For Quick Alerts
  ALLOW NOTIFICATIONS  
  For Daily Alerts

  ಈ 'ಸಿಕ್ಸ್ ಪ್ಯಾಕ್' ಹುಡುಗ ಯಾವ ಕನ್ನಡ ನಟಿಯ ಸಹೋದರ.?

  By Bharath Kumar
  |

  ನೋಡೋದಕ್ಕೆ ಹ್ಯಾಂಡ್ ಸಮ್, ಸಿಕ್ಸ್ ಪ್ಯಾಕ್ ಬಾಡಿ, ಒಳ್ಳೆ ಹೈಟು....ಬಹುಶಃ ಇಷ್ಟಿದ್ರೆ ಸಾಕು ಅಲ್ವಾ ಒಬ್ಬ ಹೀರೋಗೆ. ಹೌದು, ಈ ಸಿಕ್ಸ್ ಪ್ಯಾಕ್ ಹುಡುಗ ಸದ್ಯದಲ್ಲೇ ಸ್ಯಾಂಡಲ್ ವುಡ್ ನಲ್ಲಿ ಹೀರೋ ಆಗಿ ಎಂಟ್ರಿ ಕೊಡ್ತಿದ್ದಾರೆ.

  ಅಷ್ಟಕ್ಕೂ, ಯಾರೂ ಈ ಯುವಕ ಅಂತಾ ಯೋಚನೆ ಮಾಡ್ತಿದ್ದೀರಾ. ಇವರ ಹೆಸರು ಅಭಿಷೇಕ್. ಕನ್ನಡ ಚಿತ್ರರಂಗದ ಕ್ರೇಜಿಕ್ವೀನ್, ಸುಂಟರಗಾಳಿ ರಕ್ಷಿತಾ ಅವರ ಪ್ರೀತಿಯ ಸಹೋದರ.

  ರಕ್ಷಿತಾ ಪ್ರೇಮ್ ಸಹೋದರ ಚಿತ್ರರಂಗಕ್ಕೆ ಎಂಟ್ರಿ! ರಕ್ಷಿತಾ ಪ್ರೇಮ್ ಸಹೋದರ ಚಿತ್ರರಂಗಕ್ಕೆ ಎಂಟ್ರಿ!

  ಚಂದನವನಕ್ಕೆ ಬರುವ ತಯಾರಿಯಲ್ಲಿರುವ ಅಭಿಷೇಕ್ ಸಕಲ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಅಂದ್ಹಾಗೆ, ರಕ್ಷಿತಾ ಪ್ರೇಮ್ ಸಹೋದರ ಅಭಿಶೇಕ್ ಈಗಾಗಲೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟಾಗಿದೆ. ಪ್ರೇಮ್ ನಿರ್ದೇಶನ ಮಾಡುತ್ತಿರುವ 'ದಿ ವಿಲನ್' ಚಿತ್ರದಲ್ಲಿ ಅಭಿಶೇಕ್ ಕೆಲಸ ಮಾಡುತ್ತಿದ್ದಾರೆ. ಡೈರೆಕ್ಟರ್ ಪ್ರೇಮ್ ಬಳಿ ಸಹಾಯಕ ನಿರ್ದೇಶಕನಾಗಿ ಅಭಿಶೇಕ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದ್ರೆ, ಹೀರೋ ಆಗಿ ಬೆಳ್ಳಿತೆರೆ ಪ್ರವೇಶ ಮಾಡುವುದಷ್ಟೇ ಬಾಕಿ.

  ರಕ್ಷಿತಾ ಪ್ರೇಮ್ ಕಾತರದಿಂದ ಕಾಯುತ್ತಿರುವುದು 'ಈ' ಕ್ಷಣಕ್ಕೋಸ್ಕರ.! ರಕ್ಷಿತಾ ಪ್ರೇಮ್ ಕಾತರದಿಂದ ಕಾಯುತ್ತಿರುವುದು 'ಈ' ಕ್ಷಣಕ್ಕೋಸ್ಕರ.!

  ನ್ಯೂಯಾರ್ಕ್ ನ 'ಲೀ ಸ್ಟ್ರಾಸ್ಬರ್ಗ್ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ತರಬೇತಿ ಪಡೆದಿರುವ ಅಭಿಶೇಕ್, ಸಿನಿಮಾ ಮೇಕಿಂಗ್ ಕುರಿತ ಎಲ್ಲ ವಿಚಾರಗಳನ್ನು ಪ್ರೇಮ್ ಬಳಿ 'ದಿ ವಿಲನ್' ಸೆಟ್ ನಲ್ಲಿ ಕಲಿತಿದ್ದಾರೆ.

  ನಟನೆಗೆ ಸಂಬಂಧ ಪಟ್ಟಂತೆ ಸುದೀಪ್ ಹಾಗೂ ಶಿವಣ್ಣ ರವರಿಂದ ಸಲಹೆಗಳನ್ನೂ ಪಡೆದುಕೊಂಡಿದ್ದಾರಂತೆ ಅಭಿಶೇಕ್. 'ದಿ ವಿಲನ್' ಶೂಟಿಂಗ್ ಮುಗಿದ ಬಳಿಕ ರಕ್ಷಿತಾ ಪ್ರೇಮ್ ಬ್ಯಾನರ್ ಅಡಿಯಲ್ಲೇ ಅಭಿಶೇಕ್ ಹೀರೋ ಆಗಿ ಲಾಂಚ್ ಆಗಲಿದ್ದಾರೆ. ಈ ಕ್ಷಣಕ್ಕಾಗಿ ಸ್ವತಃ ರಕ್ಷಿತಾ ಅವರು ಕಾಯುತ್ತಿದ್ದಾರೆ ಎಂಬುದನ್ನ ಇತ್ತೀಚಿಗಷ್ಟೆ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು.

  English summary
  Abhishek Rao Comes from a filmy family - with Mother/Actress Mamatha Rao, Followed by his sister Rakshita and brother-in-law, Prem. Now He has getting ready to enter sandalwood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X