»   » ಸೆನ್ಸಾರ್ ನಿಂದ ಕ್ಲೀನ್ ಚಿಟ್ ಪಡೆದ ಕೋಮಲ್ 'ಲೊಡ್ಡೆ'

ಸೆನ್ಸಾರ್ ನಿಂದ ಕ್ಲೀನ್ ಚಿಟ್ ಪಡೆದ ಕೋಮಲ್ 'ಲೊಡ್ಡೆ'

Posted By:
Subscribe to Filmibeat Kannada

'ಪುಂಗಿದಾಸ', 'ಕರೋಡ್ ಪತಿ' 'ನಮೋ ಭೂತಾತ್ಮ', 'ಗೋವಾ'..ಹೀಗೆ ಸಾಲು ಸಾಲು ಚಿತ್ರಗಳನ್ನು ಕೊಟ್ಟಿರುವ ಕೋಮಲ್ ಯಶಸ್ಸು ಗಳಿಸಲು ಕಷ್ಟಪಡುತ್ತಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಆದರೂ ಧೃತಿಗೆಡದ ಕೋಮಲ್ ಹೊಸ ಹೊಸ ಚಿತ್ರಗಳನ್ನು ಮಾಡುತ್ತಲೇ ಇದ್ದಾರೆ.

ಇದೀಗ ಕೋಮಲ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ಚಿತ್ರ 'ಲೊಡ್ಡೆ'. ಸದ್ದಿಲ್ಲದೆ ಚಿತ್ರೀಕರಣ ಮುಗಿಸಿರುವ 'ಲೊಡ್ಡೆ' ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ನಿಂದ ಯು/ಎ ಪ್ರಮಾಣಪತ್ರ ದೊರಕಿದೆ. ನಿರ್ದೇಶಕ ಎಸ್.ವಿ.ಸುರೇಶ್ ಜುಲೈ ಅಂತ್ಯಕ್ಕೆ 'ಲೊಡ್ಡೆ' ಚಿತ್ರವನ್ನು ತೆರೆಯ ಮೇಲೆ ತರುವ ಯೋಜನೆಯನ್ನು ಹಾಕಿಕೊಂಡಿದ್ದಾರೆ.

Kannada Actor Komal kumar starrer 'Lodde' gets U/A certificate

'ಲೊಡ್ಡೆ' ಅಂದ ಮಾತ್ರಕ್ಕೆ ಚಿತ್ರದಲ್ಲಿ ಸಾಹಸಸಿಂಹ ಡಾ.ವಿಷ್ಣುವರ್ಧನ್ ಗೆ ಅವಹೇಳನ ಮಾಡಿಲ್ಲ. ಬದಲಾಗಿ, ಇಡೀ ಚಿತ್ರವನ್ನ ಅಭಿನಯ ಭಾರ್ಗವನಿಗೆ ಅರ್ಪಿಸಲಾಗಿದೆ. ಒಂದು ಹಾಡನ್ನ ಸ್ಪೆಷಲ್ ಆಗಿ 'ಹೃದಯವಂತ'ನಿಗಾಗಿ ರೆಡಿಮಾಡಲಾಗಿದೆ.

Kannada Actor Komal kumar starrer 'Lodde' gets U/A certificate

ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡುತ್ತಿರುವ ಆಕಾಂಕ್ಷ ಪುರಿ 'ಲೊಡ್ಡೆ' ನಾಯಕನ ಜೊತೆ ಡ್ಯುಯೆಟ್ ಹಾಡಿದ್ದಾರೆ. ಇನ್ನೂ ನವೀನ್ ಕೃಷ್ಣ, ಅವಿನಾಶ್ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಜುಲೈ ಅಂತ್ಯಕ್ಕೆ ಕೋಮಲ್ 'ಲೊಡ್ಡೆ' ತೆರೆ ಮೇಲೆ ಬರಲಿದೆ.

English summary
Kannada movie 'Lodde' gets U/A Certificate from the Censor Board. 'Lodde' features Kannada actor Komal Kumar, Actress Akanksha Puri in the lead role. The movie is directed by S.V Suresh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada