»   » ಪ್ರೀತಿಯ ಅರ್ಜುನ್ ವಿಧಿವಶ; ದು:ಖತಪ್ತ ಜಗ್ಗೇಶ್

ಪ್ರೀತಿಯ ಅರ್ಜುನ್ ವಿಧಿವಶ; ದು:ಖತಪ್ತ ಜಗ್ಗೇಶ್

Subscribe to Filmibeat Kannada

ನವರಸ ನಾಯಕನಿಗೆ ಅಗಲಿಕೆಯ ದು:ಖ. ಜಗ್ಗೇಶ್ ಮುದ್ದಿನ ನಾಯಿ ಅರ್ಜುನ್ ಅಸುನೀಗಿದ್ದಾನೆ. ಸ್ವತಃ ಜಗ್ಗೇಶ್ ತಾವು ತಮ್ಮ ಪ್ರೀತಿಯ ಅರ್ಜುನ್ ನೊಂದಿಗೆ ಹೊಂದಿದ್ದ ಭಾಂಧವ್ಯವನ್ನು ಸಾಮಾಜಿಕ ತಾಣದಲ್ಲಿ ತೆರೆದಿಟ್ಟಿದ್ದಾರೆ.

ಸಾಕು ನಾಯಿಯನ್ನು ಮನೆ ಮಗನಂತೆ ಸಲುಹಿದ ಜಗ್ಗೇಶ್ ಗೆ ಈಗ ಅರ್ಜುನ್ ನನ್ನು ಕಳೆದುಕೊಂಡ ನೋವು. ಜಗ್ಗೇಶ್ ಸಾಮಾಜಿಕ ಜಾಲತಾಣದ ಪೇಜ್ ನೋಡಿದರೆ ಅವರ ಶ್ವಾನ ಪ್ರೀತಿ ಗೊತ್ತಾಗುತ್ತದೆ. ಸಾಕು ಪ್ರಾಣಿಗಳ ಹಾಗೆ, ಹಚ್ಚಿಕೊಂಡರೆ ಅವುಗಳ ನೆನಪು ಮರೆಯಲು ಕಾಲವೇ ಬೇಕಾದೀತು.

ಅದು ಮನೆಯ ಮುದ್ದಾದ ಬೆಕ್ಕಿನ ಮರಿ, ನಾಯಿ, ದನ ಯಾವುದೇ ಇರಬಹುದು. ಸಾಕು ಪ್ರಾಣಿಗಳ ಮೇಲಿನ ಪ್ರೀತಿಯೇ ಹಾಗೆ, ನಮಗೆ ಪ್ರಪಂಚ ದೊಡ್ಡದು ಆದರೆ ಅವಕ್ಕೆ ತನ್ನ ಒಡಯನೇ ಪ್ರಪಂಚ. ಅಂದು ದಕ್ಷ ಅಧಿಕಾರಿ ಡಿಕೆ ರವಿ ಮೃತಪಟ್ಟಿದ್ದಾಗ ಅವರ ಮನೆ ಸಾಕು ನಾಯಿ ಗಳಗಳನೇ ಕಣ್ಣೀರು ಇಟ್ಟಿದ್ದು ಇನ್ನು ಕಣ್ಣ ಮುಂದೆ ಹಾಗೆ ಇದೆ.[ಡಿಕೆ ರವಿ ಮುದ್ದಿನ ನಾಯಿ ರೋನಿ ರೋದನಕ್ಕಿಲ್ಲ ಉತ್ತರ]

ಜಗ್ಗೇಶ್ ಮಾತುಗಳಲ್ಲೇ ಕೇಳಿದರೆ ಸಾಕು ಪ್ರಾಣಿಯ ಅಗಲಿಕೆ ನೋವು ಅರ್ಥವಾದೀತು.. 14 ವರ್ಷದ ಭಾಂಧವ್ಯ ಇಂದು ಕೊನೆಯಾಯಿತು. ಆರ್ಥವಾಗದವರಿಗೆ ಸಾಮಾನ್ಯ ನಾಯಿ... ಅರ್ಥವಾದವರಿಗೆ ದೇವರು ನಮಗೆ ಕಳಿಸಿಕೊಟ್ಟ ಅನುಭವಕ್ಕೂ ನಿಲುಕದ ಪ್ರೀತಿಯ ಸಂಕೇತ... ನಾನು ಏಕಾಂಗಿಯಾಗಿ ಇರಲು ಬಯಸುವ ಮನುಷ್ಯ... ಆದರೆ ಇವನು ಈ 14 ವರ್ಷ ನನ್ನ ಏಕಾಂಗಿತನ ನೀಗಿದವ frown emoticon ನನ್ನ ಅನಿಸಿಕೆ ರಾಯರೆ ಇವನನ್ನು ನನಗಾಗಿ ಕಳಿಸಿದ್ದು ಅನ್ನಿಸುತ್ತಿದೆ... ರಾಯರಿಗೆ ವಂದನೆ ಅರ್ಪಿಸಿ ಭಾರದ ಹೃದಯದಿಂದ ಅವನನ್ನು ಕಳಿಸುತ್ತೇನೆ... ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.[ನವರಸ ನಾಯಕ ಜಗ್ಗೇಶ್ ಮೊಮ್ಮಗು ನೋಡಿದ್ದೀರಾ?]

