»   » ಶಿಲ್ಪಗಾಗಿ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಗೋಲ್ಡನ್ ಸ್ಟಾರ್

ಶಿಲ್ಪಗಾಗಿ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಗೋಲ್ಡನ್ ಸ್ಟಾರ್

Posted By:
Subscribe to Filmibeat Kannada

ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆಯೇ ಸಿನಿಮಾರಂಗದಿಂದ ರಾಜಕೀಯಕ್ಕೆ ಸ್ಟಾರ್ ನಟರನ್ನ ಕರೆ ತರುವ ಕೆಲಸಗಳು ಜೋರಾಗಿ ನಡೆಯುತ್ತಿದೆ. ಈಗಾಗಲೇ ಸುದೀಪ್, ದರ್ಶನ್ ಪಾಲಿಟಿಕ್ಸ್ ಗೆ ಎಂಟ್ರಿ ಕೊಡುತ್ತಾರೆ ಅನ್ನೋದು ಹಳೆ ಸುದ್ದಿ ಆಗೋಯ್ತು.

ಹೊಸ ಸುದ್ದಿ ಅಂದರೆ ಪ್ರೇಕ್ಷಕರಿಗೆ ಚಮಕ್ ಕೊಟ್ಟು ಗೆಲುವಿನ ನಗೆ ಬೀರುತ್ತಿರುವ ಸರದಾರ ಗೋಲ್ಡನ್ ಸ್ಟಾರ್ ಗಣೇಶ್ ರಾಜಕೀಯಕ್ಕೆ ಬರುತ್ತಿದ್ದಾರೆ ಎನ್ನುವ ಬಿಸಿ ಬಿಸಿ ಸುದ್ದಿ ಗಾಂಧಿ ನಗರದ ತುಂಬೆಲ್ಲಾ ಹರಿದಾಡುತ್ತಿದೆ.

ಕೆನಡಾ -ಯು.ಎಸ್ ಸುತ್ತಲು ಹೊರಟರು ರಶ್ಮಿಕಾ ಮತ್ತು ಗಣೇಶ್

ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಳ್ಳದ ಗೋಲ್ಡನ್ ಸ್ಟಾರ್ ಚಿತ್ರೀಕರಣದ ನಡುವೆ ಬಿಡುವಿದ್ದಾಗ ಸಾಮಾಜಿಕ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದಾರೆ. ಈಗ ರಾಜಕೀಯದ ಕಣಕ್ಕಿಳಿಯುವ ಬಗ್ಗೆ ಗೋಲ್ಡನ್ ಸ್ಟಾರ್ ಸುಳಿವು ನೀಡಿದ್ದಾರೆ. ಹಾಗಾದರೆ ಗಣೇಶ್ ಯಾವ ಪಕ್ಷದಿಂದ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ? ಯಾವ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲುತ್ತಾರೆ? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ ಮುಂದೆ ಓದಿ..

ರಾಜಕೀಯಕ್ಕೆ ಗೋಲ್ಡನ್ ಸ್ಟಾರ್ ಎಂಟ್ರಿ

ರಾಜಕೀಯ ಕಣಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಎಂಟ್ರಿ ಕೊಡಲಿದ್ದಾರೆ. ಹಾಗಂತ ಗಣೇಶ್ ಸ್ಪರ್ದಿ ಆಗಿ ಎಲೆಕ್ಷನ್ ಗೆ ನಿಲ್ಲುತ್ತಿಲ್ಲ. ತಮ್ಮ ಪತ್ನಿಗೆ ಟಿಕೇಟ್ ಸಿಕ್ಕರೆ ಶಿಲ್ಪ ಗಣೇಶ್ ಪರವಾಗಿ ಪ್ರಚಾರ ಮಾಡಲಿದ್ದಾರೆ.

ಪತ್ನಿ ಸಾಥ್ ನೀಡಲಿರೋ ಗಣೇಶ್

ಗಣೇಶ್ ಅವರ ಪ್ರತಿ ಏಳಿಗೆಯಲ್ಲೂ ಕೈ ಜೋಡಿಸಿರುವ ನಿರ್ಮಾಪಕಿ ಶಿಲ್ಪಾ ಗಣೇಶ್ ಈ ಬಾರಿ ಬಿಜೆಪಿ ಪಕ್ಷದಿಂದ ಟಿಕೇಟ್ ಆಕಾಂಕ್ಷಿ ಆಗಿದ್ದಾರೆ. ಶಿಲ್ಪ ಅವರಿಗೆ ಟಿಕೇಟ್ ಸಿಕ್ಕರೆ ಅವರ ಪರವಾಗಿ ಗಣೇಶ್ ಪ್ರಚಾರ ಮಾಡಲಿದ್ದಾರೆ.

ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶಿಲ್ಪಾ

ಶಿಲ್ಪಾ ಗಣೇಶ್ ನಿರ್ಮಾಪಕಿಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವುದರ ಜೊತೆಯಲ್ಲಿ ರಾಜಕೀಯದಲ್ಲಿ ಸಕ್ರೀಯವಾಗಿ ತೊಡಗಿಕೊಂಡಿದ್ದಾರೆ. ಬಿ ಜೆ ಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆಯಾಗಿ ಸಾಕಷ್ಟು ಕೆಲಸ ಮಾಡಿರುವ ಶಿಲ್ಪಾ ಗಣೇಶ್ ಈ ಬಾರಿ ಚುನಾವಣೆಗೆ ಸ್ಪರ್ಧಿಸುವ ಎಲ್ಲಾ ಸಾಧ್ಯತೆಗಳಿವೆ.

English summary
Kannada Actor Ganesh campaigning for wife Shilpa. This time Shilpa Ganesh is likely to contest from Rajarajeshwari city from BJP.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X