For Quick Alerts
  ALLOW NOTIFICATIONS  
  For Daily Alerts

  ಯುವ ನಿರ್ದೇಶಕರ ಮನಗೆದ್ದ ಹ್ಯಾಟ್ರಿಕ್ ಹೀರೋ ಶಿವಣ್ಣ

  By Suneetha
  |

  ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಈಗಿನ ಕಾಲದ ಯುವ ನಿರ್ದೇಶಕರಿಗೂ ಒಗ್ಗಿಕೊಳ್ಳುವಂತಹ ಸ್ಟಾರ್ ನಟ ಅಂತೆ. ಹೌದು ಹೀಗಂತ ಹೇಳಿರೋದು ಶಿವಣ್ಣ ಅವರ 'ಸನ್ ಆಫ್ ಬಂಗಾರದ ಮನುಷ್ಯ' ಸಿನಿಮಾ ಮಾಡುತ್ತಿರುವ ನಿರ್ದೇಶಕ ಯೋಗಿ ಜಿ ರಾಜ್ ಅವರು.

  ಸೆಂಚುರಿ ಸ್ಟಾರ್ ಶಿವಣ್ಣ ಅವರು ಸದ್ಯಕ್ಕೆ 'ಶ್ರೀಕಂಠ' ಚಿತ್ರದ ಚಿತ್ರೀಕರಣದ ಜೊತೆಗೆ ಟಾಕಿ ಪೋರ್ಷನ್ ಕೂಡ ಮುಗಿಸಿದ್ದು, ನಿರ್ದೇಶಕ ಯೋಗಿ ಜಿ ರಾಜ್ ಅವರ 'ಸನ್ ಆಫ್ ಬಂಗಾರದ ಮನುಷ್ಯ' ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.['ಬಂಗಾರದ ಮನುಷ್ಯ'ನ ಅವತಾರದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ]

  'ಶಿವಣ್ಣ ಅವರು ಪಾದರಸದಂತೆ ಕೆಲಸ ಮಾಡುತ್ತಾರೆ, ಸ್ಟಾರ್ ನಟ ಎಂಬ ಬಿಗುಮಾನವಿಲ್ಲದೆ ಯುವ ನಿರ್ದೇಶಕರ ಕಲ್ಪನೆಗೆ ತಕ್ಕಂತೆ ಅಭಿನಯಿಸುತ್ತಾರೆ. ಅವರ ಸಮಯ ಪ್ರಜ್ಞೆ ಸ್ವಭಾವ ನಿಜಕ್ಕೂ ಅದ್ಭುತ' ಎನ್ನುತ್ತಾರೆ ನಿರ್ದೇಶಕ ಯೋಗಿ ಜಿ ರಾಜ್ ಅವರು.[ಸಂಕ್ರಾಂತಿಗೆ ಭರ್ಜರಿಯಾಗಿ ಸೆಟ್ಟೇರಿದ ಜಯಣ್ಣ ನಿರ್ಮಾಣದ 2 ಚಿತ್ರಗಳು]

  ಅಂದಹಾಗೆ ಚಿತ್ರಕ್ಕೆ 'ಸನ್ ಆಫ್ ಬಂಗಾರದ ಮನುಷ್ಯ' ಎಂದು ಶೀರ್ಷಿಕೆಗೂ, ಡಾ.ರಾಜ್ ಕುಮಾರ್ ಅವರ ಹಿಂದಿನ ಬಂಗಾರದ ಮನುಷ್ಯ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಬದಲಾಗಿ ಈ ಚಿತ್ರದಲ್ಲಿ ತಂದೆ-ಮಗನ ನಡುವಿನ ಬಾಂಧವ್ಯವನ್ನು ವಿವರಿಸಲಾಗಿದೆಯಂತೆ.

  ಈಗಾಗಲೇ ಚಿತ್ರದ ಮೊದಲ ಶೆಡ್ಯೂಲ್ ಮುಗಿದಿದ್ದು, ಎರಡನೇ ಶೆಡ್ಯೂಲ್ ಚಿತ್ರೀಕರಣ ಆರಂಭವಾಗಿದ್ದು, ಶಿವಣ್ಣ ಅವರ ಜೊತೆ ನಾಯಕಿ ನಟಿಯಾಗಿ ಕಾಣಿಸಿಕೊಳ್ಳಲಿರುವ ದಕ್ಷಿಣ ಭಾರತದ ನಟಿ ವಿದ್ಯಾ ಪ್ರದೀಪ್ ಅವರು ಸೆಟ್ ಗೆ ಹಾಜರಾಗಿದ್ದಾರೆ.['ಬಂಗಾರದ ಮನುಷ್ಯ'ನ ಜೋಡಿಯಾಗೋ ಚೆಂದುಳ್ಳಿ ಚೆಲುವೆ ಈಕೆ]

  ಇನ್ನು ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಅವರು ನಟಿಸುತ್ತಿರೋ 'ರಾಯಿಸ್' ಚಿತ್ರದ ಆಕ್ಷನ್ ಸೀನ್ ಗಳನ್ನು ಮುಗಿಸಿರುವ ಸ್ಟಂಟ್ ಮಾಸ್ಟರ್ ರವಿವರ್ಮಾ ಅವರು ಶಿವಣ್ಣ ಅವರಿಗೆ ಸ್ಟಂಟ್ ಕೊರಿಯೋಗ್ರಫಿ ಮಾಡಲಿದ್ದಾರೆ.[ಶಿವಣ್ಣ30 ವಿಶೇಷ: ಶಿವಣ್ಣ ಅವರ 20 ಉತ್ತಮ ಚಿತ್ರಗಳ List]

  ಜಯಣ್ಣ ಕಂಬೈನ್ಸ್ ನಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮೂರನೇ ಶೆಡ್ಯೂಲ್ ನ ಶೂಟಿಂಗ್ ಗಾಗಿ ಮೇ 23 ರಂದು ಚಿತ್ರತಂಡ ವಿದೇಶಕ್ಕೆ ಹಾರಲಿದೆ. ಮಿಲನ್ ಮತ್ತು ಸ್ವಿಜರ್ಲ್ಯಾಂಡ್ ನಲ್ಲಿ ಚಿತ್ರದ ಹಾಡುಗಳ ಚಿತ್ರೀಕರಣ ನಡೆಯಲಿದೆ.

  English summary
  Kannada Actor Shiva Rajkumar is quite the unstoppable force. He is taking up project after project, setting an example to the younger generation. After completing talkie portions for Kannada Movie 'Srikanta' Shiva Rajkumar is now on the sets of Director Yogi G Raj’s 'Bangara Son of Bangarada Manushya'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X