For Quick Alerts
  ALLOW NOTIFICATIONS  
  For Daily Alerts

  ಪಂಜಾಬ್ vs ಡೆಲ್ಲಿ ಪಂದ್ಯ: ಕಿಚ್ಚ ಸುದೀಪ್‌ಗೆ ಕಾಡಿತು ಆ ಪ್ರಶ್ನೆ?

  |

  ಕಳೆದ ರಾತ್ರಿ ಐಪಿಎಲ್‌ನ ಎರಡನೇ ಪಂದ್ಯ ನಡೆಯಿತು. ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಡೆಲ್ಲಿ ಕ್ಯಾಪಿಟೆಲ್ಸ್ ನಡುವಿನ ರೋಚಕ ಪಂದ್ಯದಲ್ಲಿ ಸೂಪರ್‌ ಓವರ್‌ನಲ್ಲಿ ಡೆಲ್ಲಿ ಗೆದ್ದುಕೊಂಡಿತು. ಪಂಜಾಬ್ ಸುಲಭವಾಗಿ ಈ ಪಂದ್ಯ ಗೆಲ್ಲಬಹುದಿತ್ತು. ಆದ್ರೆ, ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎನ್ನುವಂತೆ ಕೊನೆಯ ಮೂರು ಎಸೆತಕ್ಕೆ ಒಂದು ರನ್ ಬೇಕಾಗಿದ್ದರೂ ಪಂದ್ಯ ಗೆಲ್ಲಲ್ಲು ಸಾಧ್ಯವಾಗಿಲ್ಲ.

  ಗೆಲ್ಲುವ ಅವಕಾಶ ಇದ್ದರೂ ಪಂದ್ಯ ಕೈಚೆಲ್ಲಿದ ಪಂಜಾಬ್‌ ತಂಡದಲ್ಲಿ ಕನ್ನಡಿಗ ಮಾಯಂಕ್ ಅಗರ್ವಾಲ್ ಎಲ್ಲರ ಗಮನ ಸೆಳೆದರು. ಏಕಾಂಗಿಯಾಗಿ ಅದ್ಭುತ ಆಟ ಪ್ರದರ್ಶಿಸಿದ ಮಾಯಾಂಕ್ ಆಟಕ್ಕೆ ಕನ್ನಡ ಕಿಚ್ಚ ಸುದೀಪ್ ಮನಸೋತಿದ್ದಾರೆ. ಮಾಯಾಂಕ್ ಆಟಕ್ಕೆ ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದಾರೆ. ಆದರೂ, ಒಂದು ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಏನದು? ಮುಂದೆ ಓದಿ...

  ಮಾಯಾಂಕ್ ಆಟ ಮೆಚ್ಚಿದ ಸುದೀಪ್

  ಮಾಯಾಂಕ್ ಆಟ ಮೆಚ್ಚಿದ ಸುದೀಪ್

  ''ನಿಜಕ್ಕೂ ಅದ್ಭುತವಾಗಿ ಆಡಿದ್ರಿ ಮಾಯಾಂಕ್. ನಿಮ್ಮ ಬಗ್ಗೆ ಹೆಮ್ಮೆ ಇದೆ'' ಎಂದು ಕಿಚ್ಚ ಸುದೀಪ್ ಪಂಜಾಬ್ ತಂಡದ ಆಟಗಾರನನ್ನು ಹೊಗಳಿದ್ದಾರೆ. ಮಾಯಾಂಕ್ ಈ ಪಂದ್ಯದಲ್ಲಿ 60 ಎಸೆತದಲ್ಲಿ 89 ರನ್ ಬಾರಿಸಿದ್ದರು. ಪಂಜಾಬ್ ತಂಡವನ್ನು ಗೆಲುವಿನ ದಡಕ್ಕೆ ತಂದ ಮಾಯಾಂಕ್ ಕೊನೆಯಲ್ಲಿ ಎಡವಿದರು.

  ಮತ್ತೆ ಐಪಿಎಲ್ ಶುರುವಾಗಿದ್ದಕ್ಕೆ ಪಾರೂಲ್ ಯಾದವ್ ಫುಲ್ ಖುಷ್

  ಸೂಪರ್ ಓವರ್‌ನಲ್ಲಿ ಏಕೆ ಮಾಯಾಂಕ್ ಇರಲಿಲ್ಲ?

  ಸೂಪರ್ ಓವರ್‌ನಲ್ಲಿ ಏಕೆ ಮಾಯಾಂಕ್ ಇರಲಿಲ್ಲ?

  ಇಡೀ ಪಂದ್ಯದಲ್ಲಿ ಅದ್ಭುತ ಆಟ ಪ್ರದರ್ಶಿಸಿದ ಮಾಯಾಂಕ್ ಅಗರ್ವಾಲ್ ಸೂಪರ್ ಓವರ್‌ನಲ್ಲಿ ಬ್ಯಾಟಿಂಗ್ ಬರಲಿಲ್ಲ. ಇದು ಸಹಜವಾಗಿ ಅನುಮಾನ ಮೂಡಿಸಿತು. ಇದೇ ಪ್ರಶ್ನೆಯನ್ನು ಕಿಚ್ಚ ಸುದೀಪ್ ಸಹ ಮುಂದಿಟ್ಟಿದ್ದಾರೆ. ಕೆಎಲ್ ರಾಹುಲ್, ಪೂರಾನ್, ಹಾಗೂ ಮೆಕ್ಸ್‌ವೆಲ್ ಸೂಪರ್ ಓವರ್‌ ಆಡಿದರು. ಕೇವಲ 2 ರನ್ ಮಾತ್ರ ಬಾರಿಸಿದರು. ಆದ್ರೆ, ಈ ಮೂವರು ಪಂದ್ಯದಲ್ಲಿ ಅಷ್ಟು ಪರಿಣಾಮಕಾರಿಯಾಗಿರಲಿಲ್ಲ. ಮಾಯಾಂಕ್ ಅದ್ಭುತ ಆಟ ಆಡಿದ್ದರು. ಆದ್ರೆ, ಅವರನ್ನು ಸೂಪರ್‌ ಓವರ್‌ಗೆ ಪರಿಗಣಿಸಿಲ್ಲ ಏಕೆ ಎಂಬುದು ಪ್ರಶ್ನೆಯಾಗಿದೆ.

  ಸುನಿ ಸಹ ಸಪೋರ್ಟ್

  ಸುನಿ ಸಹ ಸಪೋರ್ಟ್

  ಸುದೀಪ್ ಅವರ ಟ್ವೀಟ್‌ಗೆ ನಿರ್ದೇಶಕ ಸಿಂಪಲ್ ಸುನಿ ಪ್ರತಿಕ್ರಿಯಿಸಿದ್ದು ''ಮೊದಲೇ ಹೇಳಿದ್ದಿರಿ ಸಾರ್ ನೀವು...ಮಾಯಾಂಕ್ ವಿಲ್ ಬಿ ಕೀ ಪ್ಲೇಯರ್ ಅಂತ..'' ಎಂದು ಬೆಂಬಲ ಸೂಚಿಸಿದ್ದಾರೆ.

  ಫಸ್ಟ್ ಯಾವನ್ ಹೊಡಿತಾನೋ ಅವನೇ ಹೀರೊ | Filmibeat Kannada
  ಚಿಯರ್ಸ್ ಮೈ ಫ್ರೆಂಡ್

  ಚಿಯರ್ಸ್ ಮೈ ಫ್ರೆಂಡ್

  ಕೊರೊನಾ ವೈರಸ್ ನಡುವೆಯೂ ಒಳ್ಳೆಯ ಮನರಂಜನೆ ನೀಡಿದೆ. ಶುಭವಾಗಲಿ, ಚಿಯರ್ಸ್ ಮೈ ಫ್ರೆಂಡ್ ಎಂದು ನಟ-ಸುದೀಪ್ ಮಾಯಾಂಕ್ ಅಗರ್ವಾಲ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುದೀಪ್ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಮುನ್ನಡೆಸಿದ್ದರು. ಹಾಗೂ ಕೆಪಿಎಲ್ ಟೂರ್ನಿಯಲ್ಲೂ ತಂಡವನ್ನು ಮುನ್ನಡೆಸಿದ್ದರು.

  English summary
  Kannada actor-director kiccha sudeep praised kings xi punjab player Mayank Agarwal for outstanding batting in against Delhi capitals at last night.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X