2 ವರ್ಷದ ನಂತರ ದರ್ಶನ್ ಸಿನಿಮಾಗೆ ಹಾಡು ಬರೆದ ಜಯಂತ್ ಕಾಯ್ಕಿಣಿ
Recommended Video
ಜಯಂತ್ ಕಾಯ್ಕಿಣಿ ಕನ್ನಡದ ಅನೇಕ ಸ್ಟಾರ್ ನಟರಿಗೆ ಒಳ್ಳೆ ಒಳ್ಳೆಯ ಹಾಡುಗಳನ್ನು ನೀಡಿದ್ದಾರೆ. ಈ ಹಿಂದೆ ದರ್ಶನ್ ಸಿನಿಮಾಗೆ ಸಹ ಹಾಡು ಬರೆದಿದ್ದರು. ಆದರೆ, ಕಳೆದ ಎರಡು ವರ್ಷಗಳಿಂದ ಈ ಕಾಂಬಿನೇಶನ್ ನಲ್ಲಿ ಯಾವ ಹಾಡು ಬಂದಿರಲಿಲ್ಲ.
'ತಾರಕ್' ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದರು. ಈ ಸಿನಿಮಾದ ಎರಡು ಹಾಡುಗಳನ್ನು ಜಯಂತ್ ಕಾಯ್ಕಿಣಿ ಬರೆದಿದ್ದರು. 'ಬಿರುಗಾಳಿಯೊಂದಿಗೆ...' ಹಾಗೂ 'ಮಾತಾಡು ನೀ..' ಹಾಡುಗಳಲ್ಲಿ ಜಯಂತ್ ಕಾಯ್ಕಿಣಿ ಸಾಹಿತ್ಯ ಇತ್ತು. ಆ ಚಿತ್ರದ ನಂತರ ದರ್ಶನ್ ಸಿನಿಮಾಗೆ ಕಾಯ್ಕಿಣಿ ಹಾಡು ಬರೆದಿಲ್ಲ.
'ಕುರುಕ್ಷೇತ್ರ'ದ ಎಲ್ಲ ಹಾಡುಗಳನ್ನು ವಿ ನಾಗೇಂದ್ರ ಪ್ರಸಾದ್ ಬರೆದರು. 'ಯಜಮಾನ' ಹಾಡುಗಳಿಗೆ ಚೇತನ್ ಕುಮಾರ್, ಕವಿರಾಜ್, ಯೋಗರಾಜ್ ಭಟ್, ಸಂತೋಷ್ ಆನಂದ್ ರಾಮ್ ಪದ ಜೋಡಿಸಿದರು. ಈ ಎರಡು ಸಿನಿಮಾಗಳಲ್ಲಿ ಕಾಯ್ಕಿಣಿ ಸಾಹಿತ್ಯ ಇರಲಿಲ್ಲ.

ಇದೀಗ 'ಒಡೆಯ' ಸಿನಿಮಾ ಒಂದು ಹಾಡನ್ನು ಜಯಂತ್ ಕಾಯ್ಕಿಣಿ ಬರೆದಿದ್ದಾರೆ. 'ಕಾಣೆಯಾಗಿರುವ ನಾನು..' ಹಾಡು ಜಯಂತ್ ಕಾಯ್ಕಿಣಿ ನೀಡಿದ್ದಾರೆ. ಈ ಹಾಡು ನವೆಂಬರ್ 25ಕ್ಕೆ ಬೆಳಗ್ಗೆ 11 ಗಂಟೆಗೆ ಬಿಡುಗಡೆ ಆಗಲಿದೆ. ಸೋನು ನಿಗಮ್ ಹಾಗೂ ಅನುರಾಧ ಭಟ್ ಹಾಡಿಗೆ ಧ್ವನಿಯಾಗಿದ್ದಾರೆ. ಅರ್ಜುನ್ ಜನ್ಯ 'ಒಡೆಯ' ಸಿನಿಮಾದ ಸಂಗೀತ ನಿರ್ದೇಶಕ.
'ಒಡೆಯ' ಎಂ ಡಿ ಶ್ರೀಧರ್ ನಿರ್ದೇಶನದ ಸಿನಿಮಾ. ಸನಾ ತಿಮಯ್ಯ ಸಿನಿಮಾದ ನಾಯಕಿ. ಸಂದೇಶ್ ಪ್ರೊಡಕ್ಷನ್ಸ್ ನಲ್ಲಿ ಸಿನಿಮಾ ನಿರ್ಮಾಣ ಆಗಿದೆ.


Click it and Unblock the Notifications











