For Quick Alerts
    ALLOW NOTIFICATIONS  
    For Daily Alerts

    ಹೊಸ ಹೊಸ ರೀತಿಯ ಪಾತ್ರಗಳತ್ತ ಕನ್ನಡ ನಟಿಯರ ಪ್ರಯಾಣ

    By Naveen
    |

    ಕನ್ನಡವೂ ಸೇರಿದಂತೆ ಬಹುತೇಕ ಚಿತ್ರರಂಗದಲ್ಲಿ ನಟಿಯರಿಗಾಗಿ ಕಥೆ ಬರೆಯುವುದು ಕಡಿಮೆ. ನಟಿಯರಿನ್ನು ನಂಬಿ ದುಡ್ಡು ಹಾಕುವವರು ತೀರ ಕಡಿಮೆ. ಇನ್ನು ಅದೇ ಕಾರಣಕ್ಕೊ ಏನೋ ಅನೇಕ ನಟಿಯರು ಹೀರೋ ಗಳ ಜೊತೆಗೆ ಕಾಣಿಸಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿ ಬಿಡುತ್ತಾರೆ.

    ಆದರೆ, ಇದೀಗ ಕನ್ನಡ ನಟಿಯರ ಪಾತ್ರಗಳ ಆಯ್ಕೆ ತುಂಬ ಚೆನ್ನಾಗಿ ಆಗುತ್ತಿದೆ. ಒಳ್ಳೆ ಒಳ್ಳೆಯ ಯುವ ನಿರ್ದೇಶಕರುಗಳು ಹೊಸ ರೀತಿ ಸಿನಿಮಾ ಮಾಡಲು ಮುಂದೆ ಬರುತ್ತಿದ್ದಾರೆ. ಸ್ಯಾಂಡಲ್ ವುಡ್ ನಟಿಯರಾದ ರಚಿತಾ ರಾಮ್, ರಾಗಿಣಿ ದ್ವಿವೇದಿ, ಶೃತಿ ಹರಿಹರನ್, ಮೇಘನಾ ರಾಮ್, ಹರಿಪ್ರಿಯಾ ಹೀಗೆ ಕೆಲ ನಟಿಯರು ವಿಭಿನ್ನ ಪಾತ್ರಗಳನ್ನು ಹುಡುಕುತ್ತ ಹೊರಟಿದ್ದಾರೆ.

    ಬುರ್ಕಾ ಧರಿಸಿ ಬಂದ ರಾಗಿಣಿಯ ಹಿಂದಿನ ರಹಸ್ಯವೇನು? ಬುರ್ಕಾ ಧರಿಸಿ ಬಂದ ರಾಗಿಣಿಯ ಹಿಂದಿನ ರಹಸ್ಯವೇನು?

    ಗ್ಲಾಮರ್ ಪಾತ್ರಗಳಿಗೆ ಹಾಗೂ ಅದೇ ಹಾಡು, ಅದೇ ಡ್ಯಾನ್ಸ್ ಗಳಿಗೆ ಸಿಮೀತ ಆಗದೆ ಕನ್ನಡದ ಈ ನಟಿಯರು ಹೊಸ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ತಮ್ಮ ಅಭಿಮಾನಿಗಳಿಗೆ ಬೇರೆ ರೀತಿಯ ಚಿತ್ರವನ್ನು ನೀಡುವ ಆಲೋಚನೆ ಮಾಡಿದ್ದಾರೆ. ಮುಂದೆ ಓದಿ...

