»   » ಹ್ಯಾಟ್ರಿಕ್ ಹೀರೋ ಶಿವಣ್ಣ ಅವರು ಅಜ್ಜ ಆದಾಗ..!

ಹ್ಯಾಟ್ರಿಕ್ ಹೀರೋ ಶಿವಣ್ಣ ಅವರು ಅಜ್ಜ ಆದಾಗ..!

Posted By:
Subscribe to Filmibeat Kannada

ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿದ್ದ 'ಬೆಳ್ಳಿ ಹೆಜ್ಜೆ' ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ನಟ ಶಿವಣ್ಣ ಅವರು ಅಲ್ಲಿಂದ ಇಲ್ಲಿಯವರೆಗೂ ನಡೆದು ಬಂದ ಹಾದಿಯನ್ನು ಸಭಿಕರಲ್ಲಿ ಹಂಚಿಕೊಂಡರು. ಜೊತೆಗೆ ಅಭಿಮಾನಿಗಳ ಹಾಗೂ ಪ್ರೇಕ್ಷಕರ ಪ್ರಶ್ನೆಗಳಿಗೆ ಶಿವಣ್ಣ ಅವರು ಉತ್ತರಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ನಿರ್ದೇಶಕರಾದ ಶ್ರೀ ಸಾಯಿ ಪ್ರಕಾಶ್, ತಾರೆಯರಾದ ಶ್ರೀಮತಿ ತಾರಾ ಅನೂರಾಧ, ನಟರಾದ ರಾಘವೇಂದ್ರ ರಾಜ್ ಕುಮಾರ್, ಶಿವಕುಮಾರ್, ಅರವಿಂದ್ ಹಾಗೂ ಹೊನ್ನವಳ್ಳಿ ಕೃಷ್ಣ ಹಾಜರಿದ್ದರು.['ಬೆಳ್ಳಿ ಹೆಜ್ಜೆ' ಸಂವಾದ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ.!]

ಜೊತೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ. ರಾ. ಗೋವಿಂದು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್. ಆರ್. ವಿಶುಕುಮಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್ ಹೆಚ್. ಬಿ. ದಿನೇಶ್ ಹಾಗೂ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕ ವರ್ಗ ಈ ವಿಶೇಷ ಸಮಾರಂಭಕ್ಕೆ ಸಾಕ್ಷಿಯಾಗಿತ್ತು.[ಚಿತ್ರಗಳು: ಬೆಳ್ಳಿ ಹೆಜ್ಜೆಯಲ್ಲಿ ಡಾ.ಶಿವಣ್ಣನ ಮನದಾಳದ ಮಾತು]

ಸಮಾರಂಭದಲ್ಲಿ ಪ್ರೇಕ್ಷಕರು ಕೇಳಿದ ಪ್ರಶ್ನೆಗೆ ಶಿವಣ್ಣ ಅವರ ಉತ್ತರ ಮತ್ತು ಶಿವಣ್ಣ ಅವರು ತಮ್ಮ ಜೀವನದಲ್ಲಿ ನಡೆದ ಕೆಲವು ಘಟನೆಗಳನ್ನು ಸಮಾರಂಭದಲ್ಲಿ ನೆರೆದವರ ಜೊತೆ ಹಂಚಿಕೊಂಡರು, ಅದೇನೆಂಬುದನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ

ಶಿವಣ್ಣ ಅಜ್ಜ ಆದಾಗ..!

ಸುಮಾರು ನೂರು ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿರುವ ಶಿವಣ್ಣ ಅವರೆ, ಮಗಳ ಮದುವೆ ಮಾಡಿದ್ದೀರಿ. ಮುಂದಿನ ವರ್ಷ ಅಜ್ಜ ಆಗುತ್ತೀರಿ. ತಮ್ಮ ಈ ಭಡ್ತಿಯನ್ನು ಹೇಗೆ ಸ್ವೀಕರಿಸುತ್ತೀರಿ ಎಂಬ ಅಭಿಮಾನಿಯ ಪ್ರಶ್ನೆಗೆ, ನಾನು ಯುವ ಅಜ್ಜನಾಗುತ್ತೇನೆ ಎಂದು ಶಿವಣ್ಣ ನೀಡಿದ ಉತ್ತರ ನೆರೆದಿದ್ದ ಸಭಿಕರನ್ನು ನಗೆಗಡಲಲ್ಲಿ ತೇಲಿಸಿತು.

ರಾಜ್ ಅವರು ವೀರಪ್ಪನ್ ನಿಂದ ಅಪಹರಣಕ್ಕೆ ಒಳಗಾದ ಸಂದರ್ಭ

ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರು ಕುಖ್ಯಾತ ಕಾಡುಗಳ್ಳ ವೀರಪ್ಪನ್ ನಿಂದ ಅಪಹರಣಕ್ಕೆ ಒಳಗಾದ ಸಂದರ್ಭದಲ್ಲಿ ಶಿವಣ್ಣ ಅವರ ಮನೆಗೆ ಭೇಟಿಯಿತ್ತ ಅಭಿಮಾನಿಗಳು ಧರ್ಮಾತೀತವಾಗಿ ಪ್ರಿತ್ಯಾದರಗಳನ್ನು ತೋರಿದ್ದನ್ನು ನಟ ಡಾ ಶಿವರಾಜ್ ಕುಮಾರ್ ಅವರು ಸ್ಮರಿಸಿಕೊಂಡರು.

ಎಲ್ಲಾ ಧರ್ಮದವರು ಬಂದು ಪೂಜೆ ಮಾಡಿದ್ದರು

ಅಪ್ಪಾಜಿ ವೀರಪ್ಪನ್ ಅವರಿಂದ ಅಪಹರಣ ಆದ ಸಂದರ್ಭದಲ್ಲಿ ಮನೆಗೆ ಎಲ್ಲಾ ಧರ್ಮದವರು ಬಂದು ಪ್ರಾರ್ಥಿಸುತ್ತಿದ್ದರು. ಹಿಂದೂಗಳು ಪೂಜೆ ಮಾಡಿದರೆ, ಮುಸಲ್ಮಾನರು ನಮಾಜ್ ಮಾಡಿದರು. ಕ್ರೈಸ್ತರು ಏಸುವನ್ನು ಪ್ರಾರ್ಥಿಸಿದರು. ಭಾರತಾಂಬೆಗೆ ಜೈ. ಅಭಿಮಾನಿಗಳ ಹರಕೆಯಿಂದಲೇ ತಮ್ಮ ತಂದೆ ಸುರಕ್ಷಿತವಾಗಿ ಹಿಂದಿರುಗಿದರು. ನಾವೂ ಕೂಡಾ ಅಧೀರರಾಗಲಿಲ್ಲ ಎಂದು ಶಿವಣ್ಣ ಅವರು ಭಾವುಕರಾದರು.

ಹೆಣ್ಣು ಕೊಟ್ಟ ಮಾವನನ್ನು ಗೆಳೆಯನಾಗಿ ಕಾಣಿರಿ

ಅಪ್ಪಾಜಿ ಅವರಿಗೆ ಹಾಗೂ ಮಾವ ಎಸ್. ಬಂಗಾರಪ್ಪ ಅವರಿಗೆ ಮಣ್ಣಿನ ಮಹತ್ವ ಗೊತ್ತಿತ್ತು. ಕೃಷಿಗೆ ಹಾಗೂ ಕೃಷಿಕರಿಗೆ ಗೌರವ ಕೊಡಬೇಕು ಎಂಬುದನ್ನು ಅವರು ಸ್ಪಷ್ಟವಾಗಿ ಅರಿತಿದ್ದರು. ಒಬ್ಬ ವ್ಯಕ್ತಿಗೆ ತಂದೆ ಎಷ್ಟು ಮುಖ್ಯಾನೋ ಹೆಣ್ಣು ಕೊಟ್ಟ ಮಾವನೂ ಅಷ್ಟೇ ಮುಖ್ಯ. ಮಾವ ನನ್ನನ್ನು ಅಳಿಯನಂತೆ ಕಾಣದೆ ಒಬ್ಬ ಗೆಳೆಯನಂತೆ ಕಾಣುತ್ತಿದ್ದರು ಎಂದು ಶಿವಣ್ಣ ಹೇಳಿದರು.

ಬಿ ಸಿಂಪಲ್ ಅಂಡ್ ಲುಕ್ ಸಿಂಪಲ್

ಸರಳವಾಗಿರಿ ಮತ್ತು ಸರಳವಾಗಿ ಕಾಣಿರಿ (ಬಿ ಸಿಂಪಲ್ ಅಂಡ್ ಲುಕ್ ಸಿಂಪಲ್) ಎಂಬ ಅಪ್ಪಾಜಿ ಅವರ ಆದರ್ಶಗಳೇ ನನ್ನ ಜೀವನ ಮೌಲ್ಯಗಳು. ಅನಾರೋಗ್ಯದ ನಂತರ ಮತ್ತಷ್ಟು ಶಕ್ತಿಯುತವಾಗಿದ್ದೇನೆ. ಪ್ರೇಕ್ಷಕ ಪ್ರಭು ಸಾಕೆನ್ನುವರೆಗೂ ನಾನು ಅಭಿನಯಿಸುತ್ತೇನೆ ಎಂದು ಶಿವಣ್ಣ ಅವರು ಭರವಸೆಯ ಮಾತುಗಳನ್ನು ಆಡಿದರು.

ನಟ ಮತ್ತು ನಿರ್ಮಾಪಕನ ಸಂಬಂಧ ಹೇಗಿರಬೇಕು ?

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಶ್ರೀ ಎಸ್.ವಿ ರಾಜೇಂದ್ರಸಿಂಗ್ ಬಾಬು ಅವರು ಮಾತನಾಡಿ ನಟ ಮತ್ತು ನಿರ್ಮಾಪಕನ ಸಂಬಂಧ ಹೇಗಿರಬೇಕು ? ಎಂಬುದಕ್ಕೆ ಡಾ ಶಿವರಾಜ್ ಕುಮಾರ್ ಅವರು ಅತ್ಯುತ್ತಮ ಉದಾಹರಣೆ ಎಂದು ಬಣ್ಣಿಸಿದರು. ಕ್ಯಾಮರಾ ಹಿಂದಿನ ಹಾಗೂ ಕ್ಯಾಮರಾ ಮುಂದಿನ ಸಮಸ್ಯೆಗಳಿಗೆ ನಿರಾತಂಕವಾಗಿ ಸ್ಪಂದಿಸುತ್ತಿದ್ದ ಡಾ ಶಿವರಾಜ್ ಕುಮಾರ್ ಅವರಿಗೆ, ಅವರ ತಂದೆ ಡಾ ರಾಜ್ ಅವರ ಗುಣವೇ ಬಳುವಳಿಯಾಗಿ ಬಂದಿದೆ ಎಂದರು.

ಶಿವಣ್ಣ ಕುರಿತಾದ ಸಾಕ್ಷ್ಯ ಚಿತ್ರ

ದೊರೆ-ಭಗವಾನ್ ಜೋಡಿಯ ಹಿರಿಯ ನಿರ್ದೇಶಕ ಎಸ್.ಕೆ ಭಗವಾನ್ ಅವರು ನಿರ್ದೇಶಿಸಿದ 23 ನಿಮಿಷಗಳ ಡಾ ಶಿವರಾಜ್ ಕುಮಾರ್ ಕುರಿತ ಸಾಕ್ಷ್ಯಚಿತ್ರ, 'ಜನುಮದ ಜೋಡಿ' ಹಾಗೂ 'ಓಂ' ಚಿತ್ರದ ಝಲಕ್ ಗಳು, ಶಿವಣ್ಣ ಅವರೇ ಹಾಡಿದ ಹಾಡುಗಳ ತುಣುಕುಗಳು ಈ ಸಂವಾದದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿತ್ತು.

    English summary
    Actor Shivarajkumar who is looking forward for the release of his two films 'Shivalinga' and 'Killing Veerappan' has been roped in to be the guest of the 'Belli Hejje' the most ambitious programme of Karnataka Chalanachitra Academy. Shiva Rajkumar interact with audience in Belli Hejje function

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada