For Quick Alerts
  ALLOW NOTIFICATIONS  
  For Daily Alerts

  ಗಾಂಧಿನಗರದಲ್ಲಿ ಸಖತ್ ಸದ್ದು ಮಾಡ್ತಿದೆ 'ಕಾಲಾಂತಕ' ಟೀಸರ್

  |

  ಪರಭಾಷೆ ಚಿತ್ರಗಳ ಹಾವಳಿ, ಸ್ಟಾರ್ ನಟರ ಬರ್ತಡೇ, ಸ್ಟಾರ್ ಚಿತ್ರಗಳ ಪೋಸ್ಟರ್, ಸಂಕ್ರಾಂತಿ ಹಬ್ಬ ಇದೆಲ್ಲದರ ಜೊತೆ ಕನ್ನಡದಲ್ಲೊಂದು ಹೊಸ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ.

  ಮೊದಲ ಟೀಸರ್ನಲ್ಲೇ ಸದ್ದು ಮಾಡ್ತಿದ್ದು, ಪ್ರೇಕ್ಷಕರಲ್ಲಿ ಭರವಸೆ ಮೂಡಿಸುತ್ತಿದೆ. ಕಾಲಾಂತಕ ಎಂಬ ಟೀಸರ್ ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದು, ಥ್ರಿಲ್ಲಿಂಗ್ ಆಗಿದೆ. ಮರ್ಡರ್ ಮಿಸ್ಟರಿ ಕಥೆ ಹೊಂದಿರಬಹುದು ಎಂಬ ಸುಳಿವು ಕೊಡ್ತಿರುವ ಟೀಸರ್ ಕನ್ನಡ ಪ್ರೇಕ್ಷಕರನ್ನು ಸೆಳೆಯುತ್ತಿದೆ.

  'ಕಗ್ಗತ್ತಲಿನ ಮಳೆಯಲಿ, ಹೆಜ್ಜೆ ಗುರುತುಗಳು ಕಾಣದೆ ಇರಬಹುದು. ಕರ್ಮ-ಧರ್ಮದ ಗುರುತುಗಳು ಕಾಡ್ತಾನೆ ಇರ್ತಾವೆ' ಎಂಬ ಆಕರ್ಷಕ ಸಂಭಾಷಣೆ, ಪ್ರತಿಭಾನ್ವಿತ ಕಲಾವಿದರ ದಂಡು, ಅದಕ್ಕೆ ಛಾಯಾಗ್ರಹಣ, ಜುಡಾ ಸ್ಯಾಂಡಿ ಅವರು ಅದ್ಭುತ ಹಿನ್ನೆಲೆ ಸಂಗೀತ ಈ ಕಾಲಾಂತಕ ಟೀಸರ್ ಗೆ ಶಕ್ತಿ ತುಂಬಿದೆ.

  ಅಂದ್ಹಾಗೆ, ಈ ಚಿತ್ರವನ್ನ ನಿರ್ದೇಶನ ಮಾಡಿರುವುದು ಅಂಬರೀಶ್. ಈ ಹಿಂದೆ ಜ್ವಲಂತಂ ಎಂಬ ಸಿನಿಮಾ ಮಾಡಿದ್ದರು. ಕಾಲಾಂತಕ ಚಿತ್ರದಲ್ಲಿ ಕಥೆಯೇ ಹೀಯೋ ಎಂದು ಹೇಳಲಾಗುತ್ತಿದೆ. ಆ ಕತೆಗೆ ತಕ್ಕಂತೆ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

  ಕೆಜಿಎಫ್ ಚಿತ್ರದಲ್ಲಿ ಯಶ್ ಅವರ ತಾಯಿ ಪಾತ್ರ ಮಾಡಿದ್ದ ಅರ್ಚನಾ ಜೋಯಿಸ್, ಸಿದ್ಲಿಂಗು ಖ್ಯಾತಿಯ ಶ್ರೀಧರ್, ಧರ್ಮಣ್ಣ ಅರಸ್, ಯಶ್ ಶೆಟ್ಟಿ, ಕಾರ್ತಿಕ್ ಸಮಗ, ಸುಶ್ಮಿತಾ ಜೋಶಿ, ಶ್ರೀಜಿತ್, ರಂಗಭೂಮಿ ಕಲಾವಿದ ಪುನೀತ್, ಪ್ರಕಾಶ್ ತುಮಿನಾಡು ಸೇರಿದಂತೆ ಹಲವು ಕಲಾವಿದರು ತಾರಬಳಗದಲ್ಲಿದ್ದಾರೆ. ಈ ಹಿಂದೆ 'ರಂಗ್ ಬಿರಂಗಿ' ಚಿತ್ರ ನಿರ್ಮಿಸಿದ್ದ ಶಾಂತಕುಮಾರ್ ಕಾಲಾಂತಕ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

  English summary
  Kalantaka teaser has released. this teaser looking very promising. the movie directed by ambrish.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X