For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಸಿಂಗ್ ರೀತಿ ನೇಣು ಹಾಕಿಕೊಂಡು ಸಾಯಬೇಕಾ? ಸಂಜನಾ ಗರಂ

  |

  ''ಎಷ್ಟು ಅಂತ ತೊಂದರೆ ಕೊಡ್ತೀರಾ ನನಗೆ, ಒಂದೇ ವಿಚಾರವನ್ನು ಎಷ್ಟೂ ಅಂತ ಮಾತನಾಡೋಣ. ಹೀಗೆ ಮಾಡ್ತಿದ್ರೆ ಸುಶಾಂತ್ ಸಿಂಗ್ ರೀತಿ ನೇಣು ಹಾಕಿಕೊಂಡು ಸಾಯಬೇಕಾಗುತ್ತೆ'' ಎಂದು ನಟಿ ಸಂಜನಾ ಗಲ್ರಾನಿ ಮಾಧ್ಯಮದವರ ವಿರುದ್ಧ ಗರಂ ಆಗಿದ್ದಾರೆ.

  Recommended Video

  Sanjjanaa Galrani ಮಾಧ್ಯಮದವರ ಮೇಲೆ ಗರಂ ಆಗಿದ್ದೇಕೆ ? | Filmibeat Kannada

  ಡ್ರಗ್ಸ್ ಜಾಲದಲ್ಲಿ ಸಿನಿಮಾ ನಟಿಯರು ನಂಟು ಹೊಂದಿದ್ದಾರೆ ಎಂಬ ಆರೋಪದಡಿ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು ಈಗಾಗಲೇ ರಾಗಿಣಿ ದ್ವಿವೇದಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.

  ಡ್ರಗ್ಸ್ ವಿವಾದ: ಸ್ಯಾಂಡಲ್ ವುಡ್‌ ನಟಿಯರ ಆಪ್ತರೇ ಮೊದಲ ಟಾರ್ಗೆಟ್!ಡ್ರಗ್ಸ್ ವಿವಾದ: ಸ್ಯಾಂಡಲ್ ವುಡ್‌ ನಟಿಯರ ಆಪ್ತರೇ ಮೊದಲ ಟಾರ್ಗೆಟ್!

  ಈ ಪ್ರಕರಣದಲ್ಲಿ ಸಂಜನಾ ಅವರ ಆಪ್ತ ವ್ಯಕ್ತಿ ರಾಹುಲ್ ಎನ್ನುವರನ್ನು ಬಂಧಿಸಲಾಗಿದ್ದು, ನಟಿಯ ಹೆಸರು ತಳುಕುಹಾಕಿಕೊಂಡಿದೆ. ಈ ಕುರಿತು ಸ್ಪಷ್ಟನೆ ಕೇಳಲು ಹೋದ ಮಾಧ್ಯಮದವರ ಬಳಿ ಸಂಜನಾ ಗರಂ ಆಗಿದ್ದಾರೆ. ಮುಂದೆ ಓದಿ....

  ಹೀಗೆ ಮಾಡ್ತಿದ್ರೆ ನಾನು ನೇಣು ಹಾಕಿಕೊಂಡು......

  ಹೀಗೆ ಮಾಡ್ತಿದ್ರೆ ನಾನು ನೇಣು ಹಾಕಿಕೊಂಡು......

  ''ಸ್ಯಾಂಡಲ್ ವುಡ್ ಇಂಡಸ್ಟ್ರಿ ಅಂತಹ ಹೆಸರು ತರಬೇಡಿ. ನಾನು ಇದರಲ್ಲಿ ಭಾಗಿಯಾಗಿಲ್ಲ, ಸುಮ್ಮನೆ ನನ್ನನ್ನು ಏಕೆ ಕೇಳ್ತೀರಾ, ಎಷ್ಟು ಅಂತ ತೊಂದರೆ ಕೊಡ್ತೀರಾ ನನಗೆ, ಒಂದೇ ವಿಚಾರವನ್ನು ಎಷ್ಟೂ ಅಂತ ಮಾತನಾಡೋಣ. ಹೀಗೆ ಮಾಡ್ತಿದ್ರೆ ಸುಶಾಂತ್ ಸಿಂಗ್ ರೀತಿ ನೇಣು ಹಾಕಿಕೊಂಡು ಸಾಯಬೇಕಾ? ಎಂದು ನಟಿ ಸಂಜನಾ ಗರಂ ಆದರು.

