»   » 'ದೊಡ್ಮನೆ ಹುಡ್ಗ' ರಿಲೀಸ್ ಗೆ ಮಂಡ್ಯದಲ್ಲಿ ಹ್ಯಾಂಡ್ ಬ್ರೇಕ್

'ದೊಡ್ಮನೆ ಹುಡ್ಗ' ರಿಲೀಸ್ ಗೆ ಮಂಡ್ಯದಲ್ಲಿ ಹ್ಯಾಂಡ್ ಬ್ರೇಕ್

Posted By:
Subscribe to Filmibeat Kannada

ನೀವು ನಂಬಿದ್ರೂ, ಬಿಟ್ರೂ ಸದ್ಯಕ್ಕೆ ಬ್ರೇಕ್ ಆಗಿರುವ ಬಿಗ್ ನ್ಯೂಸ್ ಅಂದ್ರೆ ಇದೇ. ಮಂಡ್ಯದಲ್ಲಿ ಬಹು ನಿರೀಕ್ಷಿತ ಕನ್ನಡ ಸಿನಿಮಾ ದುನಿಯಾ ಸೂರಿ ನಿರ್ದೇಶನದ ಪುನೀತ್ ರಾಜ್ ಕುಮಾರ್, ಅಂಬರೀಶ್ ಅಭಿನಯದ 'ದೊಡ್ಮನೆ ಹುಡ್ಗ' ಬಿಡುಗಡೆ ಆಗುವುದು ಡೌಟು.

ಕಾವೇರಿ ಹೋರಾಟ ಭುಗಿಲೆದ್ದಿದ್ದರೂ, ಸ್ಥಳೀಯ ಕಾಂಗ್ರೆಸ್ ಶಾಸಕ ಅಂಬರೀಶ್ ಇಲ್ಲಿಯವರೆಗೂ ಮಂಡ್ಯಗೆ ಬಂದಿಲ್ಲ. ಸೆಪ್ಟೆಂಬರ್ ಮೊದಲ ವಾರದಲ್ಲಿ ವಿಶ್ವ ಕನ್ನಡ 'ಅಕ್ಕ' ಸಮ್ಮೇಳನದಲ್ಲಿ ಭಾಗವಹಿಸಲು ಅಂಬರೀಶ್ ಅಮೇರಿಕಾಗೆ ತೆರಳಿದ್ದರು. ಬಳಿಕ ಅವರು ಈವರೆಗೂ ಪತ್ತೆ ಆಗಿಲ್ಲ. [ಅಂಬರೀಶ್ ವಿರುದ್ಧ ಆಕ್ರೋಶ: 'ದೊಡ್ಮನೆ ಹುಡ್ಗ' ಚಿತ್ರಕ್ಕೆ ಕಂಟಕ]


ಕಾವೇರಿ ಚಳುವಳಿಯಲ್ಲಿ ಭಾಗಿಯಾಗದ ಅಂಬರೀಶ್ ಮೇಲೆ ಮಂಡ್ಯದ ಜನತೆ ಕುಪಿತಗೊಂಡಿದ್ದಾರೆ. ಅವರ ಕೋಪಕ್ಕೆ ಈಗ 'ದೊಡ್ಮನೆ ಹುಡ್ಗ' ಚಿತ್ರ ಗುರಿಯಾಗಿದೆ. ಮುಂದೆ ಓದಿ....


'ದೊಡ್ಮನೆ ಹುಡ್ಗ' ಚಿತ್ರಕ್ಕೆ ತಟ್ಟಿದ ಕಾವೇರಿ ಬಿಸಿ

'ದೊಡ್ಮನೆ ಹುಡ್ಗ' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ಮಂಡ್ಯ ಶಾಸಕ, ರೆಬೆಲ್ ಸ್ಟಾರ್ ಅಂಬರೀಶ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಹೀಗಾಗಿ ಮಂಡ್ಯದಲ್ಲಿ 'ದೊಡ್ಮನೆ ಹುಡ್ಗ' ಚಿತ್ರವನ್ನ ಯಾವುದೇ ಕಾರಣಕ್ಕೂ ಬಿಡುಗಡೆ ಮಾಡದಂತೆ ಕಾವೇರಿ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.


