»   » 29 ವರ್ಷಗಳ ನಂತರ ಶಿವಣ್ಣ ಅವರ ದಾಖಲೆ ಮುರಿದ 'ರಂಗಿ' ನಟ ನಿರುಪ್ ಭಂಡಾರಿ.!

29 ವರ್ಷಗಳ ನಂತರ ಶಿವಣ್ಣ ಅವರ ದಾಖಲೆ ಮುರಿದ 'ರಂಗಿ' ನಟ ನಿರುಪ್ ಭಂಡಾರಿ.!

Posted By:
Subscribe to Filmibeat Kannada

ಇದು ಸುಮಾರು 29 ವರ್ಷಗಳ ಹಿಂದಿನ ಕಥೆ ಆ ಕಾಲದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು 1986 ರಲ್ಲಿ ಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಂಡಿದ್ದ 'ಆನಂದ್' ಚಿತ್ರ ಬಿಡುಗಡೆಯಾಗಿ ಕೇವಲ 25 ವಾರಗಳ ಕಾಲ ಪ್ರದರ್ಶನ ಕಂಡು ದಾಖಲೆ ಸೃಷ್ಟಿಸಿತ್ತು.

ಈ ದಾಖಲೆಯನ್ನು ಮುರಿಯುವುದಾಗಲಿ ಅಥವಾ ಸರಿಗಟ್ಟುವುದಾಗಲಿ ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಆದರೆ ಈಗ 29 ವರ್ಷಗಳ ನಂತರ ಮೊಟ್ಟ ಮೊದಲ ಬಾರಿಗೆ 'ರಂಗಿತರಂಗ' ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪರಿಚಯವಾದ ನಟ ನಿರುಪ್ ಭಂಡಾರಿ ಅವರು ಈ ದಾಖಲೆಯನ್ನು ಮುರಿಯುವತ್ತ ದಾಪುಗಾಲು ಹಾಕಿದ್ದಾರೆ.[ಚಿತ್ರ ವಿಮರ್ಶೆ : 'ರಂಗಿತರಂಗ' ಬಲು ರೋಚಕ ]

Kannada Actor Nirup Bhandari breaks 29 year debut record

ಬರೋಬ್ಬರಿ 25 ವಾರಗಳ ಪ್ರದರ್ಶನ ಕಂಡು ಇನ್ನು ಸಶಕ್ತವಾಗಿ ಮುಂದುವರಿಯುತ್ತಿರುವ 'ರಂಗಿತರಂಗ' ಸಿನಿಮಾದ ಎಲ್ಲಾ ಕ್ರೆಡಿಟ್ ಗಳು ಸಿನಿಮಾದ ಸ್ಕ್ರಿಪ್ಟ್ ಗೆ ಸಲ್ಲಬೇಕು ಎಂದು ನಟ ನಿರುಪ್ ಭಂಡಾರಿ ಅಭಿಪ್ರಾಯ ಪಟ್ಟಿದ್ದಾರೆ.

'ನಾನು ಸಹನಿರ್ದೇಶಕನಾಗಿ ಸಿನಿಮಾದಲ್ಲಿ ಭಾಗಿಯಾಗಿದ್ದು, ನಾಯಕ ನಟನಾಗುವ ಯಾವುದೇ ಯೋಜನೆ ಇರಲಿಲ್ಲ. ಆದರೆ ಕೊನೆಗೆ ಹೊಸಬನನ್ನು ತೊಡಗಿಸಿಕೊಳ್ಳಲು ನಿರ್ಧರಿಸಿದಾಗ ನನ್ನನ್ನೂ ಆಡಿಶನ್ ಗೆ ಕರೆಯಲಾಯಿತು. ಎಂದು ನಟ ನಿರುಪ್ ಅವರು ಹೀರೋ ಆಗಿ ಆಯ್ಕೆ ಆದದ್ದನ್ನು ನೆನಪಿಸಿಕೊಳ್ಳುತ್ತಾರೆ.[ನೀವು 'ರಂಗಿತರಂಗ' ತಂಡದೊಂದಿಗೆ ಕೆಲಸ ಮಾಡಬೇಕೆ? ಇಲ್ಲಿದೆ ಅವಕಾಶ! ]

Kannada Actor Nirup Bhandari breaks 29 year debut record

ಇಲ್ಲಿ ಎಲ್ಲರೂ ಹೊಸಬರೇ ಆಗಿದ್ದರಿಂದ ನನ್ನ ಮೇಲೆ ಯಾವುದೇ ಒತ್ತಡ ಇರಲಿಲ್ಲ, ನಾನು ಈಗಲೂ ಮೊದಲಿನಂತೆಯೇ ಇದ್ದೇನೆ. ಆದರೆ ಜನ ನನ್ನನ್ನು ಗುರುತಿಸುವ ರೀತಿ ಬದಲಾಗಿದೆ. ನನ್ನ ಮುಂದಿನ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಇದೆ. ನನ್ನ ಫೋನ್ ನಂಬರ್ ತಿಳಿದುಕೊಳ್ಳಲು ಜನ ಪ್ರಯತ್ನಿಸುತ್ತಿದ್ದಾರೆ' ಎಂದು ನಿರುಪ್ ನುಡಿಯುತ್ತಾರೆ.

ತಮ್ಮ ಸಹೋದರ ಅನುಪ್ ಭಂಡಾರಿ ಅವರು ನಿರ್ದೇಶನ ಮಾಡಿರುವ 'ರಂಗಿತರಂಗ' ಸಿನಿಮಾಗೆ ಟಿವಿ ವಾಹಿನಿಗಳ ಬೇಡಿಕೆ ಹೆಚ್ಚಿದೆಯಂತೆ. 'ಕರ್ನಾಟಕದಾದ್ಯಂತ ಹಲವಾರು ಮಲ್ಟಿಪ್ಲೆಕ್ಸ್ ಗಳನ್ನೂ ಒಳಗೊಂಡಂತೆ 30ಕ್ಕೂ ಹೆಚ್ಚು ಕಡೆ ಪ್ರದರ್ಶನ ಕಾಣುತ್ತಿರುವುದರಿಂದ ಟಿವಿ ಹಕ್ಕುಗಳ ಮಾರಾಟ ಮಾಡುವ ಅವಶ್ಯಕತೆ ಕಂಡುಬಂದಿಲ್ಲ ಎನ್ನುತ್ತಾರೆ ನಟ ನಿರುಪ್.[ಭಂಡಾರಿ ಬ್ರದರ್ಸ್ 'ರಂಗಿತರಂಗ'ಕ್ಕೆ ಭಾರಿ ಕಂಟಕ]

Kannada Actor Nirup Bhandari breaks 29 year debut record

ಅಂದಹಾಗೆ ಸ್ಯಾಂಡಲ್ ವುಡ್ ನ ಹಲವಾರು ನಿರ್ದೇಶಕರು ಅವಕಾಶಗಳ ಸುರಿಮಳೆಯನ್ನೇ ಸುರಿಸಿದ್ದಾರಂತೆ. ಆದರೆ ತಮ್ಮ ಮುಂದಿನ ಯೋಜನೆಗೆ ಸಹೋದರನ ಜೊತೆಗೆ ಸೇರಿಕೊಂಡಿರುವ ನಿರುಪ್ ಭಂಡಾರಿ 'ಸದ್ಯಕ್ಕೆ ಅಣ್ಣ ಅನುಪ್ ಜೊತೆ ಕೆಲಸ ಮಾಡುವ ಬಾಂಧವ್ಯ ಚೆನ್ನಾಗಿದೆ. ಮುಂದೆ ಬೇರೆ ನಿರ್ದೇಶಕರ ಜೊತೆ ಕೆಲಸ ಮಾಡುವ ಯೋಜನೆ ಹಾಕಿಕೊಂಡಿದ್ದೇನೆ ಎಂದು ನಿರುಪ್ ಭಂಡಾರಿ ಹೇಳಿದ್ದಾರೆ.[ಚಂದನವನದ ಕೋಲ್ಮಿಂಚು 'ರಂಗಿತರಂಗ'ಕ್ಕೆ, ನೂರರ ಸಂಭ್ರಮ]

ವಿಶೇಷ ಏನಪ್ಪಾ ಅಂದ್ರೆ ಡಿಸೆಂಬರ್ 20 ರಂದು ಸ್ಯಾಂಡಲ್ ವುಡ್ ನ ಕೋಲ್ಮಿಂಚು 'ರಂಗಿತರಂಗ' ಸಿನಿಮಾ ತಂಡ ಬೆಳ್ಳಿಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳಲಿದೆ.

    English summary
    Way back in 1986, when Shivarajkumar scripted box office history in Sandalwood with his debut film, Anand (the film crossed 25 weeks), there was little doubt that the feat will be surpassed quickly. But surprisingly, it took 29 years! And it took a ‘nobody’ in the film industry to do so.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada