For Quick Alerts
  ALLOW NOTIFICATIONS  
  For Daily Alerts

  ಮತ್ತೆ ಗುನ್ನ ನೀಡೋಕೆ ಎದ್ದು ನಿಂತ ರಾಗಿಣಿ

  By Harshitha
  |

  ನಟಿ ರಾಗಿಣಿ ದ್ವಿವೇದಿ ಫುಲ್ ಫಿಟ್ ಅಂಡ್ ಫೈನ್ ಆಗಿದ್ದಾರೆ. ತಲೆಗಾದ ಪಟ್ಟಿನಿಂದ ಬಹುಬೇಗ ಚೇತರಿಸಿಕೊಂಡಿರುವ ರಾಗಿಣಿ ಮತ್ತೆ ಶೂಟಿಂಗ್ ಗೆ ಹಾಜರಾಗಿದ್ದಾರೆ.

  ಹೌದು, ನಿನ್ನೆಯಷ್ಟೆ ತಲೆಗೆ ಪೆಟ್ಟು ಮಾಡಿಕೊಂಡು ಮೈಸೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದ ನಟಿ ರಾಗಿಣಿ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಡಿಸ್ಚಾರ್ಜ್ ಅಗಿದ್ದಾರೆ.

  ಏನು ಪ್ರಾಬ್ಲಂ ಇಲ್ಲ ಅಂತ ವೈದ್ಯರು ಹೇಳಿರುವ ಕಾರಣ ಎಂದಿನಂತೆ ಶೂಟಿಂಗ್ ಸೆಟ್ ಗೆ ನಟಿ ರಾಗಿಣಿ ಹಾಜರಾಗಿದ್ದಾರೆ. ಮತ್ತದೇ ಹೊಡಿ ಬಡಿ ದೃಶ್ಯಗಳ ಚಿತ್ರೀಕರಣಕ್ಕೆ ತಾಲೀಮು ನಡೆಸುತ್ತಿದ್ದಾರೆ.

  ಅಸಲಿಗೆ ಆಗಿದ್ದೇನು? ನಟಿ ರಾಗಿಣಿ 'ನಾನೇ...ನೆಕ್ಸ್ಟ್ ಸಿ.ಎಂ' ಚಿತ್ರದ ಶೂಟಿಂಗ್ ನಲ್ಲಿ ಬಿಜಿಯಿದ್ದರು. ಚಿತ್ರದ ಸಾಹಸ ಸನ್ನಿವೇಶಗಳ ಚಿತ್ರೀಕರಣ ನಡೆಯುತ್ತಿತ್ತು. ಮೂರ್ನಾಲ್ಕು ದಾಂಡಿಗರೊಂದಿಗೆ ರಾಗಿಣಿ ಸೆಣಸಾಡಬೇಕಿತ್ತು. [ನಟಿ ರಾಗಿಣಿ ಮೈಸೂರಿನ ವಿಕ್ರಂ ಆಸ್ಪತ್ರೆಗೆ ದಾಖಲು]

  ಆಗ ಅಚಾನಕ್ಕಾಗಿ ರಾಗಿಣಿ ತಲೆಗೆ ಪೆಟ್ಟು ಬಿತ್ತು. ತಕ್ಷಣ ಅವರನ್ನ ಸಮೀಪದ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಯ್ತು. ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ ಬಳಿಕ ರಾಗಿಣಿ ಗುಣಮುಖರಾಗಿದ್ದಾರೆ. ಈ ಬಗ್ಗೆ ರಾಗಿಣಿ ಟ್ವೀಟ್ ಕೂಡ ಮಾಡಿದ್ದಾರೆ.

  ಕೊಂಚ ರೆಸ್ಟ್ ಅಗತ್ಯವಿದ್ದರೂ, ನಿರ್ಮಾಪಕರಿಗೆ ನಷ್ಟ ಅಗಬಾರದು ಅನ್ನುವ ಕಾರಣಕ್ಕೆ ರಾಗಿಣಿ ಇಂದು ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ. ಅನಾರೋಗ್ಯದಲ್ಲೂ ವೃತ್ತಿಪರತೆ ಮೆರೆದಿರುವ ರಾಗಿಣಿ ಬಗ್ಗೆ ನಿರ್ದೇಶಕ ಮುಸ್ಸಂಜೆ ಮಹೇಶ್ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ.

  English summary
  Kannada Actress Ragini Dwivedi is discharged from Vikram Hospital, Mysuru. Ragini Dwivedi was admitted yesterday (Aug 23rd) as she was hurt in the sets of 'Naane..next C.M'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X