»   » ಡಾ.ರಾಜ್ ಅವರ ಕಟ್ಟಾಭಿಮಾನಿ ಕುಣಿಗಲ್ ರಾಮನಾಥ್ ಇನ್ನಿಲ್ಲ

ಡಾ.ರಾಜ್ ಅವರ ಕಟ್ಟಾಭಿಮಾನಿ ಕುಣಿಗಲ್ ರಾಮನಾಥ್ ಇನ್ನಿಲ್ಲ

Posted By:
Subscribe to Filmibeat Kannada

ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಅವರ ಪರಮಾಪ್ತ, ಕಟ್ಟಾಭಿಮಾನಿ 85 ವರ್ಷದ ಕನ್ನಡದ ಹಿರಿಯ ನಟ ಕುಣಿಗಲ್ ರಾಮನಾಥ್ ಅವರು ಇನ್ನಿಲ್ಲ. ಒಬ್ಬ ಉತ್ತಮ ನಟನನ್ನು ಕನ್ನಡ ಚಿತ್ರರಂಗ ಕಳೆದುಕೊಂಡಿದೆ.

ತೀವ್ರ ಅನಾರೋಗ್ಯ ಹಿನ್ನಲೆಯಲ್ಲಿ ಹಿರಿಯ ನಟ ಕುಣಿಗಲ್ ರಾಮನಾಥ್ ಅವರು ಇಂದು (ಫೆಬ್ರವರಿ 1) ಮಧ್ಯಾಹ್ನ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

Kannada Actor Kunigal Ramanath is no more

ಕನ್ನಡ ಭಾಷೆಯಲ್ಲಿ ಸುಮಾರು 150 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಟ ಕುಣಿಗಲ್ ರಾಮನಾಥ್ ಅವರು ಪತ್ನಿ, ಓರ್ವ ಮಗ ಮತ್ತು ಒಬ್ಬ ಮಗಳನ್ನು ಅಗಲಿದ್ದಾರೆ. ಕುಣಿಗಲ್ ಎಂಬಲ್ಲಿ ಒಂದು ಅಂಗಡಿ ಹಾಕಿಕೊಂಡಿದ್ದ ರಾಮನಾಥ್ ಅವರು ನಟ ಡಾ. ರಾಜ್ ಅವರನ್ನು ತಮ್ಮ ಪಾಲಿನ ದೇವರೆಂದೇ ಭಾವಿಸುತ್ತಿದ್ದರು.

ನಟ ರಾಮನಾಥ್ ಅವರು ಅವರ ಅಂಗಡಿಯ ಗೋಡೆಯ ತುಂಬಾ ವರನಟ ಡಾ. ರಾಜ್ ಅವರ ಫೊಟೋಗಳನ್ನು ಹಾಕಿಕೊಂಡು ಪೂಜೆ ಮಾಡುತ್ತಿದ್ದರು. ಅಷ್ಟರಮಟ್ಟಿಗೆ ಡಾ.ರಾಜ್ ಅವರ ಅಬಿಮಾನಿ ಆಗಿದ್ದರು.

ಡಾ.ರಾಜ್ ಅವರಿಗೆ ತುಂಬಾ ಆಪ್ತರಾಗಿದ್ದ ರಾಮನಾಥ್ ಅವರು 'ಸಮ್ಮಿಲನ', 'ತೂಗುವೆ ಕೃಷ್ಣನ', 'ಅನುರಾಗದ ಅಲೆಗಳು', 'ಪ್ರಾಣ ಸ್ನೇಹಿತ' 'ಸಪ್ತಪದಿ', 'ಕಿತ್ತೂರಿನ ಹುಲಿ' ಹೀಗೆ ಸುಮಾರು 150 ಸಿನಿಮಾಗಳು ಸೇರಿದಂತೆ ರಾಜ್ ಕುಮಾರ್ ಅವರ ಜೊತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

English summary
Kannada Movie Actor Kunigal Ramanath dies at 85. A die hard fan of Dr Rajkumar,Ramanath has acted in over 150 movies.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada