»   » ವಾವ್.! ಹೊಟ್ಟೆ ಕರಗಿಸಿ ಸ್ಲಿಮ್ ಆದ ಕೋಮಲ್ ಕುಮಾರ್

ವಾವ್.! ಹೊಟ್ಟೆ ಕರಗಿಸಿ ಸ್ಲಿಮ್ ಆದ ಕೋಮಲ್ ಕುಮಾರ್

Posted By:
Subscribe to Filmibeat Kannada

ಚಿತ್ರರಂಗದ ಎಲ್ಲಾ ತಾರೆಯರು ಇತ್ತೀಚೆಗೆ ಫಿಟ್ನೆಸ್ ಪಾಲಿಸಿಯನ್ನು ಅನುಸರಿಸುತ್ತಿದ್ದಾರೆ. ತುಂಬಾ ದಪ್ಪಗಿದ್ದವರು ಕೊಂಚ ಸ್ಲಿಮ್ ಆಗಿ ಮಿಂಚಲು ಸಾಕಷ್ಟು ಕಸರತ್ತು ಮಾಡುತ್ತಾರೆ. ಈ ಸ್ಲಿಮ್ ಆಗುವ ಸಾಲಿಗೆ ಹೊಸ ಸೇರ್ಪಡೆ ನಮ್ಮ ಕಾಮಿಡಿ ನಟ ಕೋಮಲ್ ಕುಮಾರ್ ಅವರು.

ಹೌದು 'ಕಥೆ-ಚಿತ್ರಕಥೆ-ನಿರ್ದೇಶನ ಪುಟ್ಟಣ್ಣ' ಚಿತ್ರದ ನಂತರ ಬೇರೆ ಯಾವುದೇ ಸಿನಿಮಾಗಳಿಗೆ ಸಹಿ ಹಾಕದ ನಟ ಕೋಮಲ್ ಕುಮಾರ್ ಅವರು ತೂಕ ಇಳಿಸಿಕೊಳ್ಳುವ ಕೆಲಸದಲ್ಲಿ ಬ್ಯುಸಿಯಾಗಿದ್ದರು.[ನಟ ಕೋಮಲ್ ನಂಬಿರುವ 'ಆ' ಪದ್ಮಾವತಿ ಬಗ್ಗೆ ಊರೆಲ್ಲಾ ಮಾತು.!]

Kannada Actor Komal Kumar Loses 14 Kg in 4 months

ಇದೀಗ ಕೋಮಲ್ ಅವರು ಪಟ್ಟ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದ್ದು, ಸುಮಾರು 4 ತಿಂಗಳಿನಲ್ಲಿ ಬರೋಬ್ಬರಿ 14 ಕೆ.ಜಿ ತೂಕ ಇಳಿಸಿಕೊಂಡು ಸ್ಲಿಮ್ ಆಗಿ ಕಂಗೊಳಿಸುತ್ತಿದ್ದಾರೆ.

ಕಾಮಿಡಿ ನಟರಾಗಿ ತೆರೆಯ ಮೇಲೆ ತಮ್ಮದೇ ಆದ ವಿಭಿನ್ನ ಬಾಡಿ ಲಾಂಗ್ವೇಜ್ ನಿಂದ ಪ್ರೇಕ್ಷಕರನ್ನು ಸೆಳೆಯುವ ನಟ ಕೋಮಲ್ ಕುಮಾರ್ ಅವರು ಬಾಡಿ ಕೊಂಚ ಜಾಸ್ತಿ ಆಯಿತು, ಸ್ಲಿಮ್ ಆಗಬೇಕು ಅನ್ನೋ ಆಸೆಯಿಂದ ಡಯೆಟ್ ನಿಂದ ಹಿಡಿದು ವ್ಯಾಯಾಮ ಕೂಡ ಮಾಡಿದ್ದಾರೆ.[ವಾವ್.! ರಾಗಿಣಿ ಸಖತ್ ಸ್ಲಿಮ್ ಬ್ಯೂಟಿ ಆದ್ರು ಕಣ್ರೀ]

Kannada Actor Komal Kumar Loses 14 Kg in 4 months

ವಿಶೇಷ ಟ್ರೈನರ್ ಒಬ್ಬರನ್ನು ಇಟ್ಟುಕೊಂಡು ವರ್ಕೌಟ್ ಶುರು ಮಾಡಿದ ನಟ ಕೋಮಲ್ ಕುಮಾರ್ ಅವರು ಈ ಬಾರಿ ಜಿಮ್ ಬದ್ಲಾಗಿ ಯೋಗ ಮಾಡಲು ಶುರು ಹಚ್ಚಿಕೊಂಡಿದ್ದರು. ಜೊತೆಗೆ ದೈನಂದಿನ ಆಹಾರ ಕ್ರಮವನ್ನು ಕೂಡ ಕೋಮಲ್ ಅವರು ಕಟ್ಟುನಿಟ್ಟಾಗಿ ಪಾಲಿಸಿದ್ದರು.

Kannada Actor Komal Kumar Loses 14 Kg in 4 months

ಇದರ ಪರಿಣಾಮವಾಗಿ ಕೋಮಲ್ ಅವರು ಇದೀಗ 14 ಕೆ.ಜಿ ತೂಕ ಇಳಿಸಿಕೊಂಡು ಸ್ಮಾರ್ಟ್ ಅಂಡ್ ಸ್ಲಿಮ್ ಆಗಿ ಕಾಣಿಸುತ್ತಿದ್ದಾರೆ. ಈ ಮೊದಲು ನಟ ಕೋಮಲ್ ಅವರು ಥೈರಾಯ್ಡ್ ಸಮಸ್ಯೆಯಿಂದ ದಪ್ಪಗಾಗಿದ್ದರಂತೆ, ಇದೀಗ ಅದಕ್ಕೆ ತಕ್ಕಂತೆ ಟ್ರೀಟ್ ಮೆಂಟ್ ಮಾಡಿಸಿಕೊಂಡು ಆರೋಗ್ಯವಂತರಾಗಿದ್ದು, ಸಾಕಷ್ಟು ತೂಕ ಕಳೆದುಕೊಂಡು ಸ್ಲಿಮ್ ಆಗಿದ್ದಾರೆ.[ಆರ್.ಜೆ ಆಯ್ತು ಇದೀಗ ಸಿಂಗರ್ ಆದ ರ‍್ಯಾಪಿಡ್‌ ರಶ್ಮಿ]

Kannada Actor Komal Kumar Loses 14 Kg in 4 months

ಸದ್ಯಕ್ಕೆ ಕೋಮಲ್ ಕುಮಾರ್ ಅವರ ಹೊಸ ಚಿತ್ರ 'ಡೀಲ್ ರಾಜಾ' ಸಂಪೂರ್ಣಗೊಂಡು ತೆರೆಗೆ ಬರಲು ತಯಾರಾಗಿದ್ದು, ಇದರಲ್ಲಿ ಕೋಮಲ್ ಅವರು ಹಳೇ ಅವತಾರದಲ್ಲಿದ್ದಾರೆ. ಸ್ಲಿಮ್ ಆದ ಮೇಲೆ ಯಾವುದೇ ಚಿತ್ರಕ್ಕೆ ಸಹಿ ಹಾಕಿಲ್ಲ.[ಕಲೆಕ್ಷನ್ ಚೆನ್ನಾಗಿದ್ದರೂ 'ಪುಟ್ಟಣ್ಣ'ನಿಗೆ ಮಲ್ಟಿಪ್ಲೆಕ್ಸ್ ಸಿಗುತ್ತಿಲ್ಲ]

Kannada Actor Komal Kumar Loses 14 Kg in 4 months

ಪಕ್ಕಾ ಕಾಮಿಡಿ 'ಡೀಲ್ ರಾಜಾ' ಚಿತ್ರದ ಆಡಿಯೋ ಈಗಾಗಲೇ ಬಿಡುಗಡೆ ಆಗಿದೆ. ಚಿತ್ರದಲ್ಲಿ ಭಾನುಶ್ರೀ ಮೆಹ್ರಾ ಅವರು ಕೋಮಲ್ ಅವರ ಜೊತೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

English summary
Kannada Actor Komal Kumar has reduced 14 kgs in 4 months and he is looking more slim and health.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada