ ಎಂಬ ಸುದ್ದಿ ಬಹಳ ವರ್ಷದಿಂದ ಕೇಳಿಬರುತ್ತಿದೆ. ಅದಕ್ಕಾಗಿ ಎಲ್ಲ ತಯಾರಿ ನಡೆಯುತ್ತಿದ್ದು, ಚೊಚ್ಚಲ ಸಿನಿಮಾಗೆ ಕಥೆ, ನಿರ್ದೇಶಕ ಎಲ್ಲವೂ ಸಜ್ಜಾಗಿದೆ ಎಂಬ ಮಾತಿದೆ. ಸದ್ಯಕ್ಕೆ ಆ ಸಿನಿಮಾದ ಬಗ್ಗೆ ಎಲ್ಲಿಯೂ ಯಾವುದೇ ಮಾಹಿತಿ ಸಿಕ್ಕಿಲ್ಲ.

  ಇದೀಗ ಸ್ವತಃ ಜನಾರ್ದನ ರೆಡ್ಡಿ ಅವರ ಪುತ್ರ ಮಾಧ್ಯಮಗಳ ಮುಂದೆ ಬಂದಿದ್ದಾರೆ. ಬಳ್ಳಾರಿಯಲ್ಲಿ ಮತದಾನ ಮಾಡಲು ಆಗಮಿಸಿದ್ದ ಕೀರಿಟಿ ರೆಡ್ಡಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ರೆಡ್ಡಿ ಪುತ್ರ ಕೀರಿಟಿ ವೋಟ್ ಮಾಡುವುದಕ್ಕಾಗಿ ನಾಲ್ಕು ದಿನ ಮುಂಚಿತವಾಗಿ ಬಂದಿದ್ದಾರಂತೆ.

  ಮಗ ಕಿರೀಟಿಗಾಗಿ ಜನಾರ್ದನ ರೆಡ್ಡಿ ಸಿನಿಮಾ ನಿರ್ಮಾಣ!

  ಪೊಲಿಟಿಕಲ್ ಸೈನ್ಸ್ ಓದುತ್ತಿರುವ ಕೀರಿಟಿಗೆ ವೈಯಕ್ತಿಕವಾಗಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಗುರಿ ಹೊಂದಿದ್ದಾರೆ. 'ಜನರಿಗೆ ಸೇವೆ ಮಾಡ್ಬೇಕು ಎಂಬ ಬಯಕೆಯೂ ಇದೆ. ಆದ್ರೆ, ಸಿನಿಮಾ ಹೀರೋ ಆಗಿ ಜನರಿಗೆ ಮನರಂಜನೆ ನೀಡಬೇಕು ಎಂಬುದು ಮೊದಲ ಆಧ್ಯತೆ' ಎಂದು ತಿಳಿಸಿದ್ದಾರೆ. ಹಾಗಿದ್ರೆ, ಕೀರಿಟಿ ರೆಡ್ಡು ಮೊದಲ ಸಿನಿಮಾ ಯಾವುದು ಮತ್ತು ಹೇಗಿರಲಿದೆ? ಮುಂದೆ ಓದಿ....

  ಸಜ್ಜಾಗುತ್ತಿರುವ ರೆಡ್ಡಿ ಪುತ್ರ

  ಸಜ್ಜಾಗುತ್ತಿರುವ ರೆಡ್ಡಿ ಪುತ್ರ

  ಜನಾರ್ದನ ರೆಡ್ಡಿ ಅವರ ಮಗನನ್ನ ಸಿನಿಮಾದಲ್ಲಿ ಪರಿಚಯಿಸಲು ಎಲ್ಲ ಪೂರ್ವ ತಯಾರಿ ನಡೆಯುತ್ತಿದೆ. ಇದಕ್ಕಾಗಿ ಡ್ಯಾನ್ಸ್, ಫೈಟ್ ಹೀಗೆ ಅಭಿನಯ ಕೂಡ ಕಲಿಯುತ್ತಿದ್ದಾರಂತೆ ರೆಡ್ಡಿ ಪುತ್ರ. ಶಿಕ್ಷಣ ಮುಗಿಸಿ ಬಂದಮೇಲೆ ಅಧಿಕೃತವಾಗಿ ಬೆಳ್ಳಿತೆರೆಗೆ ಬರಲಿದ್ದಾರೆ.

