»   » 'ಹೆಬ್ಬುಲಿ' ಸ್ಟೈಲ್ ಮಾಡಿಕೊಂಡ 'ಈ' ಪೋರ ಖ್ಯಾತ ನಟರೊಬ್ಬರ ಮಗ

'ಹೆಬ್ಬುಲಿ' ಸ್ಟೈಲ್ ಮಾಡಿಕೊಂಡ 'ಈ' ಪೋರ ಖ್ಯಾತ ನಟರೊಬ್ಬರ ಮಗ

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅವರ 'ಹೆಬ್ಬುಲಿ' ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆದಾಗ ಭಾರಿ ಫೇಮಸ್ ಆಗಿದ್ದು ಅವರ ವಿಭಿನ್ನ ಹೇರ್ ಸ್ಟೈಲ್. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಬಹಳ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದ್ದು ಮಾತ್ರವಲ್ಲದೇ, ಸುದೀಪ್ ಅವರ ಸ್ಟೈಲಿಷ್ ಹೇರ್ ಸ್ಟೈಲ್ ಅನ್ನು ಅಭಿಮಾನಿಗಳು ಕೂಡ ಫಾಲೋ ಮಾಡಿದ್ದರು.

ಸುದೀಪ್ ಅಭಿಮಾನಿಗಳಾದ ಸಣ್ಣ ಮಕ್ಕಳಿಂದ ಹಿಡಿದು, ದೊಡ್ಡವರ ತನಕ ಕೂಡ ಅವರ ಹೇರ್ ಸ್ಟೈಲ್ ಅನ್ನು ಕಾಪಿ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದೇ, ಬಿಟ್ಟಿದ್ದು.[ವೈರಲ್ ಆಗಿದೆ 'ಹೆಬ್ಬುಲಿ' ಕಿಚ್ಚ ಸುದೀಪ್ ಹೇರ್ ಸ್ಟೈಲ್]


ಇದೀಗ ಅದೇ ಸುದೀಪ್ ಅವರ ವಿಭಿನ್ನ ಹೇರ್ ಸ್ಟೈಲನ್ನು ಕನ್ನಡದ ಖ್ಯಾತ ನಟರೊಬ್ಬರ ಮಗ ಫಾಲೋ ಮಾಡಿದ್ದಾರೆ. ಸುದೀಪ್ ಅವರ ಕಟ್ಟಾ ಅಭಿಮಾನಿ ಆಗಿರುವ ಪುಟ್ಟ ಹುಡುಗ, ಸ್ವಲ್ಪ ಲೇಟ್ ಆದ್ರೂ ಲೇಟೆಸ್ಟ್ ಆಗಿ ಕಿಚ್ಚನ ತರ ಹೇರ್ ಸ್ಟೈಲ್ ಮಾಡಿಕೊಂಡು ಸುದ್ದಿಯಾಗಿದ್ದಾರೆ. ಯಾರು 'ಆ' ಖ್ಯಾತ ನಟನ ಮಗ ಅನ್ನೋದನ್ನ ನೋಡಲು ಮುಂದೆ ಓದಿ...


ಪುಟ್ಟ ಹುಡುಗ ಏಕಾಂತ್

ಈ ಚಿತ್ರದಲ್ಲಿ ಗುಮ್ಮೋ ಗೂಳಿ ತರ ಪೋಸ್ ಕೊಟ್ಟಿರೋದು ಏಕಾಂತ್. ಅಂದಹಾಗೆ ಈ ಏಕಾಂತ್ ಯಾರು ಅಂತ ಅನ್ಕೊಂಡ್ರ, ಅದೇ 'ನೆನಪಿರಲಿ' ನಟ ಪ್ರೇಮ್ ಅವರ ಮುದ್ದಿನ ಮಗ. ಇದೇ ಏಕಾಂತ್ ಗೆ ಸುದೀಪ್ ಅಂದ್ರೆ ಪಂಚಪ್ರಾಣ.['ಹೆಬ್ಬುಲಿ' ಫಸ್ಟ್ ಲುಕ್ ಔಟ್: ಹೊಸ ಅವತಾರದಲ್ಲಿ ಕಿಚ್ಚ ಸುದೀಪ್]


