For Quick Alerts
  ALLOW NOTIFICATIONS  
  For Daily Alerts

  ಕಷ್ಟಪಟ್ಟು ಮಾಡಿದ ಸಿನಿಮಾಕ್ಕೆ ಬುಕ್‌ ಮೈ ಶೋ ಇಟ್ಟ ಗುನ್ನಾ

  |

  'ಕಾಣದಂತೆ ಮಾಯವಾದನು' ಚಿತ್ರ ಹೀಗೆ ಬಂದು ಹಾಗೆ ಚಿತ್ರಮಂದಿರಗಳಿಂದ ಕಾಣೆಯಾಗಿತ್ತು. ಆದರೆ ಕತೆಯ ಮೇಲೆ ನಂಬಿಕೆ ಇರಿಸಿರುವ ಚಿತ್ರತಂಡ ಮತ್ತೆ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ.

  ದರ್ಶನ್ ಬಂದು ನಿಂತು ಪ್ರಚಾರ ಮಾಡಿದ್ರು ಯೂಸ್ ಆಗ್ಲಿಲ್ಲ | Vikas | Kanadanthe Maayavadanu | Darshan

  'ಕಾಣದಂತೆ ಮಾಯವಾದನು' ಚಿತ್ರದ ನಾಯಕ ನಟ ವಿಕಾಸ್ ಬಹು ಕಷ್ಟಪಟ್ಟು ತಮ್ಮ ಶ್ರಮದ ರೂಪವಾದ ಚಿತ್ರವನ್ನು ಮರುಬಿಡುಗಡೆ ಮಾಡುತ್ತಿದ್ದಾರೆ. ಕೆಲವು ದೃಶ್ಯಗಳನ್ನು ಜೋಡಣೆಗೊಳಿಸಿ ಇದೇ ಮಾರ್ಚ್ 6 ರ ಶುಕ್ರವಾರ ಕೆಲವು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.

  ಬಹು ನೋವಿನಿಂದ 'ಫಿಲ್ಮ್‌ಬೀಟ್ ಕನ್ನಡ'ದೊಂದಿಗೆ ಮಾತನಾಡಿದ ವಿಕಾಸ್, ''ನನ್ನ ತಾಯಿ ಕೂಡಿಟ್ಟಿದ್ದ ಹಣವನ್ನು ಎರವಲು ಪಡೆದು ಸಿನಿಮಾವನ್ನು ಮತ್ತೆ ಬಿಡುಗಡೆ ಮಾಡುತ್ತಿದ್ದೇನೆ. ಒಳ್ಳೆಯ ಸಿನಿಮಾವನ್ನು ಕನ್ನಿಡಗರು ಕೈಬಿಡುವುದಿಲ್ಲ ಎಂಬ ವಿಶ್ವಾಸ ನನಗೆ ಇದೆ'' ಎಂದು ಹೇಳಿದರು.

  ಒಳ್ಳೆಯ ವಿಮರ್ಶೆಯೇ ಸಿನಿಮಾಕ್ಕೆ ಸಿಕ್ಕಿತ್ತು: ವಿಕಾಸ್

  ಒಳ್ಳೆಯ ವಿಮರ್ಶೆಯೇ ಸಿನಿಮಾಕ್ಕೆ ಸಿಕ್ಕಿತ್ತು: ವಿಕಾಸ್

  ಒಳ್ಳೆಯ ಚಿತ್ರವೆಂಬ ವಿಮರ್ಶೆ ಎಲ್ಲೆಡೆಯಿಂದ ನಮ್ಮ ಚಿತ್ರಕ್ಕೆ ಸಿಕ್ಕಿತ್ತು, ಆದರೆ ಬುಕ್ ಮೈ ಶೋ 'ಕನ್ನಡವಿರೋಧಿ' ತನದಿಂದಾಗಿ ನಮ್ಮ ಚಿತ್ರಕ್ಕೆ ಬಹುದೊಡ್ಡ ಹೊಡೆತವಾಗಿತ್ತು. ಭಾನುವಾರದ ದಿನ ನಮ್ಮ ಚಿತ್ರಕ್ಕೆ ಕೇವಲ 24 ರೇಟಿಂಗ್ ನೀಡಿದ್ದರು. ಆದರೆ ಜಾಹೀರಾತು ನೀಡಿದ ಮೇಲೆ ಅದನ್ನು 64% ಮಾಡಿದರು ಎಂದು ಬುಕ್ ಮೈ ಶೋ ಕನ್ನಡ ಸಿನಿಮಾ ವಿರೋಧಿ ತಂತ್ರವನ್ನು ಬಯಲಿಗೆಳೆದರು.