  ಜನಾರ್ದನ ರೆಡ್ಡಿ ಮಗನ ಚೊಚ್ಚಲ ಚಿತ್ರಕ್ಕೆ ತೆಲುಗಿನ ಸ್ಟಾರ್ ನಿರ್ದೇಶಕ.!

  ಪೊಲಿಟಿಕಲ್ ಸೈನ್ಸ್ ಓದುತ್ತಿರುವುದು ಯಾಕೆ?

  ಪೊಲಿಟಿಕಲ್ ಸೈನ್ಸ್ ಓದುತ್ತಿರುವುದು ಯಾಕೆ?

  ಸಿನಿಮಾ ಮಾಡಬೇಕು ಎಂಬ ಗುರಿ ಇದ್ದರೂ ರಾಜಕೀಯ ಬಿಡಲ್ಲ ಎಂಬುದಕ್ಕೆ ಅವರು ಆಯ್ಕೆ ಮಾಡಿಕೊಂಡಿರುವ ಕೋರ್ಸ್ ಚರ್ಚೆಗೆ ಕಾರಣವಾಗಿದೆ. ಸಿನಿಮಾ ನನ್ನ ಮೊದಲ ಆಧ್ಯತೆ ಎಂದಿರುವ ಕೀರಿಟಿ ರಾಜಕೀಯ ಶಾಸ್ತ್ರದ ಬಗ್ಗೆ ವಿದ್ಯಾಬ್ಯಾಸ ಮಾಡುತ್ತಿದ್ದಾರೆ. ಇಲ್ಲೇ ಗೊತ್ತಾಗುತ್ತೆ ರೆಡ್ಡಿ ಪುತ್ರ ರಾಜಕೀಯಕ್ಕೂ ಬರ್ತಾರೆ ಅಂತ.

  ಪೂರಿ ಜಗನ್ನಾಥ್ ಡೈರೆಕ್ಷನ್

  ಪೂರಿ ಜಗನ್ನಾಥ್ ಡೈರೆಕ್ಷನ್

  ರೆಡ್ಡಿ ಪುತ್ರನ ಸಿನಿಮಾ ನಿರ್ದೇಶನ ಮಾಡಲು ಇಬ್ಬರು ಖ್ಯಾತ ನಿರ್ದೇಶಕರನ್ನ ಸಂಪರ್ಕ ಮಾಡಲಾಗಿದೆಯಂತೆ. ತೆಲುಗಿನ ಸ್ಟಾರ್ ಡೈರೆಕ್ಟರ್ ಪೂರಿ ಜಗನ್ನಾಥ್ ಮತ್ತು ವಿವಿ ವಿನಾಯಕ್ ಅವರ ಹೆಸರು ಈ ಹಿಂದೆ ಕೇಳಿಬಂದಿತ್ತು. ಇವರಿಬ್ಬರಲ್ಲಿ ಒಬ್ಬರು ಕೀರಿಟಿಯನ್ನ ಪರಿಚಯಿಸಲಿದ್ದಾರಂತೆ. ಆದ್ರೆ, ಅಧಿಕೃತವಾಗಿ ಪ್ರಕಟವಾಗಿಲ್ಲ.

  ಎರಡು ಭಾಷೆಯಲ್ಲಿ ಸಿನಿಮಾ?

  ಎರಡು ಭಾಷೆಯಲ್ಲಿ ಸಿನಿಮಾ?

  ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ರೆಡ್ಡಿ ಮಗನ ಮೊದಲ ಸಿನಿಮಾ ಎರಡು ಭಾಷೆಯಲ್ಲಿ ಬರಲಿದೆಯಂತೆ. ಕನ್ನಡ ಮತ್ತು ತೆಲುಗಿನಲ್ಲಿ ಮಗನನ್ನು ಪರಿಚಯಿಸಲು ಮಾಜಿ ಸಚಿವರು ಪ್ಲಾನ್ ಮಾಡಿದ್ದಾರೆ. ಸದ್ಯ, ವಿದೇಶದಲ್ಲಿ ಓದುತ್ತಿರುವ ಮಗ ಎಜಿಕೇಶನ್ ಮುಗಿಸಿ ವಾಪಸ್ ಬರುವವರೆಗೂ ಇದೆಲ್ಲವೂ ಅಂತೆ-ಕಂತೆಗಳಾಗಿ ಉಳಿಯಲಿದೆ.

  English summary
  Ex Minister janardhan reddy's son Kireeti reddy cast his vote in bellary. he is studying political science and also he getting ready for movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X