    ರಚಿತಾ ರಾಮ್ - 'ಏಪ್ರಿಲ್'

    ರಚಿತಾ ರಾಮ್ - 'ಏಪ್ರಿಲ್'

    ಸಾಕಷ್ಟು ಸ್ಟಾರ್ ನಟರ ಜೊತೆಗೆ ಕಾಣಿಸಿಕೊಂಡಿರುವ ರಚಿತಾ ರಾಮ್ ಈಗ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಮೊದಲ ಬಾರಿಗೆ ರಚಿತಾ ಮಹಿಳಾ ಪ್ರಧಾನ ಸಿನಿಮಾ ಮಾಡುತ್ತಿದ್ದಾರೆ. 'ಏಪ್ರಿಲ್' ಎಂಬ ವಿಭಿನ್ನ ಚಿತ್ರವನ್ನು ರಚಿತಾ ಓಕೆ ಮಾಡಿದ್ದು, ಇಂದು ಆ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ಸತ್ಯ ರಾಯಲ ಎಂಬುವವರು ಈ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಡಿಸೋಜಾ ಎಂಬ ಪಾತ್ರದಲ್ಲಿ ರಚಿತಾ ಕಾಣಿಸಿಕೊಳ್ಳುತ್ತಿದ್ದಾರೆ.

    ರಾಗಿಣಿ - 'ದಿ ಟೆರೆರಿಸ್ಟ್'

    ರಾಗಿಣಿ - 'ದಿ ಟೆರೆರಿಸ್ಟ್'

    ರಾಗಿಣಿ ದ್ವಿವೇದಿ ಎಂದ ತಕ್ಷಣ ಅವರ ಗ್ಲಾಮರ್ ಚಿತ್ರಗಳು ನೆನಪಾಗುತ್ತದೆ. ಗ್ಲಾಮರ್ ಮತ್ತು ಆಕ್ಷನ್ ಪಾತ್ರಗಳಿಗೆ ಅಂಟಿಕೊಂಡಿದ್ದ ರಾಗಿಣಿ ಈಗ ಬೇರೆ ಪಾತ್ರವನ್ನು ಟ್ರೈ ಮಾಡಿದ್ದಾರೆ. ಪಿ.ಸಿ.ಶೇಖರ್ ನಿರ್ದೇಶನದಲ್ಲಿ ಬರುತ್ತಿರುವ 'ದಿ ಟೆರೆರಿಸ್ಟ್' ಚಿತ್ರದಲ್ಲಿ ರಾಗಿಣಿ ಕಾಣಿಸಿಕೊಳ್ಳುತ್ತಿದ್ದಾರೆ. ನಿನ್ನೆ ಚಿತ್ರದ ಕೆಲ ಪೋಸ್ಟರ್ ಗಳು ಹೊರ ಬಂದಿದ್ದು, ಮೊದಲ ನೋಟಕ್ಕೆ ಎಲ್ಲರ ಗಮನ ಸೆಳೆದಿದೆ.

    'ಏಪ್ರಿಲ್' ನ ರಹಸ್ಯ ಭೇದಿಸಲಿರುವ ಡಿಂಪಲ್ ಕ್ವೀನ್ 'ಏಪ್ರಿಲ್' ನ ರಹಸ್ಯ ಭೇದಿಸಲಿರುವ ಡಿಂಪಲ್ ಕ್ವೀನ್

    ಶೃತಿ ಹರಿಹರನ್ - 'ಟೆಸ್ಲಾ'

    ಶೃತಿ ಹರಿಹರನ್ - 'ಟೆಸ್ಲಾ'

    ಶೃತಿ ಹರಿಹರನ್ ಕಮರ್ಷಿಯಲ್ ಹಾಗೂ ಕಲಾತ್ಮಕ ಎರಡು ರೀತಿಯ ಸಿನಿಮಾಗಳನ್ನು ಬ್ಯಾಲೆನ್ಸ್ ಮಾಡುತ್ತಿದ್ದಾರೆ. 'ಟೆಸ್ಲಾ' ಎಂಬ ಹೊಸ ಚಿತ್ರದಲ್ಲಿ ಶೃತಿ ನಟಿಸುತ್ತಿದ್ದು, ಹೊಸ ರೀತಿಯ ಕಥೆಯನ್ನು ಚಿತ್ರ ಹೊಂದಿದೆಯಂತೆ. ಈ ಚಿತ್ರದಲ್ಲಿ ಏಳು ವಿಭಿನ್ನ ಲುಕ್ ಗಳಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ವಿನೋದ್ ಜೆ ರಾಜ್ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷ ಅಂದರೆ, ಶೃತಿ ಹರಿಹರನ್ ಅವರೇ 'ಟೆಸ್ಲಾ' ಸಿನಿಮಾಗೆ ಬಂಡವಾಳ ಹಾಕಿದ್ದಾರೆ.

