For Quick Alerts
  ALLOW NOTIFICATIONS  
  For Daily Alerts

  ಫೋಟೋ ಶೂಟ್ ಮುಗಿಸಿದ ಅಭಿಷೇಕ್ : ಅಂಬಿ ಬರ್ತ್ ಡೇಗೆ ಚಿತ್ರ ಲಾಂಚ್

  By Pavithra
  |

  ಸ್ಯಾಂಡಲ್ ವುಡ್ ನ ರೆಬಲ್ ಸ್ಟಾರ್ ಅಂಬಿ ಪುತ್ರ ಸಿನಿಮಾರಂಗಕ್ಕೆ ಕಾಲಿಡಲು ಸಜ್ಜಾಗಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಈಗಾಗಲೇ ಇದಕ್ಕಾಗಿಯೇ ಸಾಕಷ್ಟು ತಯಾರಿಯನ್ನು ಮಾಡಿಕೊಂಡಾಗಿದೆ. ಡ್ಯಾನ್ಸ್, ಫೈಟಿಂಗ್, ಆಕ್ಟಿಂಗ್ ನಲ್ಲಿ ತರಬೇತಿ ಪಡೆದುಕೊಂಡು ಬಂದಿರುವ ಅಭಿಷೇಕ್ ಅವರ ಸಿನಿಮಾವನ್ನ ಮೈನಾ, ಸಂಜು ವೆಡ್ಸ್ ಗೀತಾ ಚಿತ್ರ ಖ್ಯಾತಿಯ ನಾಗಶೇಖರ್ ಡೈರೆಕ್ಟ್ ಮಾಡುತ್ತಿದ್ದಾರೆ.

  ಅಭಿಷೇಕ್ ಅಭಿನಯದ ಚಿತ್ರವನ್ನ ಸಂದೇಶ್ ನಾಗರಾಜ್ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಶುರು ಮಾಡಲು ಸಜ್ಜಾಗಿರುವ ನಾಗಶೇಖರ್ ಅಂಡ್ ಟೀಂ ಅಭಿಷೇಕ್ ಅವರ ಫೋಟೋ ಶೂಟ್ ಅನ್ನು ಮಾಡಿ ಮುಗಿಸಿದ್ದಾರೆ.

  ಅಂಬರೀಶ್ ಮಗನಿಗೆ ಜೋಡಿ ಆಗುವ ಬಗ್ಗೆ ಏನಂತಾರೆ ಈ ನಟಿ ?ಅಂಬರೀಶ್ ಮಗನಿಗೆ ಜೋಡಿ ಆಗುವ ಬಗ್ಗೆ ಏನಂತಾರೆ ಈ ನಟಿ ?

  ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್‌ ಕ್ಯಾಮೆರಾ ಮ್ಯಾನ್ ಗಳ ಜೊತೆ ಸೇರಿಕೊಂಡಿರುವ ಭುವನ್ ಗೌಡ ಅಭಿಷೇಕ್ ಅವರ ಫೋಟೋಗಳನ್ನ ಕ್ಯಾಮೆರಾ ದಲ್ಲಿ ಸೆರೆ ಹಿಡಿದಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್ ಕೂಡ ಜೊತೆಯಲ್ಲೇ ಇದ್ದು ಮಗನ ಪೋಟೋಗಳನ್ನ ನೋಡಿ ಫೈನಲ್ ಮಾಡುತ್ತಿದ್ದಾರೆ.

  ಸದ್ಯ ಪೋಟೋ ಶೂಟ್ ಮಾಡುವ ಮೂಲಕ ಲುಕ್ ಟೆಸ್ಟ್ ಮಾಡುತ್ತಿರುವ ನಿರ್ದೇಶಕರು ಅಭಿಷೇಕ್ ಸ್ಕ್ರೀನ್ ಅಪೀರಿಯನ್ಸ್ ತೆರೆ ಮೇಲೆ ಹೇಗಿರಬೇಕು ಎನ್ನುವುದನ್ನ ಪೈನಲ್ ಮಾಡಲಿದ್ದಾರೆ. ಮೈನಾ, ಸಂಜು ವೆಡ್ಸ್ ಗೀತಾ ಸಿನಿಮಾಗೆ ಕೆಲಸ ಮಾಡಿದ್ದ ತಂತ್ರಜ್ಞರೇ ಈ ಚಿತ್ರದಲ್ಲಿಯೂ ಕೆಲಸ ಮಾಡಲಿದ್ದಾರೆ. ಕರ್ನಾಟಕದ ಸುಂದರ ತಾಣಗಳಲ್ಲಿ ಚಿತ್ರದ ಶೂಟಿಂಗ್ ಮಾಡಲು ಪ್ಲಾನ್ ಮಾಡಿದ್ದು ಯು ಕೆ ನಲ್ಲಿ ಒಂದಿಷ್ಟು ದಿನಗಳ ಚಿತ್ರೀಕರಣ ಮಾಡಲಾಗುತ್ತೆ. ಅಭಿಷೇಕ್ ಚಿತ್ರ ರೆಬಲ್ ಸ್ಟಾರ್ ಹುಟ್ಟುಹಬ್ಬಕ್ಕೆ ಆರಂಭವಾಗಲಿದೆ.

  English summary
  Kannada actor Ambarish's son Abhishek's first film is a photo shoot Recently happened. Camera Man Bhuvan Gowda has shot a photo shoot..

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X