»   » ನಟ ಚೇತನ್ ಚಂದ್ರ ಶ್ರಮಕ್ಕೆ ಸಿಕ್ಕ ಪ್ರತಿಫಲ

ನಟ ಚೇತನ್ ಚಂದ್ರ ಶ್ರಮಕ್ಕೆ ಸಿಕ್ಕ ಪ್ರತಿಫಲ

Posted By:
Subscribe to Filmibeat Kannada

ಕನ್ನಡದ ನಟ ಚೇತನ್ ಚಂದ್ರ ತಮ್ಮ ಪ್ರತಿಭೆ ಮೂಲಕ ಜನಮನ್ನಣೆ ಗಳಿಸಿಕೊಂಡಿರುವ ನಟ. ಕನ್ನಡ ಚಿತ್ರರಂಗಕ್ಕೆ ಬಂದು ಸುಮಾರು 10 ವರ್ಷ ಕಳೆಯುತ್ತಿದೆ. ಇಲ್ಲಿಯವರೆಗೂ 12ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ.

ದಶಕಗಳ ಕಾಲ ಸ್ಯಾಂಡಲ್ ವುಡ್ ನಲ್ಲಿ ಏಳು-ಬೀಳು ಕಂಡ ನಟ ಈಗ ತಮ್ಮ ಜೀವನದ ಸಂತಸದ ಕ್ಷಣವನ್ನ ವ್ಯಕ್ತಪಡಿಸಿದ್ದಾರೆ. ಹೌದು, ಹೊಸ ಆಡಿ ಕಾರ್ ಖರೀದಿಸಿರುವ ಚೇತನ್ ''ಇದು ತಾಳ್ಮೆ ಮತ್ತು ಶ್ರಮಕ್ಕೆ ಸಿಕ್ಕ ಪ್ರತಿಫಲ'' ಎಂದು ಖುಷಿ ಹಂಚಿಕೊಂಡಿದ್ದಾರೆ.

Kannada Actor Chetan Chandra bought a New Car

ಇತ್ತೀಚೆಗಷ್ಟೇ ಚೇತನ್ ಚಂದ್ರ ಅಭಿನಯದ 'ಸಂಯುಕ್ತ-2' ಸಿನಿಮಾ ಬಿಡುಗಡೆಯಾಗಿತ್ತು. ಈಗ 'ವ್ಯಾಘ್ರ' ಮತ್ತು 'ಪ್ರಭುತ್ವ' ಎಂಬ ಎರಡು ಹೊಸ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ವ್ಯಾಘ್ರ' ಸಿನಿಮಾ ತಮಿಳಿನಲ್ಲೂ ತಯಾರಾಗುತ್ತಿದೆ.

ಇನ್ನು ಇದೇ ವರ್ಷ ಏಪ್ರಿಲ್ ತಿಂಗಳಿನಲ್ಲಿ ತಮ್ಮ ಗೆಳತಿ ರಚನಾ ಹೆಗಡೆ ಅವರನ್ನ ಚೇತನ್ ಚಂದ್ರ ವಿವಾಹವಾಗಿದ್ದರು. ಪರಸ್ಪರ ಪ್ರೀತಿಸಿ ಕುಟುಂಬದವರನ್ನ ಒಪ್ಪಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಹಸೆಮಣೆ ಏರಿದ ಸ್ಯಾಂಡಲ್ ವುಡ್ ನಟ ಚೇತನ್ ಚಂದ್ರ

Kannada Actor Chetan Chandra bought a New Car

'ಪಿಯುಸಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟ ಚೇತನ್ ಚಂದ್ರ ಬಳಿಕ ನಟ ಯಶ್ ರೊಂದಿಗೆ 'ರಾಜಧಾನಿ' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ 'ಹುಚ್ಚುಡುಗ್ರು', 'ಕುಂಭರಾಶಿ', 'ಪ್ಲಸ್', 'ಜಾತ್ರೆ', 'ಪ್ರೇಮಿಸಂ' ಚಿತ್ರಗಳಲ್ಲಿ ನಾಯಕರಾಗಿ ಅಭಿನಯಿಸಿದ್ದರು.

ಚೇತನ್ ಚಂದ್ರ ಚಿತ್ರಕ್ಕೆ ಟಾಲಿವುಡ್ ನಿರ್ದೇಶಕನಿಂದ ಆಕ್ಷನ್ ಕಟ್

English summary
Kannada Actor Chetan Chandra bought a New Audi Car.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada