For Quick Alerts
  ALLOW NOTIFICATIONS  
  For Daily Alerts

  ಸೂರಿ ಮೇಲೆ ಬಿದ್ದಿದೆ ಚಾರ್ಲಿ ಚಾಪ್ಲಿನ್ ಪ್ರಭಾವ: ಬದಲಾಯ್ತು ಜಾನರ್

  |

  ನಿರ್ದೇಶಕ ಸೂರಿ 'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ಕೆಲವರಿಗೆ ಇಷ್ಟ ಆದ್ರೆ, ಕೆಲವರಿಗೆ ಇಷ್ಟ ಆಗಿಲ್ಲ. ಅದೇನೇ ಇದ್ದರೂ ಸಿನಿಮಾ ದೊಡ್ಡ ಚರ್ಚೆ ಆಗುತ್ತಿದೆ.

  ದುನಿಯಾ ಸೂರಿ ಮುಂದಿನ ಸಿನಿಮಾ ಹೇಗಿರುತ್ತೆ ಗೊತ್ತಾ..? | Duniya Suri | Next Movie | Sandalwood

  'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾದ ಮಧ್ಯೆ 'ಕಾಗೆ ಬಂಗಾರ' ಕಥೆಯನ್ನು ಸೂರಿ ತಂದಿದ್ದಾರೆ. ಸಿನಿಮಾ ಮುಗಿದಾಗ 'ಕಾಗೆ ಬಂಗಾರ' ಸಿನಿಮಾ 2020ಕ್ಕೆ ಬಿಡುಗಡೆ ಆಗುತ್ತದೆ ಎಂದು ತೋರಿಸುತ್ತಾರೆ. ಜೊತೆಗೆ ತೆರೆ ಮೇಲೆ ಚಾರ್ಲಿ ಚಾಪ್ಲಿನ್ ಫೋಟೋ ಹಾಗೂ ಅವರ 'let's burn the city' ಎಂಬ ವಾಕ್ಯ ಕೂಡ ಬರುತ್ತದೆ.

  ವಾವ್.. 'ಪಾಪ್ ಕಾರ್ನ್ ಮಂಕಿ ಟೈಗರ್' ಮೊದಲನೇ ದಿನದ್ದು 'ಧಮಾಕಾ' ಕಲೆಕ್ಷನ್.!ವಾವ್.. 'ಪಾಪ್ ಕಾರ್ನ್ ಮಂಕಿ ಟೈಗರ್' ಮೊದಲನೇ ದಿನದ್ದು 'ಧಮಾಕಾ' ಕಲೆಕ್ಷನ್.!

  ಇದನ್ನೂ ನೋಡಿದಾಗ ಚಾರ್ಲಿ ಚಾಪ್ಲಿನ್ ಪ್ರಭಾವ ಸೂರಿ ಮೇಲೆ ಬಿದ್ದ ಹಾಗೆ ಕಾಣುತ್ತದೆ. ಹಾಗಾಗಿಯೇ, ತಮ್ಮ ಮುಂದಿನ ಸಿನಿಮಾದ ಜಾನರ್ ಅನ್ನು ಸೂರಿ ಕೊಂಚ ಬದಲು ಮಾಡಿಕೊಂಡಿದ್ದಾರೆ. ಚಾರ್ಲಿ ಚಾಪ್ಲಿನ್ ಸ್ಟೈಲ್ ನಲ್ಲಿ ನಗಿಸುತ್ತಾ ಸಿನಿಮಾದ ಕಥೆಯನ್ನು ಸೂರಿ ಹೇಳಲಿದ್ದಾರೆ.

  'ಕಾಗೆ ಬಂಗಾರ' ಹಾಸ್ಯಮಯವಾಗಿ ಇರಲಿದೆ. ಸೂರಿ ಸಿನಿಮಾದಲ್ಲಿ ಅಲ್ಲಲ್ಲಿ ಹಾಸ್ಯ ಇದ್ದರೂ, ಇದು ಅವರಿಗೆ ಒಂದು ಹೊಸ ಜಾನರ್ ಆಗಿದೆ. 'ಕಾಗೆ ಬಂಗಾರ' ದಲ್ಲಿಯೂ 'ಪಾಪ್ ಕಾರ್ನ್ ಮಂಕಿ ಟೈಗರ್'ನ ತಾಂತ್ರಿಕ ತಂಡವೇ ಇರಲಿದೆಯಂತೆ. ಸೂರಿ ಸ್ಟೈಲ್ ನಲ್ಲಿಯೇ ಸಿನಿಮಾದ ಮೇಕಿಂಗ್ ಇರುತ್ತದೆ.

  ಪ್ರಶಾಂತ್ ಸಿದ್ದಿ ಹಾಗೂ ಪೂರ್ಣಚಂದ್ರ ಮೈಸೂರು 'ಕಾಗೆ ಬಂಗಾರ'ದ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಪಾಪ್ ಕಾರ್ನ್ ಮಂಕಿ ಟೈಗರ್'ನಲ್ಲಿ ಇದ್ದ ಮೂಗನ ಪಾತ್ರ ತುಂಬ ಫೇಮಸ್ ಆಗಿದ್ದು. ಆ ಪಾತ್ರಧಾರಿ ಗೌತಮ್ ಸಹ ಸಿನಿಮಾದಲ್ಲಿ ಇರಲಿದ್ದಾರೆ.

  English summary
  Director Suri's 'Kaage bangara will be a full of humor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X