For Quick Alerts
  ALLOW NOTIFICATIONS  
  For Daily Alerts

  'ಕಾಂತಾರ' ತಂಡವನ್ನು ಭೇಟಿಯಾದ 'ಜೋಶ್' ತಂಡ

  |

  ಭಾರತದ ಅತಿ ವೆಗವಾಗಿ ಬೆಳೆಯುತ್ತಿರುವ ಕಿರು ವಿಡಿಯೋ ಅಪ್ಲಿಕೇಶನ್ 'ಜೋಶ್'. ಈ ಅಪ್ಲಿಕೇಶನ್ ತನ್ನ ಬಳಕೆದಾರರಿಗೆ, ಕಂಟೆಂಟ್ ಕ್ರಿಯೇಟರ್‌ಗಳಿಗೆ ಆಗಾಗ್ಗೆ ಫನ್ ಗೇಮ್, ಸೆಲೆಬ್ರಿಟಿಗಳೊಟ್ಟಿಗೆ ಮೀಟ್ ಆಂಡ್ ಗ್ರೀಟ್ ಅನ್ನು ಆಯೋಜಿಸುತ್ತಲೇ ಬಂದಿದೆ.

  ಇದೀಗ ಕನ್ನಡದ ಬಹು ನಿರೀಕ್ಷಿತ ಸಿನಿಮಾ 'ಕಾಂತಾರ' ಚಿತ್ರತಂಡವನ್ನು ಭೇಟಿ ಮಾಡುವ ಅವಕಾಶವನ್ನು ಜೋಶ್ ತಂಡವು ತಮ್ಮ ಜೋಶ್ ಕಂಟೆಂಟ್ ಕ್ರಿಯೇಟರ್‌ಗಳಿಗೆ ಒದಗಿಸಿದೆ.

  ಕೆಲವು ಜೋಶ್ ಕಂಟೆಂಟ್ ಕ್ರಿಯೇಟರ್‌ಗಳು ಇಂದು 'ಕಾಂತಾರ' ಸಿನಿಮಾದ ನಾಯಕ ನಟ ರಿಷಬ್ ಶೆಟ್ಟಿ ಹಾಗೂ ನಾಯಕಿ ಸ್ಪೂರ್ತಿ ಗೌಡ ಅವರುಗಳನ್ನು ಭೇಟಿಯಾಗಿ ಸಿನಿಮಾದ ಬಗ್ಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ, ಜೋಶ್‌ ಅಪ್ಲಿಕೇಶನ್‌ಗಾಗಿ ಚಿತ್ರತಂಡದ ಜೊತೆ ವಿಡಿಯೋಗಳನ್ನು ಸಹ ಮಾಡಿಕೊಂಡಿದ್ದಾರೆ.

  'ಕಾಂತಾರ' ಸಿನಿಮಾ ಸೆಪ್ಟೆಂಬರ್ 30 ರಂದು ಬಿಡುಗಡೆ ಆಗುತ್ತಿದ್ದು, ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಿರುವ ರಿಷಬ್ ಶೆಟ್ಟಿಯವರೇ ಈ ಸಿನಿಮಾವನ್ನು ನಿರ್ದೇಶನವೂ ಮಾಡಿದ್ದಾರೆ. ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು ಟ್ರೈಲರ್ ಭಾರಿ ಹಿಟ್ ಆಗಿದೆ.

  'ಕಾಂತಾರ' ಸಿನಿಮಾವು ಸಾಕಷ್ಟು ನಿಗೂಢತೆಗಳನ್ನು ಒಳಗೊಂಡಿದೆ ಎಂದು ಸಿನಿಮಾದ ಟ್ರೈಲರ್ ಹೇಳುತ್ತಿದೆ. ಸಿನಿಮಾದಲ್ಲಿ ಶಿವ ಹೆಸರಿನ ಪಾತ್ರದಲ್ಲಿ ರಿಷಬ್ ಶೆಟ್ಟಿ ನಟಿಸಿದ್ದಾರೆ. ಅರಣ್ಯಾಧಿಕಾರಿ ಹಾಗೂ ಗ್ರಾಮಸ್ಥರ ನಡುವೆ ನಡೆವ ತಿಕ್ಕಾಟದ ಜೊತೆಗೆ ದೈವ, ನಿಗೂಢತೆ ಇನ್ನೂ ಹಲವಾರು ಅಂಶಗಳು ಸಿನಿಮಾದಲ್ಲಿವೆ.

  'ಕಾಂತಾರ' ಸಿನಿಮಾದಲ್ಲಿ ರಿಷಬ್ ಶೆಟ್ಟಿ, ಸ್ಪೂರ್ತಿ ಗೌಡ ಜೊತೆಗೆ ನಟ ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ದೀಪಕ್ ರಾಯ್ ಪಾನಾಜಿ, ಪ್ರಕಾಶ್ ತುಮಿನಾಡ್, ಉಗ್ರಂ ರವಿ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾಕ್ಕೆ ಸಂಗೀತವನ್ನು ಅಜನೀಶ್ ಲೋಕನಾಥ್ ನೀಡಿದ್ದಾರೆ. ಅರವಿಂದ್ ಕಶ್ಯಪ್ ಸಿನಿಮಾಟೊಗ್ರಫಿ ಮಾಡಿದ್ದಾರೆ. ಸಿನಿಮಾವನ್ನು ಪ್ರಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ನಿರ್ಮಾಣ ಮಾಡಿದೆ.

  ಪುನೀತ್ ರಾಜ್‌ಕುಮಾರ್ ಅಥವಾ ಯಶ್ ಇಲ್ಲದ ಮೊದಲ ಹೊಂಬಾಳೆ ಸಿನಿಮಾ ಇದಾಗಿದೆ. ಇಲ್ಲಿಯವರೆಗೂ ಯಶ್ ಹಾಗೂ ಪುನೀತ್ ರಾಜ್‌ಕುಮಾರ್ ಸಿನಿಮಾಗಳನ್ನಷ್ಟೆ ಹೊಂಬಾಳೆ ನಿರ್ಮಾಣ ಮಾಡಿತ್ತು, ಅವರಿಬ್ಬರೂ ಇಲ್ಲದ ಮೊದಲ ಸಿನಿಮಾ ಇದಾಗಿರಲಿದೆ. ಇದರ ಹಿಂದೆಯೇ ಹಲವು ಬೇರೆ ನಟರ ಸಿನಿಮಾಗಳಿಗೂ ಹೊಂಬಾಳೆ ಬಂಡವಾಳ ಹೂಡಿದೆ. ರಕ್ಷಿತ್ ಶೆಟ್ಟಿ ನಿರ್ದೇಶನದ ಹೊಸ ಸಿನಿಮಾವನ್ನು ಸಹ ಹೊಂಬಾಳೆ ಬಂಡವಾಳ ಹೂಡುತ್ತಿದೆ.

  English summary
  Josh creator Meet & Greet and Content creation with Actor Rishab Shetty and actress Sapthami Gowda.
  Thursday, September 29, 2022, 21:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X