ನ್ಯೂ ಹೇರ್ ಸ್ಟೈಲ್

ಲೇಟ್ ಆದ್ರೂ ಲೇಟೆಸ್ಟ್ ಆಗಿ 'ಹೆಬ್ಬುಲಿ' ಸ್ಟೈಲ್ ನಲ್ಲಿ ಕೇಶ ವಿನ್ಯಾಸ ಮಾಡಿಕೊಂಡಿರುವ ಏಕಾಂತ್ ಅವರ ಫೋಟೋಗಳನ್ನು, ಖುದ್ದು ನಟ ಪ್ರೇಮ್ ಅವರು ಫೇಸ್ ಬುಕ್ಕಿನಲ್ಲಿ ಶೇರ್ ಮಾಡಿದ್ದಾರೆ. ನಟ ಪ್ರೇಮ್ ಅವರು ಸುದೀಪ್ ಅವರ ಜೊತೆ ತೆರೆ ಹಂಚಿಕೊಂಡಿಲ್ಲ, 'ರಿಂಗ್ ರೋಡ್ ಶುಭ' ಚಿತ್ರದ ಒಂದು ಹಾಡಿನಲ್ಲಿ ಮಾತ್ರ ಒಂದಾಗಿದ್ದರು. ಆದ್ರೆ ಇವರ ಮಗ ಮಾತ್ರ ಕಿಚ್ಚನ ಅಭಿಮಾನಿ.[ಶೂಟಿಂಗ್ ಹಂತದಲ್ಲೇ ರೆಕಾರ್ಡ್ ಬ್ರೇಕ್ ಮಾಡಿದ ಕಿಚ್ಚನ 'ಹೆಬ್ಬುಲಿ']


ಪ್ರೇಮ್ ಅವರ 'ಟೈಗರ್' ಏಕಾಂತ್

ತಮ್ಮ ಮುದ್ದು ಏಕಾಂತ್ ಅವರ ಪೋಟೋ ಶೇರ್ ಮಾಡಿರುವ ಲವ್ಲಿ ಸ್ಟಾರ್ ಪ್ರೇಮ್ ಅವರು 'ನನ್ನ ಹುಲಿಯ ಹೊಸ ಹೇರ್ ಸ್ಟೈಲ್' ಅಂತ ಬರೆದುಕೊಂಡಿದ್ದಾರೆ. ಅಂತೂ ಏಕಾಂತ್ ಅವರು ಸುದೀಪ್ ಅವರ ಕಟ್ಟಾ ಅಭಿಮಾನಿ ಅಂತ ಇದರಿಂದ ಪ್ರೂವ್ ಆಗಿದೆ.


ಕೊನೆಯ ಹಂತದಲ್ಲಿ 'ಹೆಬ್ಬುಲಿ' ಶೂಟಿಂಗ್

ಸದ್ಯಕ್ಕೆ ಕಾಶ್ಮೀರದಲ್ಲಿ ಸುಮಾರು 20 ದಿನಗಳ ಕಾಲ ಶೂಟಿಂಗ್ ಮುಗಿಸಿ ವಾಪಸಾಗಿರುವ ನಟ ಸುದೀಪ್ ಅವರು, ಮುಂದಿನ ಹಂತದ ಶೂಟಿಂಗ್ ಗೆ ತಯಾರಾಗಿದ್ದಾರೆ. ಮುಂದಿನ ಭಾಗದ ಶೂಟಿಂಗ್ ಖಳನಟ ರವಿ ಕಿಶನ್ ಅವರ ಜೊತೆ ಗೋವಾದಲ್ಲಿ ನಡೆಯಲಿದ್ದು, ಅದಕ್ಕಾಗಿ ಸುದೀಪ್ ಅವರು ಎಲ್ಲಾ ರೀತಿಯ ತಯಾರಿ ನಡೆಸಿದ್ದಾರೆ. ಚಿತ್ರದಲ್ಲಿ ಸುದೀಪ್ ಅವರಿಗೆ ಅಮಲಾ ಪೌಲ್ ಸಾಥ್ ಕೊಟ್ಟಿದ್ದು, 'ಗಜಕೇಸರಿ' ಕೃಷ್ಣ ಅವರು ಆಕ್ಷನ್-ಕಟ್ ಹೇಳಿದ್ದಾರೆ.(ಚಿತ್ರಕೃಪೆ:ಫೇಸ್ ಬುಕ್)


English summary
Kannada Actor Nenapirali Prem shared photos of his son calling it his "Tiger's new style". The style resembles Actor Sudeep's hairstyle in his upcoming movie Hebbuli. Actor Sudeep, Kannada Actor ravichandran, Actress Amala Paul in the lead role. The movie is directed by S.Krishna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada