ಮರಳಿ ಸಿನಿಮಾ ಮಾಡೋದಕ್ಕೆ ಬಂದ ಮಯೂರ್ ಪಟೇಲ್

ನಟ ಮಯೂರ್ ಪಟೇಲ್ ಕನ್ನಡಿಗರಿಗೆ ಹೊಸಬರೇನು ಅಲ್ಲ. ಹಾಗಂತ ಜನಪ್ರಿಯ ನಟರು ಅಲ್ಲ. ಆಗಾಗ ಒಂದಷ್ಟು ಸಿನಿಮಾ ಮಾಡುತ್ತಿದ್ದ ಮಯೂರ್ ಪಟೇಲ್ ಅನೇಕ ವರ್ಷಗಳಿಂದ ಕಣ್ಮರೆ ಆಗಿದ್ದರು.

ಆದರೆ, ಮಯೂರ್ ಈಗ ಮತ್ತೆ ಚಿತ್ರರಂಗಕ್ಕೆ ಬಂದಿದ್ದಾರೆ. 'ರಾಜೀವ' ಎಂಬ ಹೆಸರಿನಲ್ಲಿ ಮಯೂರ್ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ರೈತರ ಬಗ್ಗೆ ಇದೆಯಂತೆ. ಅದೇ ಕಾರಣಕ್ಕೆ 'ಬಂಗಾರದ ಮನುಷ್ಯ' ಸಿನಿಮಾದಲ್ಲಿ ರಾಜ್ ಕುಮಾರ್ ಪಾತ್ರದ ಹೆಸರನ್ನೇ ಈ ಚಿತ್ರಕ್ಕೆ ಇಡಲಾಗಿದೆ.

ಈಗಾಗಲೇ, ಈ ಸಿನಿಮಾದ ಶೂಟಿಂಗ್ ಮುಗಿದಿದ್ದು, ಟ್ರೇಲರ್ ಬಿಡುಗಡೆಯಾಗಿದೆ. ಫ್ಲೈಯಿಂಗ್ ಕಿಂಗ್ ಮಂಜು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ರಮೇಶ್ ಮತ್ತು ಕಿರಣ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

kannada actor mayur patel back with a new film rajeeva

ಅಕ್ಷತ ಶ್ರೀಧರ್ ಶೆಟ್ಟಿ ಈ ಸಿನಿಮಾದ ನಾಯಕಿ ಆಗಿದ್ದಾರೆ. ಅಕ್ಷತ ಈ ಹಿಂದೆ 'ಮರ್ಡರ್' ಎನ್ನುವ ಕಿರುಚಿತ್ರ ಮಾಡಿದ್ದು, ಈ ಸಿನಿಮಾದ ಅವಕಾಶ ಅದರಿಂದ ಸಿಕ್ಕಿದೆಯಂತೆ.

ಮಯೂರ್ ಪಟೇಲ್ 'ಮಣಿ', 'ಉಡೀಸ್', 'ಗುನ್ನ' 'ಲವ್ ಸ್ಟೋರಿ' ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ.

More from Filmibeat

English summary
Kannada actor 'Mayur Patel' back with a new film 'Rajeeva'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X