»   » ನೀರ್ ದೋಸೆಗೆ ಬೆಲ್ಲಿ ಡಾನ್ಸ್ ಅಭ್ಯಾಸ ಮಾಡುತ್ತಿರುವ, ಉಗ್ರಂ ಬೆಡಗಿ

ನೀರ್ ದೋಸೆಗೆ ಬೆಲ್ಲಿ ಡಾನ್ಸ್ ಅಭ್ಯಾಸ ಮಾಡುತ್ತಿರುವ, ಉಗ್ರಂ ಬೆಡಗಿ

Posted By:
Subscribe to Filmibeat Kannada

ವರ್ಷದಿಂದ ನಿಂತಿದ್ದ 'ನೀರ್ ದೋಸೆ' ಚಿತ್ರಕ್ಕೆ ಚಾಲನೆ ಸಿಕ್ಕಿದೆ, ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಜಾಗಕ್ಕೆ ಹರಿಪ್ರಿಯಾ ಎಂಟ್ರಿ ಪಡೆದುಕೊಂಡಿದ್ದು, ದೋಸೆಗೆ ಮಿರ್ಚಿ ಮಸಾಲೆ ಅರೆಯುವುದಕ್ಕೆ ರೆಡಿ ಆಗಿದ್ದಾರೆ.

ಇನ್ನೇನು ನಿರ್ದೇಶಕ ವಿಜಯ್ ಪ್ರಕಾಶ್ ಆಕ್ಷನ್-ಕಟ್ ಹೇಳುತ್ತಿರುವ 'ನೀರ್ ದೋಸೆ' ಚಿತ್ರದ ಫಸ್ಟ್ ಶೆಡ್ಯೂಲ್ ನ ಶೂಟಿಂಗ್ ಈಗಾಗಲೇ ಮುಕ್ತಾಯಗೊಂಡಿದ್ದು, ಸೆಕೆಂಡ್ ಶೆಡ್ಯೂಲ್ ನ ಶೂಟಿಂಗ್ ಅಕ್ಟೋಬರ್ 26 ರಿಂದ ಪ್ರಾರಂಭವಾಗಲಿದೆ.[ಬಿಸಿ ಬಿಸಿ 'ನೀರ್ ದೋಸೆ'ಗೆ ಮಸಾಲೆ ಹಾಕಿದ ಹರಿಪ್ರಿಯಾ]

Kannada Actress Haripriya to learn Belly Dance for Neer dose

ಮೊಟ್ಟ ಮೊದಲ ಬಾರಿಗೆ ಕ್ಲಬ್ ಡ್ಯಾನ್ಸರ್ ಕಮ್ ಕಾಲ್ ಗರ್ಲ್ ಕುಮುದಾ ಪಾತ್ರ ಮಾಡುತ್ತಿರುವ ಹರಿಪ್ರಿಯಾ ಅವರು ಮೊನ್ನೆ ಮೊನ್ನೆ ಫೊಟೋ ಶೂಟ್ ನಲ್ಲಿ ಭಾಗವಹಿಸಿ ಇದೀಗ ಚಿತ್ರದ ಹಾಡೊಂದಕ್ಕೆ ಬೆಲ್ಲಿ ಡಾನ್ಸ್ ಅಭ್ಯಾಸ ಮಾಡುತ್ತಿದ್ದಾರೆ. ಇಬ್ಬರು ನುರಿತ ಬೆಲ್ಲಿ ಡ್ಯಾನ್ಸರ್ ಗಳು ಈಗಾಗಲೇ ಹರಿಪ್ರಿಯಾ ಅವರಿಗೆ ಬೆಲ್ಲಿ ಡ್ಯಾನ್ಸ್ ಗೆ ಕೊರಿಯೋಗ್ರಫಿ ಮಾಡುತ್ತಿದ್ದಾರೆ.

ಸದಾ ಸಾಂಪ್ರದಾಯಿಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ, ಹರಿಪ್ರಿಯಾ ಅವರು 'ನೀರ್ ದೋಸೆ'ಯಲ್ಲಿ ಸಖತ್ ಹಾಟ್ ಹಾಗೂ ಗ್ಲಾಮರಸ್ ಲುಕ್ ನಲ್ಲಿ ಮಿಂಚಿದ್ದಾರೆ.['ನೀರ್ ದೋಸೆ' ಬಿಡಿ, 'ದೊಡ್ಡ ಮೆಣಸಿನಕಾಯಿ' ಬರುತ್ತೆ ನೋಡಿ!]

ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಅವರು ಪ್ರಮುಖ ಪಾತ್ರ ಮಾಡುತ್ತಿದ್ದು, ಸದ್ಯಕ್ಕೆ ಫಾರಿನ್ ಟೂರ್ ನಲ್ಲಿದ್ದು, ಅಕ್ಟೋಬರ್ 20 ಕ್ಕೆ ವಾಪಸಾಗುತ್ತಿದ್ದಾರೆ. ಆದ್ರಿಂದ 26 ರಿಂದ ಸೆಕೆಂಡ್ ಶೆಡ್ಯೂಲ್ ಶೂಟಿಂಗ್ ಆರಂಭಿಸಲು ಚಿತ್ರತಂಡ ನಿರ್ಧರಿಸಿದೆ.

Kannada Actress Haripriya to learn Belly Dance for Neer dose

ಇನ್ನು 'ನೀರ್ ದೋಸೆಗೆ' ಮಸಾಲೆ ಅರೆಯಲು ಹರಿಪ್ರಿಯಾ ತಯಾರಾದರೆ, ತುಪ್ಪ ಸುರಿಯಲು ಸುಮನಾ ರಂಗನಾಥ್ ರೆಡಿಯಾಗಿದ್ದಾರೆ. ಜೊತೆಗೆ ಜಗ್ಗೇಶ್, ದತ್ತಣ್ಣ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.

ಎಲ್ಲವೂ ಆದಷ್ಟು ಬೇಗ ಮುಗಿದರೆ ಇದೇ ಡಿಸೆಂಬರ್ ತಿಂಗಳಿನಲ್ಲಿ 'ನೀರ್ ದೋಸೆ'ಯನ್ನು ಪ್ರೇಕ್ಷಕರಿಗೆ ಬಡಿಸಲು ನಿರ್ದೇಶಕ ವಿಜಯ್ ಪ್ರಕಾಶ್ ಹಾಗೂ ನಿರ್ಮಾಪಕ ಪ್ರಸನ್ನ ಅವರು ನಿರ್ಧರಿಸಿದ್ದಾರೆ.

English summary
Kannada Actress Haripriya will get training in belly dancing. It was necessary for her to learn belly dancing for a club dance sequence for the movie 'Neer Dose'. The moive features Kannada Actor Jaggesh, Actreess Haripriya, Actress Suman Ranganath in the lead role, Directed by Vijay Prakash.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada