For Quick Alerts
  ALLOW NOTIFICATIONS  
  For Daily Alerts

  'ಹೃದಯವಂತ' ರಘುವೀರ್ ರನ್ನ ನೆನೆದು ಸಂಕಟ ಪಟ್ಟ ಜಗ್ಗೇಶ್

  |

  Recommended Video

  ರಘುವೀರ್ ರನ್ನು ನೆನೆದು ಸಂಕಟ ಪಟ್ಟ ನಟ ಜಗ್ಗೇಶ್ | FILMIBEAT KANNADA

  ಒಂದ್ಕಾಲದಲ್ಲಿ ನವರಸ ನಾಯಕ ಜಗ್ಗೇಶ್ ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾಗ, ನಟ ರಘುವೀರ್ ರವರ ಮನೆಗೆ ತೆರಳಿ 2 ಸಾವಿರ ರೂಪಾಯಿಗಳನ್ನು ಪಡೆದಿದ್ದರಂತೆ. ಹೃದಯವಂತ ಆಗಿದ್ದ ರಘುವೀರ್ ಅಂದು ಜಗ್ಗೇಶ್ ಗೆ ಸಹಾಯ ಮಾಡಿದ್ದರು.

  ಕಷ್ಟದ ದಿನಗಳಲ್ಲಿ ತಮ್ಮ ಕೈ ಹಿಡಿದಿದ್ದ ನಟ ರಘುವೀರ್ ರನ್ನ ನೆನೆದು ಜಗ್ಗೇಶ್ ಸಂಕಟ ಪಟ್ಟಿದ್ದಾರೆ. ನಿನ್ನೆಯಷ್ಟೇ ನಿಮ್ಮ ಫಿಲ್ಮಿಬೀಟ್ ಕನ್ನಡ ನಟ ರಘುವೀರ್ ರವರ ಬದುಕಿನ ಕುರಿತು 'ಯಾರಿಗೂ ಗೊತ್ತಿಲ್ಲದ ರಘುವೀರ್ ಜೀವನದ ಕರಾಳ ಅಧ್ಯಾಯ' ಶೀರ್ಷಿಕೆ ಅಡಿ ಲೇಖನ ಪ್ರಕಟ ಮಾಡಿತ್ತು.

  ಯಾರಿಗೂ ಗೊತ್ತಿಲ್ಲದ ರಘುವೀರ್ ಜೀವನದ ಕರಾಳ ಅಧ್ಯಾಯಯಾರಿಗೂ ಗೊತ್ತಿಲ್ಲದ ರಘುವೀರ್ ಜೀವನದ ಕರಾಳ ಅಧ್ಯಾಯ

  ಟ್ವೀಟ್ ಮೂಲಕ ಆ ಲೇಖನವನ್ನ ಓದಿ, ಟ್ವಿಟ್ಟರ್ ನಲ್ಲಿ ತಮ್ಮ ಹಾಗೂ ರಘುವೀರ್ ನಡುವಿನ ಒಡನಾಟದ ಕುರಿತು ಜಗ್ಗೇಶ್ ಬರೆದುಕೊಂಡಿದ್ದಾರೆ.

  ''ನಾನು ಪರಿಮಳ ಕಷ್ಟದ ದಿನದಲ್ಲಿ ಇವರ ಮನೆಗೆ ಹೋಗಿ 2000 ಪಡೆದಿದ್ದೆ. ತುಂಬಾ ಹೃದಯವಂತ. ಇವರ ತಂದೆ ಮುನಿಯಲ್ಲಪ್ಪ ನನ್ನ ಆತ್ಮೀಯರು. ತನ್ನ ಇಷ್ಟದ ವಿರುದ್ಧ ಆದ ಮದುವೆಯನ್ನ ಕ್ಷಮಿಸಲಿಲ್ಲ. ಅಷ್ಟು ಹಠ. ಶೋಭರಾಜ್ ರನ್ನ ಸಿನಿಮಾಗೆ ಪರಿಚಯಿಸಿದ್ದು ಇವನೇ. ಎಸ್.ನಾರಾಯಣ್ ನಿರ್ದೇಶಕ ಆದದ್ದು ಇವನಿಂದ. ಇವನ ಸಂಸ್ಥೆಯಲ್ಲಿ ನಾನು ಸಂಬಳ ಪಡೆದಿರುವೆ. ಸಂಕಟವಾಯಿತು ನೆನೆದು'' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

  kannada-actor-jaggesh-remembers-raghuveer

  ನಟ ರಘುವೀರ್ ಕೊನೆಯುಸಿರೆಳೆದಾಗ, ಅಂತಿಮ ದರ್ಶನ ಪಡೆಯಲು ಭೇಟಿ ಕೊಟ್ಟ ಕನ್ನಡದ ಕೆಲವೇ ಕೆಲವು ನಟರ ಪೈಕಿ ಜಗ್ಗೇಶ್ ಕೂಡ ಒಬ್ಬರು.

  'ಅಜಯ್ ವಿಜಯ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ರಘುವೀರ್, 'ಚೈತ್ರ ಪ್ರೇಮಾಂಜಲಿ' ಮತ್ತು 'ಶೃಂಗಾರ ಕಾವ್ಯ' ಅಂತಹ ಹಿಟ್ ಸಿನಿಮಾಗಳನ್ನು ನೀಡಿದ್ದರು. ವೈಯುಕ್ತಿಕ ಬದುಕಿನಲ್ಲಿ ಆದ ಕೆಲ ಘಟನೆಗಳಿಂದ ರಘುವೀರ್ ಮನಸ್ಸು ಘಾಸಿಗೊಂಡಿತ್ತು. ಮೇ 8, 2014 ರಂದು ಹೃದಯಾಘಾತದಿಂದ ರಘುವೀರ್ ನಿಧನರಾದರು.

  English summary
  Kannada Actor Jaggesh tweets about Raghuveer
  Thursday, November 28, 2019, 7:14
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X