»   » 'ಮಹಾಕಾಳಿ', 'ಗಂಗಾ' ಮಾಲಾಶ್ರೀ ಬಹುಪರಾಕ್

'ಮಹಾಕಾಳಿ', 'ಗಂಗಾ' ಮಾಲಾಶ್ರೀ ಬಹುಪರಾಕ್

Posted By:
Subscribe to Filmibeat Kannada

ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ನಲ್ಲಿ ಭಾರಿ ಬೇಡಿಕೆಯಿದ್ದ ನಟಿ, ಯಾರು ಅಂದ್ರೆ ಅದು ಮಾಲಾಶ್ರೀ ಅಂತಾನೇ ಹೇಳಬಹುದು. 'ಒಳಗೆ ಸೇರಿದರೆ ಗುಂಡು, ಹುಡುಗಿ ಆಗುವಳು ಗಂಡು' ಅಂತ ಹಾಡಿ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದ, ನಟಿ ಮಾಲಾಶ್ರೀ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ.

'ನಜುಂಡಿ ಕಲ್ಯಾಣ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಮಾಲಾಶ್ರೀ ಅವರು 'ಬೆಳ್ಳಿ ಕಾಲುಂಗರ' ಚಿತ್ರದಲ್ಲಿ ಮನೋಜ್ಞ ಅಭಿನಯ ನೀಡಿ ಪ್ರೇಕ್ಷಕರ ಕಣ್ಣಂಚು ಒದ್ದೆ ಮಾಡಿದ್ದರು. ಅಷ್ಟರಮಟ್ಟಿಗೆ ನಟನೆಯಲ್ಲಿ ಸೈ ಎನಿಸಿಕೊಂಡಿರುವ ಗಂಡುಬೀರಿ ಮಾಲಾಶ್ರೀ ಇಂದು 42ನೇ ಜನುಮದಿನವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.

Kannada actress Malashri celebrates her 42nd birthday

1973 ಆಗಸ್ಟ್ 10ರಂದು ತಮಿಳುನಾಡಿನ ಚೆನೈ ನಲ್ಲಿ ಜನಿಸಿದ ಇವರು 1989ರಲ್ಲಿ 'ನಂಜುಂಡಿ ಕಲ್ಯಾಣ' ಚಿತ್ರದಲ್ಲಿ ರಾಜ್ ಕುಡಿ ರಾಘವೇಂದ್ರ ರಾಜ್ ಕುಮಾರ್ ಅವರ ಜೊತೆ 'ನಂಜುಂಡಿ ಕಲ್ಯಾಣ' ಚಿತ್ರದಲ್ಲಿ ನಟಿಸಿ ನಟನಾ ಕ್ಷೇತ್ರದಲ್ಲಿ ಸೈ ಎನಿಸಿಕೊಂಡರು. ['ಮಹಾಕಾಳಿ' ಮಾಲಾಶ್ರೀ ಘರ್ಜನೆ ಬಗ್ಗೆ ವಿಮರ್ಶಕರು ಏನಂತಾರೆ?]

ಗಂಡುಬೀರಿ ಪಾತ್ರಗಳಿಂದ ಹಿಡಿದು ಹೆಂಗರುಳು ಪಾತ್ರ ವಹಿಸುವ ನಟಿ ಮಾಲಾಶ್ರೀ ಅವರು ಸಾಲು-ಸಾಲು ಚಿತ್ರಗಳಲ್ಲಿ ನಟಿಸಿದ್ದಾರೆ.

'ಗಜಪತಿ ಗರ್ವಭಂಗ', 'ಪೊಲೀಸನ ಹೆಂಡ್ತಿ', 'ರಾಣಿ ಮಹಾರಾಣಿ', 'ಹೃದಯ ಹಾಡಿತು', 'ರಾಮಾಚಾರಿ', 'ಗೃಹಪ್ರವೇಶ', 'ಬೆಳ್ಳಿ ಕಾಲುಂಗುರ', 'ಬೆಳ್ಳಿ ಮೋಡಗಳು', 'ಮಾಲಾಶ್ರೀ ಮಾಮಾಶ್ರೀ', 'ಗಡಿಬಿಡಿ ಅಳಿಯ', 'ಚಾಮುಂಡಿ', 'ಶಕ್ತಿ', 'ಕನ್ನಡದ ಕಿರಣ್ ಬೇಡಿ', 'ಎಲೆಕ್ಷನ್', ಮುಂತಾದ ಸಾಲು ಕನ್ನಡ ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಇವರದು.

Kannada actress Malashri celebrates her 42nd birthday

ಮಾತ್ರವಲ್ಲದೇ 1991 ರಲ್ಲಿ ನಡೆದ ಫಿಲಂಫೇರ್ ಆವಾರ್ಡ್ ನಲ್ಲಿ ಅತ್ಯುತ್ತಮ ನಟಿ ಎಂಬ ಪ್ರಶಸ್ತಿ ಹಾಗೂ ಎನ್ ಟಿ ಆರ್ ಪ್ರಶಸ್ತಿಯ ಗರಿಯನ್ನುತಮ್ಮ ಮುಡಿಗೇರಿಸಿಕೊಂಡಿದ್ದಾರೆ.[ಶುಕ್ರವಾರ ಬಿರಿಯಾನಿ ಬಿಟ್ಟ ಆಕ್ಷನ್ ಕ್ವೀನ್ ಮಾಲಾಶ್ರೀ]

ನಟ ಸುನೀಲ್ ಜೊತೆ ಇವರ ಮದುವೆ ಮಾತುಕತೆ ಕೂಡ ನಡೆದಿದ್ದು, ಆದರೆ ಸುನೀಲ್ ಅವರ ಅಕಾಲಿಕ ಮರಣದಿಂದ ಎಲ್ಲವೂ ನಿಂತು ಹೋಗಿತ್ತು. ನಂತರ ನಿರ್ಮಾಪಕ ರಾಮು ಅವರ ಜೊತೆ ಮದುವೆಯಾಗಿ ಸುಂದರ ದಾಂಪತ್ಯ ಜೀವನ ನಡೆಸುತ್ತಿರುವ ದಂಪತಿಗಳಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.

ಇನ್ನೂ 'ಮಹಾಕಾಳಿ', 'ಗಂಗಾ', ಮತ್ತು 'ಮಾಲಾಶ್ರೀ', ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಸದ್ಯದಲ್ಲೇ ತೆರೆ ಕಾಣಲಿದೆ. ಅದೇನೇ ಇರಲಿ ಒಂದು ಕಾಲದಲ್ಲಿ ಅಭಿನಯದಲ್ಲಿ ಉತ್ತುಂಗಕ್ಕೆ ಏರಿದ್ದ ನಟಿ ಮಾಲಾಶ್ರೀ ಅವರಿಗೆ ನಮ್ಮ ಕಡೆಯಿಂದಲೂ ವಿಶ್ ಯೂ ಹ್ಯಾಪಿ ಬರ್ತ್ ಡೇ.

English summary
Kannada actress Malashri celebrated her 42nd birthday Today (August 10)with her family and friends.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada