Just In
- 39 min ago
ಕೊರೊನಾ ಸೋಂಕಿನಿಂದ ಬದಲಾಗಿದ್ದ ತಮನ್ನಾ ಈಗ ಮತ್ತೆ ಸಹಜ ಸ್ಥಿತಿಗೆ
- 1 hr ago
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- 2 hrs ago
ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಬಗ್ಗೆ 'ಬಿಗ್ ಬಾಸ್' ಅಕ್ಷತಾ ಪಾಂಡವಪುರ ಹೇಳಿದ್ದೇನು?
- 11 hrs ago
ಶಾರುಖ್ ಖಾನ್ ಬಂಗಲೆಯಲ್ಲಿ ವರುಣ್ ಧವನ್ ಮದುವೆ ಸಂಭ್ರಮ
Don't Miss!
- News
ಖಾತೆ ಹಂಚಿಕೆ ಕುರಿತಂತೆ ಡಾ. ಸುಧಾಕರ್ ವಿಚಾರದಲ್ಲಿ ಎಲ್ಲರೂ ತಟಸ್ಥ ನಿಲುವು ತಾಳಿದ್ಯಾಕೆ?
- Automobiles
ವಿಭಿನ್ನ ಅನುಭವ ನೀಡುವ ಪೈಲಟ್ ಉದ್ಯೋಗದ ಬಗೆಗಿನ ರೋಚಕ ಸಂಗತಿಗಳಿವು
- Sports
'ಭಾರತೀಯರಿಗೆ ಹೋಲಿಸಿದರೆ ಯುವ ಆಸೀಸ್ ಇನ್ನೂ ಪ್ರೈಮರಿ ಶಾಲೆಯಲ್ಲಿದೆ'
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶಿವರಾಜ್ ಕುಮಾರ್ ಗೆ ಇಂದು ಸರ್ಜರಿ : ಅಣ್ಣನ ನೋಡಲು ಲಂಡನ್ ಗೆ ತೆರಳಿದ ಅಪ್ಪು
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್ ಗೆ ತೆರಳಿದ್ದಾರೆ. ಈಗಾಗಲೆ ಲಂಡನ್ ಗೆ ಹೋಗಿ ನಾಲ್ಕೈದು ದಿನಗಳಾಗಿವೆ. ಬಲಭುಜದ ನೋವಿನಿಂದ ಬಳಲುತ್ತಿದ್ದ ಕರುನಾಡ ಚಕ್ರವರ್ತಿ ಬಲ ಭುಜದ ಸರ್ಜರಿಗಾಗಿ ಲಂಡನ್ ಗೆ ಭೇಟಿ ನೀಡಿದ್ದಾರೆ.
ಸುಮಾರು ಆರೇಳು ತಿಂಗಳುಗಳಿಂದ ನೋವಿನಿಂದ ಬಳಲುತ್ತಿದ್ದ ಶಿವಣ್ಣ ಸರ್ಜರಿಗೆಂದು ದಿಢೀರನೆ ಲಂಡನ್ ಗೆ ತೆರಳಿರುವುದು ಅಭಿಮಾನಿಗಳಲ್ಲಿ ಆತಂಕ ಮನೆಮಾಡಿತ್ತು. ಶಿವಣ್ಣ ಅವರಿಗೆ ಏನಾಗಿದೆ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿತ್ತು. ಭುಜದ ಸರ್ಜರಿಗಾಗಿ ಲಂಡನ್ ತೆರಳಿದ್ದು, ಆದಷ್ಟು ಬೇಗ ವಾಪಸ್ ಆಗ್ತಾರೆ ಎನ್ನುವ ವಿಚಾರ ಗೊತ್ತಾಗಿ ನಿಟ್ಟುಸಿರುಬಿಟ್ಟಿದ್ದಾರೆ ಅಭಿಮಾನಿಗಳು.
ಸರ್ಜರಿಯ ನಂತರ ಮೂರು ತಿಂಗಳು ರೆಸ್ಟ್ ನಲ್ಲಿ ಶಿವರಾಜ್ ಕುಮಾರ್
ಶಿವಣ್ಣ ಜೊತೆ ಪತ್ನಿ ಗೀತಾ ಮತ್ತು ಮಗಳು ನಿವೇದಿತಾ ಕೂಡ ತೆರಳಿದ್ದಾರೆ. ಆದ್ರಿವತ್ತು ಅಣ್ಣನ ನೋಡಲು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಲಂಡನ್ ಗೆ ಹೋಗಿದ್ದಾರೆ. ಮುಂದೆ ಓದಿ.

ಅಣ್ಣನ ನೋಡಲು ಅಪ್ಪು ಲಂಡನ್ ಗೆ
ಶಿವರಾಜ್ ಕುಮಾರ್ ಬಲ ಭುಜದ ಸರ್ಜರಿಗೆಂದು ಲಂಡನ್ ಗೆ ತೆರಳಿದ್ದಾರೆ. ಅಣ್ಣನ ಸರ್ಜರಿ ಸಮಯದಲ್ಲಿ ಜೊತೆಯಲ್ಲಿ ಇರಲು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಹ ದಿಢೀರ್ ನೆ ಲಂಡನ್ ಹೊರಟಿದ್ದಾರೆ. ಈಗಾಗಲೆ ಪುನೀತ್ ಲಂಡನ್ ತಲುಪಿದ್ದು ಶಿವಣ್ಣನ ಜೊತೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದೆ. ಯುವರತ್ನ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಇರುವ ಪುನೀತ್ ಅಣ್ಣನಿಗಾಗಿ ಲಂಡನ್ ಗೆ ತೆರಳಿದ್ದಾರೆ.

ಶಿವಣ್ಣನಿಗೆ ಇಂದು ಸರ್ಜರಿ
ಇಂದು ಶಿವಣ್ಣನ ಬಲ ಭುಜಕ್ಕೆ ಸರ್ಜರಿ ಮಾಡಲಾಗುತ್ತೆ. ಸುಮಾರು ಆರೇಳು ತಿಂಗಳಿಂದ ಶಿವಣ್ಣ ನೋವಿನಿಂದ ಬಳಲುತ್ತಿದ್ದರು. ಆದ್ರೂ ಸಹ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದರು, ಅಷ್ಟೆಯಲ್ಲ ಹೈ ವೋಲ್ಟೇಜ್ ಆಕ್ಷನ್ ದೃಶ್ಯಗಳನ್ನು ಮಾಡಿದ್ದಾರೆ. ಜೊತೆಗೆ ಭರ್ಜರಿ ಡ್ಯಾನ್ಸ್ ಕೂಡ ಮಾಡಿ ಅಭಿಮಾನಿಗಳನ್ನು ರಂಜಿಸಿದ್ದಾರೆ.
ಲಂಡನ್ ನಲ್ಲಿ ಶಿವಣ್ಣನನ್ನು ಭೇಟಿ ಮಾಡಿದ ಸಲ್ಮಾನ್ ಸಹೋದರ

ಸರ್ಜರಿ ಬಳಿಕ 20 ದಿನ ಲಂಡನ್ ನಲ್ಲಿ
ಇಂದು(ಜುಲೈ 10) ಸರ್ಜರಿಗೆ ಒಳಗಾಗುವ ಶಿವಣ್ಣ ಚಿಕಿತ್ಸೆ ಬಳಿಕ ಕೆಲವು ದಿನಗಳು ಲಂಡನ್ ಅಲ್ಲಿಯೆ ರೆಸ್ಟ್ ಮಾಡಲಿದ್ದಾರೆ. ಸುಮಾರು 20 ದಿನಗಳ ಕಾಲ ಲಂಡನ್ ನಲ್ಲಿಯೆ ಇದ್ದು ಆ ಆನಂತರ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಶಿವಣ್ಣ ಜೊತೆ ಅವರ ಇಡೀ ಕುಟುಂಬ ಜೊತೆಯಲ್ಲಿ ಇದೆ.