ಒಂದ್ವೇಳೆ ಬಿಡುಗಡೆ ಮಾಡಿದ್ರೆ?

ಈ ಶುಕ್ರವಾರ ಅಪ್ಪಿ-ತಪ್ಪಿ ಮಂಡ್ಯದಲ್ಲಿ 'ದೊಡ್ಮನೆ ಹುಡ್ಗ' ಬಿಡುಗಡೆ ಆದ್ರೆ ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಲು ಕಾವೇರಿ ಹೋರಾಟಗಾರರು ನಿರ್ಧರಿಸಿದ್ದಾರೆ.


ಚಲನಚಿತ್ರ ವಾಣಿಜ್ಯ ಮಂಡಳಿ ಕ್ರಮ ಕೈಗೊಳ್ಳಲಿ...

ಮಂಡ್ಯ ಜಿಲ್ಲೆಯಲ್ಲಿ 'ದೊಡ್ಮನೆ ಹುಡ್ಗ' ಚಿತ್ರ ಬಿಡುಗಡೆ ಆಗದ ಹಾಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕ್ರಮ ಕೈಗೊಳ್ಳಬೇಕು.


ತಪ್ಪಿದರೆ ಅನಾಹುತ..

ಒಂದ್ವೇಳೆ ಮಂಡ್ಯದಲ್ಲಿ 'ದೊಡ್ಮನೆ ಹುಡ್ಗ' ಚಿತ್ರ ಬಿಡುಗಡೆ ಆಗಿ, ಅದರಿಂದ ಮುಂದಾಗುವ ಅನಾಹುತಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೇ ನೇರ ಹೊಣೆ ಎಂದಿದ್ದಾರೆ ಕಾವೇರಿ ಹೋರಾಟಗಾರರು.


ಸಂಜಯ್ ಥಿಯೇಟರ್ ನಲ್ಲಿ ಇಲ್ಲ ಅಂಬರೀಶ್ ಕಟೌಟ್

'ದೊಡ್ಮನೆ ಹುಡ್ಗ' ಪ್ರದರ್ಶನಗೊಳ್ಳಲಿರುವ ಮಂಡ್ಯದ ಸಂಜಯ್ ಥಿಯೇಟರ್ ನಲ್ಲಿ ಪುನೀತ್ ರಾಜ್ ಕುಮಾರ್ ಕಟೌಟ್ ಹಾಕಲಾಗಿದೆ ಹೊರತು, ಅಂಬರೀಶ್ ಕಟೌಟ್ ನಿಲ್ಲಿಸಿಲ್ಲ. ಯಾಕಂದ್ರೆ, ಅಂಬಿ ಕಟೌಟ್ ಗಳು ಬೆಂಕಿಗೆ ಆಹುತಿ ಆಗುವ ಭಯ ಚಿತ್ರತಂಡಕ್ಕಿದೆ.


ಸದ್ಯದ ಪರಿಸ್ಥಿತಿಯಲ್ಲಿ ಡೌಟೇ.!

ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ವಿರುದ್ಧ ಸದ್ಯ ಮಂಡ್ಯದಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಹೀಗಾಗಿ, ಸೆಪ್ಟೆಂಬರ್ 30 ರಂದು ಮಂಡ್ಯದಲ್ಲಿ 'ದೊಡ್ಮನೆ ಹುಡ್ಗ' ಬಿಡುಗಡೆ ಆಗುವುದು ಡೌಟೇ.


English summary
Since Mandya MLA, Congress Politician, Kannada Actor, Rebel Star Ambareesh has not taken part in Cauvery Protest, Mandya, Kannada Activists warns KFCC to not to release 'Dodmane Hudga' in Mandya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada