»   » ಬೆಂಗಳೂರಿನಲ್ಲಿ 'ಜಾನಿ ಲೀವರ್ ಲೈವ್' ಕಾಮಿಡಿ ಶೋ

ಬೆಂಗಳೂರಿನಲ್ಲಿ 'ಜಾನಿ ಲೀವರ್ ಲೈವ್' ಕಾಮಿಡಿ ಶೋ

Posted By:
Subscribe to Filmibeat Kannada

ಬಾಲಿವುಡ್ ಚಿತ್ರ ಜಗತ್ತಿನ ಅದ್ಭುತ ಹಾಸ್ಯನಟ ಜಾನಿ ಲೀವರ್. ಇದೀಗ ಹದಿನೇಳು ವರ್ಷಗಳ ಬಳಿಕ ಅವರು ಬೆಂಗಳೂರಿನಲ್ಲಿ ಲೈ ಶೋ ನಡೆಸಿಕೊಡಲು ಬರುತ್ತಿದ್ದಾರೆ. 'Johny Lever Live' ಕಾರ್ಯಕ್ರಮ ಇದೇ ಆಗಸ್ಟ್ 9ರಂದು ಬೆಂಗಳೂರು ಜೆ.ಪಿ ನಗರದ ಇಲಾನ್ ಕನ್ವೆಷನ್ ಹಾಲ್ ನಲ್ಲಿ ನಡೆಯಲಿದೆ.

ಜಾನ್ ಪ್ರಕಾಶ್ ರಾವ್ ಜನುಮಲ ಎಂಬುದು ಅವರ ಮೂಲ ಹೆಸರು. ಆಂಧ್ರ ಪ್ರದೇಶ ಮೂಲದ ಪ್ರಕಾಶಂ ಅವರ ಹುಟ್ಟೂರು. ಆರಂಭದ ದಿನಗಳಲ್ಲಿ ಮುಂಬೈನ ಬೀದಿಗಳಲ್ಲಿ ಪೆನ್ನು ಮಾರಾಟ ಮಾಡುತ್ತಾ ಮಿಮಿಕ್ರಿಯಲ್ಲೇ ಎಲ್ಲರನ್ನೂ ಸೆಳೆಯುತ್ತಿದ್ದ ಕಲಾವಿದ.

Johny Lever Live!

ಇವರ ಮಿಮಿಕ್ರಿ ನೋಡಲು ಸಾಕಷ್ಟು ಜನಜಂಗುಳಿ ಸೇರುತ್ತಿತ್ತು. ಗಲಾಟೆ ಗದ್ದಲವನ್ನು ತಡೆಯಲು ಪೊಲೀಸರು ಇವರನ್ನು ಬಂಧಿಸಿದ್ದೂ ಉಂಟು. ಬಳಿಕ ಬಾಲಿವುಡ್ ಚಿತ್ರಗಳಲ್ಲಿ ಚಾನ್ಸ್ ಗಿಟ್ಟಿಸಿಕೊಂಡು ಲಕ್ಷಾಂತರ ಅಭಿಮಾನಿಗಳ ಮನಸೂರೆಗೊಂಡ ಹಾಸ್ಯನಟ.

ಜಾನಿ ಲೀವರ್ ಲೈವ್ ಕಾಮಿಡಿ ಶೋ ಎಂದರೆ ಜನ ಮುಗಿಬಿದ್ದು ನೋಡುತ್ತಾರೆ. ಏಕೆಂದರೆ ಅವರ ಕಾಮಿಡಿ ಮೋಡಿಯೇ ಹಾಗಿರುತ್ತದೆ. ಇದುವರೆಗೂ 13 ಫಿಲಂಫೇರ್ ಪ್ರಶಸ್ತಿಗಳನ್ನು ಪಡೆದ ಖ್ಯಾತಿ ಜಾನಿ ಅವರದು.

ಈ ಬಾರಿಯ ಲೈವ್ ಶೋನಲ್ಲಿ ಅವರು ತಮ್ಮ ಜೀವನದ ಕೆಲವು ರಸವತ್ತಾದ ಘಟನೆಗಳು, ಏಳುಬೀಳುಗಳನ್ನು ಸಭಿಕರೊಂದಿಗೆ ಹಂಚಿಕೊಳ್ಳುತ್ತಾ ನಕ್ಕು ನಗಿಸಲಿದ್ದಾರೆ. ಇದೊಂದು ಸಂಪೂರ್ಣ ಕೌಟುಂಬಿಕ ಕಾಮಿಡಿ ಶೋ ಆಗಿದ್ದು ಸತತ 2.30 ಗಂಟೆಗಳ ಕಾಲ ಹೊಟ್ಟೆ ತುಂಬ ನಕ್ಕು ನಲಿಯಬಹುದು. ಹೆಚ್ಚಿನ ಮಾಹಿತಿಗೆ http://www.bookurevent.com/ ಭೇಟಿ ನೀಡಿ. (ಏಜೆನ್ಸೀಸ್)

English summary
Johnny Lever is back on stage after 17 years with his blockbuster, live stand-up show - "Johny Lever Live!" Istage Entertainment presents Johny Lever Live is on August 9 at Elaan Convention Centre, JP Nagar, Bangalore.
Please Wait while comments are loading...