ಅಭಿಮಾನಿಗಳ ಪ್ರಾರ್ಥನೆ
ಶಿವಣ್ಣ ಬೇಗ ಗುಣಮುಖರಾಗಿ ವಾಪಸ್ ಬರಲಿ ಎಂದು ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಯಾವುದೆ ಸಮಸ್ಯೆಯಾಗದೆ ಸರ್ಜರಿ ಯಶಸ್ವಿಯಾಗಿ, ಶಿವಣ್ಣ ಆರೋಗ್ಯವಾಗಿ ಬರಲಿ ಎಂದು ಶಿವಣ್ಣನ ಅಭಿಮಾನಿಗಳು ಇಂದು ಗವಿಗಂಗಾಧರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಕೂಡ ಹಮ್ಮಿಕೊಂಡಿದ್ದಾರೆ.

ಮೂರು ತಿಂಗಳು ಚಿತ್ರೀಕರಣದಿಂದ ದೂರ
ಸರ್ಜರಿ ಬಳಿಕ ಶಿವಣ್ಣ ಮೂರು ತಿಂಗಳು ರೆಸ್ಟ್ ನಲ್ಲಿ ಇರಬೇಕಂತೆ. ಮೂರು ತಿಂಗಳು ಯಾವುದೆ ಚಿತ್ರೀಕರಣದಲ್ಲಿ ಭಾಗಿಯಾಗುವ ಹಾಗಿಲ್ಲವಂತೆ. ಸೆಪ್ಟಂಬರ್ ವರೆಗು ಶಿವಣ್ಣ ಚಿತ್ರೀಕರಣದದಿಂದ ದೂರ ಇರಲಿದ್ದಾರೆ. ಅದರಲ್ಲು ಆಕ್ಷನ್ ದೃಶ್ಯಗಳನ್ನು ಸಧ್ಯಕ್ಕೆ ಮಾಡಲು ಸಾಧ್ಯವಾಗುವುದಿಲ್ಲ. ಮೂರು ತಿಂಗಳುಗಳ ಬಳಿಕ ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಹ್ಯಾಟ್ರಿಕ್ ಹೀರೋ.

ಜನವರಿಯಲ್ಲಿ ಭುಜಕ್ಕೆ ಏಟು ಮಾಡಿಕೊಂಡಿದ್ದ ಶಿವಣ್ಣ
ಶಿವಣ್ಣ ದಿಢೀರನೆ ಸರ್ಜರಿ ಅಂತ ಲಂಡನ್ ಆಸ್ಪತ್ರೆಗೆ ತೆರಳಿರುವುದು ಅಭಿಮಾನಿಗಳಲ್ಲಿ ಆತಂಕ ಎದುರಾಗಿತ್ತು. ಯಾಕೆ ಏನಾಗಿದೆ ಎನ್ನುವ ಗೊಂದಲ ಅಭಿಮಾನಿಗಳಲಿತ್ತು. ಜನವರಿಯಲ್ಲಿ ಶಿವಣ್ಣ ಅವರ ಬಲ ಭುಜಕ್ಕೆ ಏಟಾಗಿತ್ತು. ಯು ಎಸ್ ಎ ಪ್ರವಾಸ ತೆರಳಿದ್ದ ಸಂದರ್ಭದಲ್ಲಿ ಶಿವಣ್ಣ ಅವರ ಬಲ ಭುಜಕ್ಕೆ ಪೆಟ್ಟಾಗಿತ್ತು. ಅವತ್ತಿನಿಂದ ಸುಮಾರು ಆರೇಳು ತಿಂಗಳುಗಳ ಕಾಲ ಶಿವಣ್ಣ ನೋವಿನಿಂದ ಬಳಲುತ್ತಿದ್ದರು. ಅದೆ ನೋವಿನಲ್ಲಿ ಚಿತ್ರೀಕರಣದಲ್ಲು ಭಾಗಿಯಾಗಿದ್ದರು.