  ಆರು ವರ್ಷ ಈ ಸಿನಿಮಾಕ್ಕಾಗಿ ಕೆಲಸ ಮಾಡಿದ್ದೇನೆ: ವಿಕಾಸ್

  ಆರು ವರ್ಷ ಈ ಸಿನಿಮಾಕ್ಕಾಗಿ ಕೆಲಸ ಮಾಡಿದ್ದೇನೆ: ವಿಕಾಸ್

  ಸತತ ಆರು ವರ್ಷ ಈ ಸಿನಿಮಾಕ್ಕಾಗಿ ಕೆಲಸ ಮಾಡಿದ್ದೇನೆ. ನನ್ನೊಂದಿಗೆ ನನ್ನ ನಿರ್ದೇಶಕರು, ನಿರ್ಮಾಪಕರು, ಇತರ ನಟರುಗಳು ಕೆಲಸ ಮಾಡಿದ್ದಾರೆ. ಇಷ್ಟು ವರ್ಷದ ಶ್ರಮವನ್ನು ಸುಮ್ಮನೆ ಹೋಗಲು ಬಿಡುವುದಿಲ್ಲ ಎಂದು ಛಲದಿಂದ ಹೇಳಿದ ವಿಕಾಸ್, ಹಿಂದೆ ಚಿತ್ರೀಕರಿಸಿದ್ದ ಕೆಲವು ಹಾಸ್ಯ ದೃಶ್ಯಗಳನ್ನು ಸೇರಿಸಿ ಮರು ಬಿಡುಗಡೆ ಮಾಡುತ್ತಿದ್ದೀನಿ, ಈ ಬಾರಿ ಗೆದ್ದೇ ಗೆಲ್ಲುವ ವಿಶ್ವಾಸವಿದೆ'' ಎಂದು ವಿಕಾಸ್ ಹೇಳಿದರು.

  ಕನ್ನಡ ಸಿನಿಮಾ ಬಗ್ಗೆ ಅಸಡ್ಡೆ

  ಕನ್ನಡ ಸಿನಿಮಾ ಬಗ್ಗೆ ಅಸಡ್ಡೆ

  ಅಮೆಜಾನ್ ಫ್ರೈಂ, ನೆಟ್‌ಫ್ಲಿಕ್ಸ್‌ಗಳ ಮಾರುಕಟ್ಟೆ ತಂತ್ರದ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ ವಿಕಾಸ್, 'ಅಮೆಜಾನ್ ನವರು ತಾವು ಬೆಳೆಯುವ ವರೆಗೂ ಸಿನಿಮಾಗಳನ್ನು ಕೊಂಡುಕೊಂಡು ಪ್ರದರ್ಶಿಸಿದರು, ಆದರೆ ಈಗ ಚಿತ್ರಮಂದಿರಗಳಲ್ಲಿ ಓಡಿರುವ ಸಿನಿಮಾಗಳನ್ನು ಮಾತ್ರವೇ ಕೊಳ್ಳುತ್ತಿದ್ದಾರೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

  ''ಪ್ರೇಕ್ಷಕರು, ಅಮೆಜಾನ್ ಪ್ರೈಂ ನಡುವೆ ಸಿನಿಮಾ ಮಂದಿ ಹೈರಾಣು''

  ''ಪ್ರೇಕ್ಷಕರು, ಅಮೆಜಾನ್ ಪ್ರೈಂ ನಡುವೆ ಸಿನಿಮಾ ಮಂದಿ ಹೈರಾಣು''

  ''ಇನ್ನು ಜನರು ಯಾವುದೇ ಸಿನಿಮಾವಾದರೂ ಅಮೆಜಾನ್ ನಲ್ಲಿ ಬಂದಾಗ ನೋಡಿಕೊಳ್ಳೋಣ ಎಂದು ಕೊಳ್ಳುತ್ತಿದ್ದಾರೆ, ಆದರೆ ಅಮೆಜಾನ್ ಪ್ರೈಂ ನವರು, ಚಿತ್ರಮಂದಿರಗಳಲ್ಲಿ ಓಡಿದ ಸಿನಿಮಾ ಮಾತ್ರವೇ ಕೊಳ್ಳುತ್ತೇವೆ ಎನ್ನುತ್ತಿದ್ದಾರೆ. ಮಧ್ಯದಲ್ಲಿ ನಾವುಗಳು ಸಿಕ್ಕಿಕೊಂಡು ಒದ್ದಾಡುತ್ತಿದ್ದೇವೆ'' ಎಂದು ಹೇಳಿದರು.

  English summary
  Kaanadanthe Mayavadanu movie re releasing on March 06. Hero Vikas said a good kannada movie not performed well because of some third parties.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X