ಜಗ್ಗೇಶ್ ಭಾರವಾದ ಹೃದಯಕ್ಕೆ ಮರೆವು ಔಷಧವಾಗಬಹುದು. ಸಾಕು ಪ್ರಾಣಿ ಅಗಲಿಕೆ ತಾಪವನ್ನು ಭರಿಸುವ ಶಕ್ತಿ ಜಗ್ಗೇಶ್ ಅವರಿಗೆ ಬರಲಿ ಎಂದಷ್ಟೇ ಹೇಳಬಹುದು. ಮರೆಯಾದ ಅರ್ಜುನ್ ಜಾಗದಲ್ಲಿ ಮತ್ತೊಬ್ಬ ಅಭಿಮನ್ಯು ಉದಯಿಸಬಹುದು. ಕಳೆದ ವಾರ ಜನಿಸಿದ ತಮ್ಮ ಮೊಮ್ಮಗನಿಗೆ ಅರ್ಜುನ್ ಎಂದು ನಾಮಕರಣ ಮಾಡುವುದರ ಮೂಲಕ ಮೆಚ್ಚಿನ ನಾಯಿ ನೆನಪನ್ನು ಜಗ್ಗೇಶ್ ಜತೆಯೇ ಇಟ್ಟುಕೊಂಡಿದ್ದಾರೆ.

ಜಗ್ಗೇಶ್ ಶ್ವಾನ ಪ್ರೀತಿ

ಜಗ್ಗೇಶ್ ತಾವೇ ಹೇಳಿಕೊಂಡಂತೆ ಏಕಾಂಗಿತನ ಅವರಿಗೆ ಅಚ್ಚುಮೆಚ್ಚು. ಆದರೆ ಅರ್ಜುನ್ ಅವರ ಮೂಕ ಮಾತುಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದ. ಇಡೀ ಕರ್ನಾಟಕವನ್ನು ನಗೆಗಡಲಲ್ಲಿ ತೇಲಿಸುವ ನವರಸ ನಾಯಕನ ನಗುವಿನಲ್ಲಿ ಅರ್ಜುನ್ ಪಾತ್ರಧಾರಿಯಾಗುತ್ತಿದ್ದ.

ಪವಡಿಸು ಪರಮಾತ್ಮ

ನಾಯಿಗೆ 'ನಾರಾಯಣ' ಎಂದೇ ಹಿರಿಯರು ಕರೆದಿದ್ದಾರೆ. ಜಗ್ಗೇಶ್ ಅಚ್ಚುಮೆಚ್ಚಿನ ಅರ್ಜುನ್ ಅವರೊಂದಿಗೆ ಮಲಗುತ್ತಿದ್ದ. ಒಡೆಯನ ನೋವು ನಲಿವಿನಲ್ಲಿ ಭಾಗಿಯಾಗುತ್ತಿದ್ದ. ಜಗ್ಗೇಶ್ ಮತ್ತು ಅರ್ಜುನ್ ನಡುವಿನ ಭಾಂಧವ್ಯಕ್ಕೆ ಈ ಚಿತ್ರವೇ ಸಾಕ್ಷಿ. ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ.

ಅರ್ಜುನ್ ನೋಟ

ಬಿಳಿ ಬಣ್ಣದ ಅರ್ಜುನ್ ನೋಟವೇ ಆಕರ್ಷಕ. ಜೋತು ಬಿದ್ದ ಕಿವಿಗಳು. ಕಿರಿದಾದ ಮೂಗು ಯಾವ ಸಿಂಹ ಗಂಭೀರತೆಗೂ ಕಡಿಮೆ ಇಲ್ಲ. ಇಂಥ ಆಕರ್ಷಣೆ ಜತೆ ಒಡೆಯನ ಪ್ರೀತಿ ಸಿಕ್ಕಿದ್ದ ಅರ್ಜುನ್ ಇನ್ನು ನೆನಪು ಮಾತ್ರ.

ಒಡೆಯನ ಅಪ್ಪುಗೆ

ಜಗ್ಗೇಶ್ ಜೀವನದ ಅಪರೂಪದ ಕ್ಷಣಗಳಲ್ಲಿ ಇದು ಒಂದು. ತಮ್ಮ ಮುದ್ದಿನ ನಾಯಿ ಜತೆ ಕಳೆಯುತ್ತಿದ್ದ ಕ್ಷಣವನ್ನು ಜಗ್ಗೇಶ್ ಹಂಚಿಕೊಂಡು ಆನಂದಿಸಿದ್ದರು. ಮರೆಯಾದ ಅರ್ಜುನನಿಗೆ ನಮ್ಮಿಂದಲೂ ಶ್ರದ್ಧಾಂಜಲಿ.

English summary
Kannada Actor Jaggesh mourns the death of his pet dog 'Arjun'. The Actor took his Twitter and Facebook Account to reveal his attachment towards his pet.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada