For Quick Alerts
  ALLOW NOTIFICATIONS  
  For Daily Alerts

  ಹರಕೆ ತೀರಿಸಲು ದರ್ಗಾಕ್ಕೆ ಭೇಟಿ ನೀಡಿದ ಹ್ಯಾಟ್ರಿಕ್ ಹೀರೋ ಶಿವಣ್ಣ

  By Suneetha
  |

  ಎಲ್ಲರ ಪ್ರೀತಿಯ ಶಿವಣ್ಣ, ಸ್ಯಾಂಡಲ್ ವುಡ್ ನ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು 'ಶಿವಲಿಂಗ' ಚಿತ್ರದ ಭರ್ಜರಿ ಯಶಸ್ಸಿನಲ್ಲಿದ್ದಾರೆ. ಇದರ ಬೆನ್ನಲ್ಲೇ ಶಿವಣ್ಣ ಅವರು ಪವಿತ್ರ ಸ್ಥಳ ದರ್ಗಾ ಒಂದಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

  ಹೌದು ಮಾರ್ಚ್ 11 ಶುಕ್ರವಾರದಂದು ಸಂಜೆ ಸುಮಾರು 6.30ರ ಸಮಯಕ್ಕೆ ಹಜರತ್ ತವಾಕಲ್ ಮಸ್ತಾನ್ ದರ್ಗಾಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.[ರೈತರನ್ನು ಮನಬಂದಂತೆ ನಡೆಸಿಕೊಂಡ ಪೊಲೀಸರ ವರಸೆ ಸರಿ ಇಲ್ಲ: ಶಿವಣ್ಣ]

  ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಮಯದಲ್ಲಿ ಶೀಘ್ರರಾಗಿ ಗುಣಮುಖರಾದರೆ, ದರ್ಗಾಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸುವುದಾಗಿ ಬೇಡಿಕೊಂಡಿದ್ದರಂತೆ. ಅದರಂತೆ ಶುಕ್ರವಾರದಂದು ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

  ಜೊತೆಗೆ 'ಶಿವಲಿಂಗ' ಚಿತ್ರದ ಯಶಸ್ಸಿನ ಹಿನ್ನಲೆಯಲ್ಲಿ ಕೂಡ ಶಿವಣ್ಣ ಅವರು ಬೆಂಗಳೂರಿನ ಚಿಕ್ಕಪೇಟ್-ಅಕ್ಕಿಪೇಟ್ ಮುಖ್ಯ ರಸ್ತೆಯಲ್ಲಿರುವ ದರ್ಗಾಕ್ಕೆ ಭೇಟಿ ಕೊಟ್ಟಿದ್ದರು. ಇವರ ಜೊತೆ 'ಶಿವಲಿಂಗ' ಚಿತ್ರದ ನಿರ್ಮಾಪಕರಾದ ಸುರೇಶ್ ಮತ್ತು ಶ್ರೀಕಾಂತ್ ಅವರು ಸಾಥ್ ಕೊಟ್ಟಿದ್ದರು.[ಹ್ಯಾಟ್ರಿಕ್ ಹೀರೋ ಶಿವಣ್ಣಗೆ ಲಂಡನ್ ನಲ್ಲಿ ಭರ್ಜರಿ ಸನ್ಮಾನ]

  ದರ್ಗಾಕ್ಕೆ ಭೇಟಿ ನೀಡಿದ ಹ್ಯಾಟ್ರಿಕ್ ಹೀರೋ ಶಿವಣ್ಣನಿಗೆ ಸಂಪ್ರದಾಯದಂತೆ ಶಾಲು ಹೊದೆಸಲಾಯಿತು. ಪ್ರಾರ್ಥನೆ ಸಲ್ಲಿಸಿದ ನಂತರ ಮಾತನಾಡಿದ ಶಿವರಾಜ್ ಕುಮಾರ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿ ಚೆನ್ನಾಗಿ ಬೆಳೆಯಲಿ ಎಂದು ಬೇಡಿಕೊಂಡಿರುವುದಾಗಿ ಹೇಳಿದರು. ಹಾಗೂ ಅನೇಕ ಬಾರಿ ಶೂಟಿಂಗ್ ಮಾಡುವಾಗ ದರ್ಗಾಕ್ಕೆ ಬಂದ ಸನ್ನಿವೇಶವನ್ನು ನೆನಪು ಮಾಡಿಕೊಂಡರು.[ಅಮೆರಿಕದಲ್ಲೂ 'ಶಿವಲಿಂಗ' ಅಬ್ಬರ ಶುರು ಆಯ್ತು]

  ಇನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಎಲ್ಲಾ ಧರ್ಮದ ಮೇಲೆ ಸಮಾನ ಪ್ರೀತಿ-ಗೌರವ ಇದೆ ಹಾಗೂ ಅವರಿಗೆ ಎಲ್ಲಾ ಧರ್ಮದ ಅಭಿಮಾನಿಗಳು ಇದ್ದಾರೆ ಅನ್ನೋದಕ್ಕೆ ಶಿವಣ್ಣ ಅವರು ದರ್ಗಾಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿರೋದೇ ಮುಖ್ಯ ನಿದರ್ಶನ.

  English summary
  Kannada Actor Shiva Rajkumar Visit 'Dargah' after he recouped from ill health a few years ago and promotional activity of ‘Shivalinga’ too. On Friday (March 11th) evening around 6.30 pm Dr Shivarjakumar visited Hazrath Tawakal Mastan Dargah in Chickpet Akkipete Main Road in Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X