For Quick Alerts
  ALLOW NOTIFICATIONS  
  For Daily Alerts

  'RCB' ವಿರುದ್ಧ ಅಸಮಾಧಾನ ಹೊರಹಾಕಿದ ನಟ ಪ್ರದೀಪ್

  |

  ಐಪಿಎಲ್ ಪ್ರಾರಂಭವಾಗಿದ್ದು, ಕ್ರಿಕೆಟ್ ಪ್ರಿಯರು ಐಪಿಎಲ್ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಕರ್ನಾಟದವರು ಈ ಬಾರಿಯೂ ಕಪ್ ನಮ್ದೆ ಎಂದು ಬೀಗುತ್ತಿದ್ದಾರೆ. ಆದರೆ ಬಹುತೇಕರು ಆರ್ ಸಿ ಬಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆರ್ ಸಿ ಬಿ ಥೀಮ್ ಸಾಂಗ್ ರಿಲೀಸ್ ಆದ ಮೇಲೆ ತಂಡದ ಮೇಲಿನ ಕೋಪ ಮತ್ತಷ್ಟು ಹೆಚ್ಚಾಗಿದೆ.

  ಕಾರಣ ಆರ್ ಸಿ ಬಿ ಥೀಮ್ ಸಾಂಗ್ ನಲ್ಲಿ ಹುಡುಕಿದರು ಕನ್ನಡ ಪದಗಳು ಸಿಗಲ್ಲ. ಒಂದೆಡೆ ಹಿಂದಿ ಹೇರಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೆ ಆರ್ ಸಿ ಬಿ ಹಾಡು ಹಿಂದಿಯಲ್ಲಿ ರಾರಾಜಿಸುತ್ತಿದೆ. ಇದು ಕನ್ನಡಿಗರ ಬೇಸರಕ್ಕೆ ಕಾರಣವಾಗಿದೆ. ಕರ್ನಾಟಕ ತಂಡದಲ್ಲಿ ಕನ್ನಡಿಗರೇ ಇಲ್ಲ ಎನ್ನುವ ನಿರಾಸೆ ಜೊತೆಗೆ ಹಾಡು ಕೂಡ ಕನ್ನಡದಲ್ಲಿ ಇಲ್ಲದೆ ಇರುವುದು ಆರ್ ಸಿ ಬಿ ವಿರುದ್ಧ ಕೋಪಕ್ಕೆ ಕಾರಣವಾಗಿದೆ.

  ಪಂಜಾಬ್ vs ಡೆಲ್ಲಿ ಪಂದ್ಯ: ಕಿಚ್ಚ ಸುದೀಪ್‌ಗೆ ಕಾಡಿತು ಆ ಪ್ರಶ್ನೆ?ಪಂಜಾಬ್ vs ಡೆಲ್ಲಿ ಪಂದ್ಯ: ಕಿಚ್ಚ ಸುದೀಪ್‌ಗೆ ಕಾಡಿತು ಆ ಪ್ರಶ್ನೆ?

  ಇದೀಗ ಸ್ಯಾಂಡಲ್ ವುಡ್ ನಟ ಪ್ರದೀಪ್ ಕೂಡ ಆರ್ ಸಿ ಬಿ ವಿರುದ್ಧ ಬೇಸರ ಹೊರಹಾಕಿದ್ದಾರೆ. ಯಾವತ್ತು ಆರ್ ಸಿ ಬಿಯನ್ನು ಬೆಂಬಲಿಸಿಲ್ಲ. ದಯವಿಟ್ಟು 'ರಾಯಲ್ ಚಾಲೆಂಜರ್ಸ್ ದೆಹಲಿ' ಎಂದು ಹೆಸರು ಬದಲಾಯಿಸಿ ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  "ನಾನು ಯಾವತ್ತೂ ಈ ತಂಡನ ಬೆಂಬಲಿಸಿಲ್ಲ ಬೆಂಬಲಿಸೋದು ಇಲ್ಲ. ನಮ್ಮೂರು ಬೆಂಗಳೂರು ಅಂತ ಬದಲಾದ್ರು, ಇವ್ರಿನ್ನು 'bangalore' ಅಲ್ಲೇ ಇದ್ದಾರೆ, ನ್ಯಾಯವಾಗಿ ಕನ್ನಡ ಸಾಂಗ್ ನ 13 ವರ್ಷದಿಂದ ಹಾಕಿಲ್ಲ, ಒಬ್ಬ ಕನ್ನಡಿಗನಿಗೂ ಚಾನ್ಸ್ ಕೊಡಲ್ಲ. ದಯವಿಟ್ಟು royal challengers Delhi ಅಂತ ಹೆಸರು ಬದಲಾಯ್ಸ್ಕೊಳ್ಳಿ. ನಮ್ಮೂರು ಹೆಸರು ತೆಗಿರಿ" ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

  ಇದು ಕನ್ನಡದ ಹೆಣ್ಣು ಮಗಳ ಹೃದಯ | Pranitha | Filmibeat Kannada

  ಇನ್ನೂ ಆರ್ ಸಿ ಬಿ ಥೀಮ್ ಸಾಂಗ್ ಗೆ ಕನ್ನಡ ಸಾಹಿತ್ಯ ಸೇರಿಸಿ ಮಾಡಿರುವ ಹಾಡನ್ನು ಪ್ರದೀಪ್ ಶೇರ್ ಮಾಡಿದ್ದಾರೆ. "ಈ ವರ್ಷದ ಆರ್ ಸಿ ಬಿ ಥೀಮ್ ಅನ್ನು ಅವರದ್ದೆ ಹಾಡು, ಅವರದ್ದೆ ಟ್ಯೂನ್, ಆದ್ರೆ ನಮ್ಮ ಕನ್ನಡ ಸಾಹಿತ್ಯ. ನಮ್ಮ @YellowBoardFilm ತಂಡದಿಂದ. ಹಿಂಗಿದಿದ್ರೆ ಚೆನ್ನಾಗಿರ್ತಿತ್ತು ಅನ್ನೋವ್ರು ಒಂದ್ ಲೈಕ್ ಕೊಡ್ರಪ್ಪ. ಚೂರು ಪಾರು ತಪ್ಪಿದ್ರೆ ಕ್ಷಮಿಸಿ ಯಾಕೆ ಅಂದ್ರೆ ಇದು ಒಂದು ಪುಟ್ಟ ಪ್ರಯತ್ನ ಅಷ್ಟೆ" ಎಂದು ಬರೆದುಕೊಂಡಿದ್ದಾರೆ.

  English summary
  Jolly Days fame Actor Pradeep unhappy with RCB for not supporting Kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X