For Quick Alerts
  ALLOW NOTIFICATIONS  
  For Daily Alerts

  ಐಟಂ ಹಾಡಿನಲ್ಲಿ ಜ್ವಾಲಾ ಗುತ್ತಾ ಇಂದ್ರಜಾಲ

  By ಅನಂತರಾಮು, ಹೈದರಾಬಾದ್
  |

  ಭಾರತದ ಅಗ್ರಮಾನ್ಯ ಡಬಲ್ಸ್ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುತ್ತಾ (ಗುಟ್ಟಾ ಅಲ್ಲ) ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿರುವುದು ಗೊತ್ತೇ ಇದೆ. ಇಷ್ಟು ದಿನ ಅವರು ಬ್ಯಾಡ್ಮಿಂಟನ್ ಕೋರ್ಟ್ ನಲ್ಲಿ ಕತ್ತಿ ಝಳಪಿಸಿದಂತೆ ರ್‍ಯಾಕೆಟ್ ಬೀಸಿ ಎದುರಾಳಿಗಳ ಬೆವರಿಳಿಸುತ್ತಿದ್ದರು. ಈಗ ತೆರೆಯ ಮೇಲೆ ಸೊಂಟ ಬಳುಕಿಸಲು ಸಿದ್ಧವಾಗಿದ್ದಾರೆ.

  ಈ ಮೂಲಕ ಪಡ್ಡೆಗಳ ಗುಂಡಿಗೆಯಲ್ಲಿ ಜ್ವಾಲಾಮುಖಿ ಸ್ಫೋಟ ಗ್ಯಾರಂಟಿಯಾಗಿದೆ. ತೆಲುಗಿನ ಈ ಚಿತ್ರದ ಹೆಸರು 'ಗುಂಡೆ ಜಾರಿ ಗಲ್ಲಂತಯಿಂದಿ'. ನಿತಿನ್ ಚಿತ್ರದ ನಾಯಕ ನಟ. ಜ್ವಾಲಾ ಹಾಗೂ ನಾಯಕ ನಟ ಇಬ್ಬರೂ ಒಳ್ಳೆಯ ಫ್ರೆಂಡ್ಸ್ ಅಂತೆ. ಹಾಗಾಗಿ ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡೆ ಎನ್ನುತ್ತಾರೆ ಜ್ವಾಲಾ.

  ಇತ್ತೀಚೆಗೆ ಈ ಚಿತ್ರದ ಸ್ಟಿಲ್ ಒಂದನ್ನು ಬಿಡುಗಡೆ ಮಾಡಲಾಗಿದೆ. ಜ್ವಾಲಾ ಗುತ್ತಾ ಆಕರ್ಷಕ ನಿಲುವು ಭಂಗಿ ನೋಡಿದರೆ ಪಡ್ಡೆಗಳು ಕುಳಿತಲ್ಲಿಯೇ ಕಂಗಾಲಾಗುತ್ತಿದ್ದಾರೆ. ಇನ್ನು ಐಟಂ ಬೆಡಗಿಯರ ಗುಂಡಿಗೆಯಲ್ಲೂ ಗುಲ್ಲೆದ್ದಿದೆ.

  ಬ್ಯಾಡ್ಮಿಂಟನ್ ಆಡುತ್ತಿದ್ದಾಗಿನಿಂದಲೂ ಬಣ್ಣ ಹಚ್ಚಬೇಕು ಎಂಬ ಆಸೆ ಇತ್ತಂತೆ. ಆದರೆ ಈ ಚಿತ್ರದಲ್ಲಿ ಆಫರ್ ಬಂದಾಗ ತಮಾಷೆಗೆ ಎಂದುಕೊಂಡಿದ್ದೆ. ಆದರೆ ನಿಜಕ್ಕೂ ಅವಕಾಶ ಸಿಕ್ಕಿದೆ ಎಂದು ಗೊತ್ತಾದಾಗ ಅಚ್ಚರಿಯಾಯಿತು. ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡೆ ಎಂದಿದ್ದಾರೆ ಜ್ವಾಲಾ.

  ಈ ಚಿತ್ರದ ಹಾಡೇನಾದರೂ ಹಿಟ್ ಆದರೆ ಜ್ವಾಲಾ ಇನ್ನು ಪೂರ್ಣ ಪ್ರಮಾಣದಲ್ಲಿ ಚಿತ್ರರಂಗದಲ್ಲೇ ತೊಡಗಿಕೊಳ್ಳುತ್ತಾರೋ ಏನೋ. ಸದ್ಯಕ್ಕೆ ಅವರು ಚಿತ್ರೀಕರಣಕ್ಕೆ ತಪ್ಪದೆ ಬರುತ್ತಿದ್ದಾರಂತೆ. ಸಮಯಕ್ಕೆ ಸರಿಯಾಗಿ ಬಂದು ಐಟಂ ಡಾನ್ಸ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎನ್ನುತ್ತವೆ ಟಾಲಿವುಡ್ ಮೂಲಗಳು.

  English summary
  Jwala Gutta recently completed her first song performance in Nithin's Gunde Jaari Gallanthainde which is set for release coming April. Jwala Gutta is seriously preparing for her grand debut as heroine. She is trying to be back in shape and she looks sizzling in her new avatar. Check the above photograph.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X