For Quick Alerts
  ALLOW NOTIFICATIONS  
  For Daily Alerts

  ಮನೆ ಬಾಡಿಗೆ ನೀಡಿಲ್ಲವೆಂದು ಜೊತೆ ಜೊತೆಯಲಿ ಧಾರಾವಾಹಿ ನಟನ ಮೇಲೆ ಹಲ್ಲೆ

  |

  ಮನೆ ಬಾಡಿಗೆ ಕೊಡಲಿಲ್ಲವೆಂದು ಜೊತೆಜೊತೆಯಲಿ ಧಾರಾವಾಹಿಯ ಸಹನಟರೊಬ್ಬರ ಮೇಲೆ ಮನೆ ಮಾಲೀಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

  ಅಣ್ಣನ ಫೋಟೋ ಹಾಕಿ ಭಾವನಾತ್ಮಕ ಸಂದೇಶ ಬರೆದ ಧ್ರುವ ಸರ್ಜಾ | Dhruva Sarja emotional on social media

  ಜೊತೆಜೊತೆಯಲಿ ಧಾರಾವಾಹಿಯಲ್ಲಿ ನಟಿಸುತ್ತಿರುವ ಸಹನಟ ಪ್ರಶಾಂತ್ ಅವರ ಮೇಲೆ ಮನೆ ಮಾಲೀಕ ಹಾಗೂ ಆತನ ಸಹೋದರಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

  ಲಾಕ್‌ಡೌನ್ ನಿಂದಾಗಿ ಚಿತ್ರೀಕರಣ ನಡೆಸದೆ ಹಣದ ಸಮಸ್ಯೆಯಿಂದಾಗಿ ಪ್ರಶಾಂತ್ ಮನೆ ಬಾಡಿಗೆ ನೀಡಲು ಸಾಧ್ಯವಾಗಿರಲಿಲ್ಲವಂತೆ.

  ಪ್ರಶಾಂತ್ ಅವರು ತಮ್ಮ ಪತ್ನಿ, ಮಗುವಿನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಲಾಕ್‌ಡೌನ್‌ನಿಂದಾಗಿ ಚಿತ್ರೀಕರಣ ಸ್ಥಗಿತವಾಗಿತ್ತು. ಹಾಗಾಗಿ ಅವರಿಗೆ ಹಣದ ಸಮಸ್ಯೆ ಎದುರಾಗಿತ್ತು, ಇದೇ ಕಾರಣದಿಂದ ಮನೆ ಬಾಡಿಗೆ ನೀಡಲು ಸಾಧ್ಯವಾಗಿರಲಿಲ್ಲವಂತೆ.

  ಪ್ರಶಾಂತ್‌ಗೆ ಮನೆ ಮಾಲೀಕ ಹಾಗೂ ಆತನ ಸಹೋದರಿ ಹೊಡೆಯುತ್ತಿರುವ ವಿಡಿಯೋವನ್ನು ಪ್ರಶಾಂತ್ ಪತ್ನಿ ಚಿತ್ರೀಕರಿಸಿಕೊಂಡಿದ್ದಾರೆ ಎನ್ನಲಾಗಿದೆ.

  ಜೊತೆಜೊತೆಯಲಿ ಧಾರಾವಾಹಿ ಚಿತ್ರೀಕರಣ ಆರಂಭವಾಗಿದೆಯಾದರೂ ಪ್ರಶಾಂತ್ ಇನ್ನೂ ಚಿತ್ರೀಕರಣಕ್ಕೆ ಕರೆಯಲಾಗಿಲ್ಲ.

  English summary
  Jothe Jotheyali serial actor Prashanth's landlord asked rent forcefully. Accused that he landlord man handeled Prashanth.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X