  ರಾಹುಲ್ ನನಗೆ ಪರಿಚಯ

  ರಾಹುಲ್ ನನಗೆ ಪರಿಚಯ

  'ರಾಹುಲ್ ನನಗೆ ಗೊತ್ತಿರುವ ಹುಡುಗ. ಮೂರು ವರ್ಷದಿಂದ ಪರಿಚಯ. ಕಾಮನ್ ಸ್ನೇಹಿತರ ಮೂಲಕ ಪರಿಚಯ ಅಷ್ಟೇ. ಇದುವರೆಗೂ ಸಿಸಿಬಿಯಿಂದ ನನಗೆ ಯಾವುದೇ ನೋಟಿಸ್ ಅಥವಾ ನನ್ನನ್ನು ಸಂಪರ್ಕ ಮಾಡಿಲ್ಲ. ಒಂದು ವೇಳೆ ನನಗೆ ಕರೆದರೂ ಕಾನೂನಿನ ಪ್ರಕಾರ ನಾನು ಭಾಗಿಯಾಗುತ್ತೇನೆ, ಇದರಲ್ಲಿ ಯಾವುದೇ ತಪ್ಪಿಲ್ಲ' ಎಂದು ಸ್ಪಷ್ಟನೆ ನೀಡಿದ್ದಾರೆ.

  ತೆಲುಗು ನಟನ ಜೊತೆ ನಟಿ ಸಂಜನಾ ಗಲ್ರಾನಿ ಸಹೋದರಿ ಡೇಟಿಂಗ್?ತೆಲುಗು ನಟನ ಜೊತೆ ನಟಿ ಸಂಜನಾ ಗಲ್ರಾನಿ ಸಹೋದರಿ ಡೇಟಿಂಗ್?

  ನಾನೇನು ಹೊಸ ನಾಯಕಿ ಅಲ್ಲ

  ನಾನೇನು ಹೊಸ ನಾಯಕಿ ಅಲ್ಲ

  ಹೊಸ ನಟಿಯರು ಭಾಗಿಯಾಗಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ಹೇಳಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಂಜನಾ ''ನಾನು ಹೊಸ ನಾಯಕಿ ಅಲ್ಲ, ನಾನು 50 ಸಿನಿಮಾ ಮಾಡಿದ್ದೀನಿ. ನಾನು ಹಳೆ ನಾಯಕಿ. ಪ್ರಭಾಸ್, ಪವನ್ ಕಲ್ಯಾಣ್ ಜೊತೆ ಸಿನಿಮಾ ಮಾಡಿದ್ದೀನಿ. ನನಗೂ ಇದಕ್ಕೂ ಸಂಬಂಧವಿಲ್ಲ. ಈ ಬಗ್ಗೆ ನಾನು ಏಕೆ ಮಾಡಬೇಕು'' ಎಂದು ಪ್ರಶ್ನಿಸಿದ್ದಾರೆ.

  ಪ್ರಶಾಂತ್ ಸಂಬರ್ಗಿ ಹೇಳಿಕೆಗೆ ತಿರುಗೇಟು

  ಪ್ರಶಾಂತ್ ಸಂಬರ್ಗಿ ಹೇಳಿಕೆಗೆ ತಿರುಗೇಟು

  ಸಂಜನಾ ಬಗ್ಗೆ ಮಾತಾಡಿ ನನ್ನ ಬಾಯಿ ಗಲೀಜು ಮಾಡಿಕೊಳ್ಳಲ್ಲ ಎಂದು ಹೇಳಿದ್ದ ಪ್ರಶಾಂತ್ ಸಂಬರ್ಗಿಗೆ ನಟಿ ಸಂಜನಾ ತಿರುಗೇಟು ನೀಡಿದ್ದಾರೆ. ''ಅವರು ಹೆಸರು ಸಹ ನನಗೆ ಗೊತ್ತಿಲ್ಲ. ಬೀದಿ ನಾಯಿಗೂ ನಾನು ಗೌರವ ಕೊಡ್ತೀನಿ, ಆದರೆ, ಆ ಮನುಷ್ಯನಿಗೆ ಕೊಡಲ್ಲ. ನೀವು ಮಾಧ್ಯಮದವರೇ ಅವನಿಗೆ ಪ್ರಚಾರ ಕೊಡ್ತಿದ್ದೀರಾ'' ಎಂದು ಕಿಡಿಕಾರಿದರು.

  English summary
  Drugs in Sandalwood: Kannada actress Sanjana outrage against kannada media.
  Friday, September 4, 2020, 15:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X