    ಹರಿಪ್ರಿಯಾ - 'ಡಾಟರ್ ಆಫ್ ಪಾರ್ವತಮ್ಮ'

    ಹರಿಪ್ರಿಯಾ - 'ಡಾಟರ್ ಆಫ್ ಪಾರ್ವತಮ್ಮ'

    ನಟಿ ಹರಿಪ್ರಿಯಾ ಈಗಾಗಲೇ ತಮ್ಮ ಕೆರಿಯರ್ ನಲ್ಲಿ ಅನೇಕ ವಿಶೇಷ ಪಾತ್ರಗಳನ್ನು ಮಾಡಿದ್ದಾರೆ. ಈಗ ಅದನ್ನೇ ಮುಂದುವರೆಸಿರುವ ಇವರು ಸದ್ಯ ತನಿಖಾಧಿಕಾರಿ ಪಾತ್ರ ಮಾಡುತ್ತಿದ್ದಾರೆ. 'ಡಾಟರ್ ಆಫ್ ಪಾರ್ವತಮ್ಮ' ಹರಿಪ್ರಿಯಾ ಅವರ 25ನೇ ಚಿತ್ರವಾಗಿದ್ದು, ಚಾಲೆಜಿಂಗ್ ರೋಲ್ ಅನ್ನು ಹರಿಪ್ರಿಯಾ ಆರಿಸಿಕೊಂಡಿದ್ದಾರೆ. ಹರಿಪ್ರಿಯಾ ಅವರ ತಾಯಿಯ ಪಾತ್ರವನ್ನು ಸುಮಲತಾ ಅಂಬರೀಶ್ ನಿರ್ವಹಿಸುತ್ತಿದ್ದಾರೆ. ಶಂಕರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

    ಮೇಘನಾ ರಾಜ್ - 'ಕುರುಕ್ಷೇತ್ರ'

    ಮೇಘನಾ ರಾಜ್ - 'ಕುರುಕ್ಷೇತ್ರ'

    ಮೇಘನಾ ರಾಜ್ ಎಲ್ಲ ರೀತಿಯ ಪಾತ್ರಗಳನ್ನು ಮಾಡುವ ಸಾಮರ್ಥ್ಯ ಇರುವ ನಟಿ. ಅದೇ ರೀತಿ ಈಗ ಮೇಘನಾ ಸದ್ಯ ವಿಶೇಷ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. 'ಕುರುಕ್ಷೇತ್ರ' ಸಿನಿಮಾದಲ್ಲಿ ಭಾನುಮತಿ ಪಾತ್ರಕ್ಕೆ ಮೇಘನಾ ರಾಜ್ ಜೀವ ತುಂಬಿದ್ದಾರೆ. ಇನ್ನೊಂದು ಕಡೆ 'ಇರುವುದೆಲ್ಲವ ಬಿಟ್ಟು ಇರುವೆ ಬಿಟ್ಟು ಕೊಳ್ಳುವುದೆ ಜೀವನ' ಚಿತ್ರದಲ್ಲಿಯೂ ಈ ಹಿಂದೆ ಕಾಣಿಸಿಕೊಳ್ಳದೆ ಇರುವಂತೆ ಪಾತ್ರವನ್ನು ಪ್ಲೇ ಮಾಡಿದ್ದಾರೆ.

    English summary
    Kannada actress Rachita Ram, Haripriya, Ragini Dwivedi, Shruthi Hariharan and Meghana Raj doing experimental roles.

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X