»   » ಸದ್ದಿಲ್ಲದೇ ಎಂಗೇಜ್ ಆದ ನಟಿ ರೂಪಶ್ರೀ

ಸದ್ದಿಲ್ಲದೇ ಎಂಗೇಜ್ ಆದ ನಟಿ ರೂಪಶ್ರೀ

Posted By:
Subscribe to Filmibeat Kannada

'ಸಂಕ್ರಾಂತಿ', 'ಜಟಾಯು', 'ಚಡ್ಡಿ ದೋಸ್ತ್', 'ಸಿಗರೇಟ್'...ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ರೂಪಶ್ರೀ ಅವರ ನಿಶ್ಚಿತಾರ್ಥ ನೆರವೇರಿದೆ. ತಮ್ಮ ದೀರ್ಘಕಾಲದ ಗೆಳೆಯ ನೀರಜ್ ಅವರೊಂದಿಗೆ ನಟಿ ರೂಪಶ್ರೀ ಅವರ ಎಂಗೇಜ್ಮೆಂಟ್ ನಡೆದಿದೆ.

ಮದುವೆ ಆಗುವವರೆಗೂ ಯಾವುದೇ ಗಾಸಿಪ್ ಗಳಿಗೆ ಆಹಾರವಾಗಬಾರದು ಅನ್ನುವ ಕಾರಣಕ್ಕೆ ನಟಿ ರೂಪಶ್ರೀ, ತಮ್ಮ ನಿಶ್ವಿತಾರ್ಥದ ವಿಚಾರವನ್ನ ಬಹಿರಂಗಗೊಳಿಸಿರಲಿಲ್ಲ. ಅಸಲಿಗೆ ಇಷ್ಟು ಬೇಗ ಮದುವೆಯಾಗುವುದು ರೂಪಶ್ರೀ ಅವರಿಗೆ ಇಷ್ಟವಿರಲಿಲ್ಲವಂತೆ. ತಾಯಿಯ ಬಲವಂತಕ್ಕೆ ಮಣಿದು ಬೇಗ ಮದುವೆಯಾಗುವುದಕ್ಕೆ ಒಪ್ಪಿಕೊಂಡಿದ್ದಾರೆ.

roopashri

ಕಳೆದ ಕೆಲ ವರ್ಷಗಳಿಂದ ನೀರಜ್ ಮತ್ತು ರೂಪಶ್ರೀ ಆಪ್ತ ಸ್ನೇಹಿತರು. ಮಾಧ್ಯಮ ರಂಗದಲ್ಲಿ ಗುರುತಿಸಿಕೊಂಡಿರುವ ಕೋಲ್ಕತ್ತಾ ಮೂಲದ ಉದ್ಯಮಿ ನೀರಜ್. ಸ್ನೇಹಿತರ ಮುಖಾಂತರ ರೂಪಶ್ರೀಗೆ ನೀರಜ್ ಪರಿಚಯವಾಗಿ, ಪರಿಚಯ ಸ್ನೇಹವಾಗಿ, ಪ್ರೀತಿಗೆ ತಿರುಗಿದ ಪರಿಣಾಮ ಹೊಸ ಜೀವನಕ್ಕೆ ಈ ಜೋಡಿ ಅಡಿಯಿಡುತ್ತಿದ್ದಾರೆ.

roopashri

ಸ್ಯಾಂಡಲ್ ವುಡ್ ನಲ್ಲಿ ಇನ್ನೂ ಅಂಬೆಗಾಲಿಡುತ್ತಿರುವ ರೂಪಶ್ರೀ, ಮದುವೆಯ ನಂತ್ರವೂ ಬಣ್ಣ ಹಚ್ಚುವುದನ್ನ ಮುಂದುವರಿಸುತ್ತಾರಂತೆ. ಬೆಂಗಾಲಿ ಚಿತ್ರಗಳಲ್ಲೂ ನಟಿಸುವುದಕ್ಕೆ ನೀರಜ್ ಕುಟುಂಬದ ಸಪೋರ್ಟ್ ಇದ್ಯಂತೆ. ಸದ್ಯಕ್ಕೆ ಜೋಡಿ ಎಂಗೇಜ್ ಆಗಿದ್ದು, ಇಬ್ಬರು ಹಸೆಮಣೆ ಏರುವುದು ಈ ವರ್ಷದ ಕೊನೆಯಲ್ಲಿ. (ಫಿಲ್ಮಿಬೀಟ್ ಕನ್ನಡ)

English summary
Kannada Actress Roopashri engaged to her long-term boyfriend Neeraj. The couple will be tying knot by the end of this year.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada